ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿ

KannadaprabhaNewsNetwork |  
Published : Jun 11, 2026, 01:30 AM IST
09ಕ್ದಕಜದ್ಜಕಕಜ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುನಗುಂದನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುನಗುಂದ

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ಆಗ್ರಹಿಸಿದ್ದಾರೆ.

ನಗರದ ಅಮರಾವತಿ ರಸ್ತೆಯ ಗಾಣಿಗ ಸಮಾಜದ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಸಾರ್ವತ್ರಿಕ ಚುನಾವಣೆ ಬಿಜೆಪಿ ತೊರೆದು ಕಾಂಗ್ರೆಸ ಪಕ್ಷ ಸೇರಿ ಅಥಣಿ ಮತಕ್ಷೇತ್ರದಿಂದ 70 ಸಾವಿರ ಮತಗಳ ಅಂತರದಿಂದ ಮತ ಪಡೆದು ಸವದಿ ಗೆದ್ದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಲಕ್ಷಣ ಸವದಿ ಅವರು 30 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗಾಣಿಗ ಮತ ಹಾಕಿಸಿಲು ಶ್ರಮಿಸಿದ್ದಾರೆ ಎಂದರು.

ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಲಾಗಲೋಟಿ ಮಾತನಾಡಿ, ಬಿಜೆಪಿಯಲ್ಲಿ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದವರು ಲಕ್ಷ್ಮಣ ಸವದಿಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಹಲವು ಭರವಸೆ ನೀಡಿದ್ದರು. ಬಳಿಕ ಭಾರಿ ಅಂತದಲ್ಲಿ ಚುನಾವಣೆಯಲ್ಲಿ ಜಯಗಳಿಸಿದ್ದ ಸವದಿ ಅವರಿಗೆ ಮೊದಲನೆಯ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕಿತ್ತು. ಆದರೆ, ಇದುವರೆಗೆ ಸಚಿವ ಸ್ಥಾನ ನೀಡಿಲ್ಲ, ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಗಾಣಿಗ ಸಮಾಜದವರು ಇದ್ದಾರೆ. ಸಮುದಾಯದ ಹಿತದೃಷ್ಟಿ ಹಾಗೂ ಕಾಂಗ್ರೆಸ್ ಪಕ್ಷದ ಭವಿಷ್ಯದ ಕಾರಣಕ್ಕೆ ಕೂಡಲೇ ಸಚಿವ ಸ್ಥಾನ ನೀಡಬೇಕು. ಮಂತ್ರಿ ಮಂಡಲದಲ್ಲಿ ಅಥಣಿ ಶಾಸಕರಾದ ಲಕ್ಷ್ಮಣ ಸವದಿ, ಬಿ.ಕೆ.ಸಂಗಮೇಶ ಅವರನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ನೀಡಿದ ಮಾತಿಗೆ ಬದ್ಧರಾಗಿ ಸವದಿ ಅವರಿಗೆ 2ನೇ ಪಟ್ಟಿಯಲ್ಲಾದರೂ ಸಚಿವ ಸ್ಥಾನ ನೀಡಬೇಕು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಸಮಾಜದ ಸಿದ್ದು ನ್ಯಾಮಗೌಡ ಅವರಿಗೆ ಕೇಂದ್ರ ಸಚಿವ ಸ್ಥಾನ ಕೊಟ್ಟಿದ್ದು, ಬಿಟ್ಟರೇ ಯಾರಿಗೂ ನೀಡಿರುವುದಿಲ್ಲ. ಸಂಪುಟ ದರ್ಜೆಯಲ್ಲಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಸಮಾಜದ ಮುಖಂಡ ಮಲ್ಲಪ್ಪ ನಿಡಶೇಶಿ ಮಾತನಾಡಿ, ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಡಿ.ಕೆ.ಶಿವಕುಮಾರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ನಿಂಗಪ್ಪ ಅಮರಾವತಿ, ಕಾರ್ಯದರ್ಶಿ ಜಗದೀಶ ಹೊಸಮನಿ ಮಾತನಾಡಿದರು. ಶ್ರೀನಿವಾಸ ಲೂಟಿ, ಮುತ್ತಣ್ಣ ಮುರಾಳ, ವೀರನಗೌಡ ಮೇಟಿ, ವೀರುಪಾಕ್ಷಿ ಮುಚಖಂಡಿ, ಗುರುಲಿಂಗಪ್ಪ ಇಂಗಳಗೇರಿ, ಪಿ.ಐ.ಮುಚಖಂಡಿ, ಹನಮಗೌಡ ಹೊಸಮನಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವೆಗೆ ಬಂದು ರೈತರಿಗೆ ಹೆದರಿ ಕಾಲ್ಕಿತ್ತ ಅಧಿಕಾರಿಗಳು!
ಕೃಷ್ಣೆಗೆ ಹರಿದು ಬಂತು ಮಹಾನೀರು: ಜನತೆಯಲ್ಲಿ ಮೂಡಿದ ಸಂತಸ