ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಿ: ಸೋಮಶೇಖರಗೌಡ

KannadaprabhaNewsNetwork |  
Published : Jul 26, 2024, 01:39 AM IST
25ಉಳಉ2 | Kannada Prabha

ಸಾರಾಂಶ

ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು.

ನಲಿ ಕಲಿ ಪೀರೋಪಕರಣ ಮತ್ತು ಕಲಿಕೋಪಕರಣ ಅನಾವರಣ ಕಾರ್ಯಕ್ರಮದಲ್ಲಿ ಡೈಯಟ್‌ನ ಹಿರಿಯ ಉಪನ್ಯಾಸಕ

ಕನ್ನಡಪ್ರಭ ವಾರ್ತೆ ಗಂಗಾವತಿ

ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಬೇಕೆಂದು ಮುನಿರಾಬಾದ್ ಡೈಯಟ್‌ನ ಹಿರಿಯ ಉಪನ್ಯಾಸಕ ಸೋಮಶೇಖರ್‌ಗೌಡ ಪಾಟೀಲ್ ಹೇಳಿದರು.ಇಲ್ಲಿಯ ವಿರುಪಾಪುರದ ಎಚ್.ಆರ್.ಜಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿ ಕಲಿ ಪೀರೋಪಕರಣ ಮತ್ತು ಕಲಿಕೋಪಕರಣ ಅನಾವರಣಗೊಳಿಸಿ ಮಾತನಾಡಿದರು.

ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ಕೊಡಬೇಕು. ಈ ಶಾಲೆ ಎಲ್ಲ ಸೌಕರ್ಯ ಹೊಂದಿದ್ದು, ಮಕ್ಕಳ ದಾಖಲಾತಿಯಂತೆ ಹಾಜರಾತಿ ಕೂಡ ಇರುವುದು ಕಲಿಕಾ ವಾತಾವರಣದ ಪೂರಕವಾಗಿರುವುದಕ್ಕೆ ಸಾಕ್ಷಿಯಾಗಿದೆ. ಮುಖ್ಯ ಗುರುಗಳ ಪರಿಶ್ರಮ ಚೆನ್ನಾಗಿದ್ದು, ಶಾಲೆಗೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು ಹೇಳಿದರು.

ಈ ತರಗತಿ ಶಿಕ್ಷಕರು ಕೂಡ ಉತ್ತಮ ಬೋಧನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಈ ಶಾಲೆ ನಗರದಲ್ಲಿ ವಿಶೇಷ ಶಾಲೆಯಾಗಿದೆ. ಇಲ್ಲಿ ಕಲಿಯುವವರು ಎಲ್ಲ ದಲಿತ ಮತ್ತು ಹಿಂದುಳಿದ ಕುಟುಂಬದಿಂದ ಬಂದ ಮಕ್ಕಳಾಗಿವೆ. ಶಾಲೆಯಲ್ಲಿ ಕಲಿಕೆ ಉತ್ತಮವಾಗಿದ್ದು, ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ತಯಾರಿ ಮಾಡುವಂತೆ ಸಲಹೆ ನೀಡಿದರು.

ಮುಖ್ಯ ಗುರು ಶರಣಪ್ಪ ಹಕ್ಕಂಡಿ ಸಂಘಟನೆಯ ಜೊತೆಗೆ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಶೈಕ್ಷಣಿಕ ಪ್ರಗತಿಗಾಗಿ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಎಲ್ಲ ಸರಕಾರಿ ಶಾಲೆಗಳು ಈ ರೀತಿ ಆಗಬೇಕು ಎಂದು ಹೇಳಿದರು.

ಶಾಲೆಗೆ ನಲಿ ಕಲಿ ಟೇಬಲ್ ಮತ್ತು ಚೇರುಗಳನ್ನು ದಾನವಾಗಿ ನೀಡಿರುವ ಬೇತಲ್ ಶಾಲೆಯ ಮುಖ್ಯಸ್ಥೆ ಹೇಮಾ ಅವರನ್ನು ಅಭಿನಂದಿಸಿದರು.

ಈ ಸಂದರ್ಭ ಅಕ್ಷರ ದಾಸೋಹದ ಅಧಿಕಾರಿ ಸುರೇಶ್‌ಗೌಡ, ಬಿಆರ್‌ಸಿ ಆಗಿರುವ ಮಂಜುನಾಥ್, ಗಂಗಾವತಿಯ ವಲಯದ ಶಿಕ್ಷಣ ಸಂಯೋಜಕ ರಾಘವೇಂದ್ರ, ಶಿಕ್ಷಣ ಪ್ರೇಮಿ ವೀರೇಶ್ ಸುಳೆಕಲ್ ಹಿರೇಜಂತಕಲ್, ಕ್ಲಸ್ಟರ್‌ನ ಸಿಆರ್‌ಪಿಗಳಾದ ದೇವೇಂದ್ರ, ದೇವಣ್ಣ ನಾಯಕ, ಮುಕ್ಕಣ್ಣ, ರಾಮಣ್ಣನವರು ಹಾಗೂ ಶಾಲೆಯ ನಿವೃತ್ತ ಶಿಕ್ಷಕ ಶಿವಪ್ರಸಾದ್ ಹಿರೇಮಠ ಮತ್ತು ಶಾಲೆಯ ಶಿಕ್ಷಕಿಯರಾದ ಶ್ರೀದೇವಿ ಹಟ್ಟಿ, ಆಶಾರಾಣಿ ಸಿ.ಎನ್., ಎಸ್‌ಡಿಎಂಸಿಯ ಉಪಾಧ್ಯಕ್ಷೆ ಬಾನುಬೇಗಮ್, ಸದಸ್ಯರಾದ ಝರೀನಾ, ಸೌಮ್ಯ ಹಾಗೂ ಹಿರೇಜಂತಕಲ್ ಕ್ಲಸ್ಟರ್‌ನ ಎಲ್ಲ ಮುಖ್ಯ ಗುರುಗಳು, ಸಹ ಶಿಕ್ಷಕರು ಭಾಗವಹಿಸಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ