ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವೇದಿಕೆ ಕಾರ್ಯಕ್ರಮಗಳಲ್ಲಿ ಕವಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಈ ನೆಲದ ಕವಿಗಳು ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಕರ್ನಾಟಕ ಜನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ ಹೇಳಿದರು.ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಶ್ರೀರಂಗ ವೇದಿಕೆಯಲ್ಲಿ ದಸರಾ ಅಂಗವಾಗಿ ನಡೆದ ಪ್ರಧಾನ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುವ ವೇಳೆ ವೇದಿಕೆಯಲ್ಲಿ ಕವಿಗೋಷ್ಠಿಗೆ ನೀಡಿದ್ದ ಸಮಯದಲ್ಲೇ ಬೇರೊಂದು ಕಾರ್ಯಕ್ರಮದ ಸಿದ್ಧತೆ ಮಾಡಿಕೊಳ್ಳುತ್ತಿದ್ದುದ್ದರಿಂದ ಬೇಸರಗೊಂಡರು.
ಮುಂದಿನ ಕವಿಗೋಷ್ಠಿ ಆಯೋಜಿಸುವವರು ನಿಗದಿತ ಸಮಯಕ್ಕೆ ಪ್ರಾರಂಭಿಸುವ ಜೊತೆಗೆ ಹೆಚ್ಚಿನ ಕವಿಗಳಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು. ಆಹ್ವಾನ ಪತ್ರಿಕೆಯಲ್ಲಿ ಕವಿಗೋಷ್ಠಿಗೆ ಸಮಯ ನೀಡಿ ಬೇರೆಯವರಿಗೆ ಆದ್ಯತೆ ಕೊಡುವುದು ಕವಿಗಳಿಗೆ ಮಾಡುವ ಅವಮಾನ. ಇದನ್ನು ಮುಂದಿನ ಅಖಿಲ ಭಾರತ ಸಮ್ಮೇಳನದಲ್ಲಿ ಖಂಡಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಡಾ.ಮೀರಾಶಿವಲಿಂಗಯ್ಯ ಮಾತನಾಡಿ, ಜೀವನದ ಮಹತ್ವ, ವಿಶ್ವದ ನಿಗೂಢತೆಯ ಅರಿವನ್ನುಂಟು ಮಾಡುವುದು ಕಾವ್ಯವಾಗಿದೆ. ಸಾಹಿತ್ಯದ ಅಸ್ತಿತ್ವ ಹಾಗೂ ಮೂಲಗುಣ ಕಾವ್ಯದಲ್ಲಿ ಅಡಗಿದೆ ಎಂದರು.
ಸಾಹಿತ್ಯ ಎನ್ನುವುದು ಒಂದು ಸೃಜನಶೀಲತೆ, ದೇಶಿಯ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಜಾಗೃತಿಗೊಳಿಸುವಂತಹ ಮಹಾಚೇತನ ಶಕ್ತಿಯಾಗಿದೆ. ಕವಿ ತನ್ನ ಕಾವ್ಯದಲ್ಲಿ ಒಂದು ಗಾಢ ಅನುಭೂತಿಯನ್ನು ಬರೆದಿರುತ್ತಾರೆ. ಸಾಮಾನ್ಯವಾದ ಸರಳ ಚಿತ್ರ, ವಿಶೇಷ ಘಟನೆಗಳನ್ನು ಮಾತೃಭಾಷೆಯಲ್ಲಿ ಹೊರಗೆ ಬಂದಾಗ ಮಾತ್ರ ಕವಿಯ ಕವ್ಯ ರಚನೆ ಅಮೋಘವಾಗಿರುತ್ತದೆ ಎಂದು ತಿಳಿಸಿದರು.ತಾಲೂಕ ಕಸಾಪ ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, ಸಮಾಜದ ಬದಲಾವಣೆ ಕವಿಗಳಿಂದಲೇ ಆಗಬೇಕು. ಕವಿಗಳು ಬೆಳೆದು ಮುಂದೆ ಬಂದರೆ ಪ್ರಪಂಚ ತಾನಾಗಿಯೇ ಬದಲಾವಣೆ ಆಗುತ್ತದೆ. ಸಮಾಜವನ್ನು ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡು ಹೋಗುವುದಕ್ಕೆ ಕವಿಗಳು ಮುಖ್ಯ ಕಾರಣೀಕರ್ತರು ಎಂದು ಹೇಳಿದರು.
ಯುವ ಕವಿಗೋಷ್ಠಿಯಲ್ಲಿ ಮದ್ದೂರು ಅನನ್ಯ, ನಾಗಮಂಗಲ ಮಹದೇವಸ್ವಾಮಿ, ಕೋಡಾಲ ಅಪೇಕ್ಷ, ಚೋಕನಹಳ್ಳಿ ಜಯರಾಮು, ಅಲ್ಲಾಪಟ್ಟಣ ಸತೀಶ್, ಶ್ರೀನಿವಾಸ ಅಗ್ರಹಾರದ ಪೂಜಾ, ಕೆ.ಆರ್ ಪೇಟೆ ಸಹನ, ಬೆಟ್ಟಹಳ್ಳಿ ಜೆ. ರಮೇಶ್, ನಾಗಮಂಗಲ ದೇವಾನಂದ, ಕೆ.ಆರ್.ಎಸ್ ಕಟ್ಟೇ ಕೃಷ್ಣಸ್ವಾಮಿ, ಸುಬ್ಬುಲಕ್ಷ್ಮೀ ಎಚ್.ಸಿ, ಆರ್.ಕೆ.ನಾಗರಾಜು, ಬಲ್ಲೇನಹಳ್ಳಿ ದಾಸ ಪ್ರಕಾಶ್, ಆದಿತ್ಯಭಾರಧ್ವಾಜ್, ಸಿ. ಸ್ವಾಮಿಗೌಡ ಸಾಲುಮರದ ನಾಗರಾಜು, ಪರಿಸರ ರಮೇಶ್, ಕಲ್ಲೇರಪುರ ಚುಂಚಣ್ಣ, ಕೆ. ಶೆಟ್ಟಿಹಳ್ಳಿ ರಾಜಶೇಖರ್, ಹರವು ಲೋಕೇಶ್ ಸೇರಿದಂತೆ ಇತರರು ಕವಿತೆ ವಾಚಿಸಿದರು.ಪ್ರಧಾನ ಗೋಷ್ಠಿಯಲ್ಲಿ ಅರಕೆರೆ ಮಂಜುಳ ರಮೇಶ್, ಕೆ. ಎನ್. ಪುರುಷೋತ್ತಮ್, ಅಶ್ವಿನಿ.ವಿ.ಎ, ಸಾ.ವೇ.ರ ಸ್ವಾಮಿ, ಗಣಂಗೂರು ನಂಜೇಗೌಡ, ದೋ.ಚಿ.ಗೌಡ, ಕೆ.ಎಲ್. ಶುಭಾಮಾಣಿ ನಾ.,ರೈತ ನಾಗತಿಹಳ್ಳಿ, ಎಚ್.ಆರ್. ತ್ರಿವೇಣಿ, ರಂಗನಾಥ, ಶ್ವೇತಾ, ಕಾಳೇಹಳ್ಳಿ ಪುಟ್ಟೇಗೌಡ,ಕೆ.ಪಿ. ಮೃತ್ಯುಂಜಯ, ಎಂ.ಕೆ. ಸಿಂಚನ, ಸಿ.ಬಿ. ಉಮಾಶಂಕರ್, ದಸರಗುಪ್ಪೆ ಚೈತ್ರ, ಕೆ.ಬಿ. ಜಯರಾಮು, ಶ್ರೀರಂಗಪಟ್ಟಣ ಎಚ್.ಎಸ್. ಭರತ್ ಕುಮಾರ್, ಪುಟ್ಟಸ್ವಾಮಿ ಎಚ್.ಎನ್, ಯಮದೂರು ಮಹಾಲಿಂಗಯ್ಯ, ಡಿ.ವಿ ಪ್ರಮೋದ್, ಕಾಡು ಬೋರಣ್ಣ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ಕುಮಾರ್, ಬಿಇಒ ಆರ್.ಪಿ. ಮಹೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ಸಾಹಿತಿ ಸತೀಶ್ ಟಿ. ಜವರೇಗೌಡ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರ್, ಪ್ರಧಾನ ಕಾರ್ಯದರ್ಶಿ ವಿ. ಹರ್ಷ ಪಣ್ಣೆದೊಡ್ಡಿ, ನೌಕರರ ಸಂಘ ಅಧ್ಯಕ್ಷರು ಸಿ.ಜೆ..ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.ಶಾಸಕ ರಮೇಶ್ ಬಂಡಿಸಿದ್ದೇಗೌಡ ಪ್ರಧಾನ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.