- ಎಚ್.ಆಂಜನೇಯ ಅಭಿಮಾನಿ ಬಳಗದ ಮುಖಂಡ ಎಚ್.ಎನ್.ನಾಗರಾಜ್ - - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಆಂಜನೇಯ ಅವರು ದೃಢವಾಗಿ ಪಕ್ಷದ ಒಗ್ಗಟ್ಟಿಗೆ ಬಲ ತುಂಬಲು ಸದಾ ಸಿದ್ಧರಾಗಿರುವರು. ಅವರಿಗೆ ವಿಧಾನ ಪರಿಷತ್ತು ಚುನಾವಣೆ ಅಭ್ಯರ್ಥಿಯನ್ನಾಗಿ ಪರಿಗಣಿಸಬೇಕು ಎಂದರು.
ಬಾಲ್ಯದಿಂದಲೇ ಕಾಂಗ್ರೆಸ್ ಅಭಿಮಾನಿಯಾಗಿ, ನಂತರ ಪಕ್ಷದ ಕಾರ್ಯಕರ್ತನಾಗಿ, ದಾವಣಗೆರೆ ನಗರಸಭೆ ಸದಸ್ಯ, ಸೇವಾದಳದ ಅಧ್ಯಕ್ಷ, ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿ ಹಲವಾರು ಜನಪರ ಯೋಜನೆ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆ ಆಂಜನೇಯ ಅವರ ಸೇವೆಯನ್ನು ಪಕ್ಷದ ಹೈಕಮಾಂಡ್ ಗುರುತಿಸಬೇಕು ಎಂದರು.ನಗರಸಭೆ ಮಾಜಿ ಸದಸ್ಯ ಎಂ.ಬಿ. ಅಣ್ಣಪ್ಪ ಮಾತನಾಡಿ, ವಿಧಾನ ಪರಿಷತ್ 11 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ೭ ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಅದರಲ್ಲಿ ಒಂದು ಸ್ಥಾನ ಪರಿಶಿಷ್ಟ ಜಾತಿಯ ಕೋಟಾದಲ್ಲಾಗಲಿ ಅಥವಾ ಆದ್ಯತೆಯ ಮೇಲಾಗಲಿ ಎಚ್.ಆಂಜನೇಯರಿಗೆ ನೀಡಬೇಕು ಎಂದರು.
ಬಳಗದ ಕೆ.ಎಸ್. ಅಬ್ದುಲ್ಲಾ, ಕೆಂಚಪ್ಪ, ಹಬೀಬುಲ್ಲಾ ಬೇಗ್, ನಗರಸಭೆ ನಾಮ ನಿರ್ದೇಶೀತ ಸದಸ್ಯ ಸಂತೋಷ್, ಪಿ.ಎನ್.ಆನಂದ, ಎಂ.ಎಚ್. ತಿಪ್ಪೇಸ್ವಾಮಿ ಇತರರಿದ್ದರು.
ಹರಿಹರದಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಎಚ್.ಆಂಜನೇಯ ಅಭಿಮಾನಿ ಬಳಗದ ಮುಖಂಡರು ಸುದ್ದಿಗೋಷ್ಠಿ ನಡೆಸಿ, ವಿಪ ಟಿಕೆಟ್ ನೀಡಲು ಒತ್ತಾಯಿಸಿದರು.