ಮೌಢ್ಯ ಕಂದಚಾರ ಬಿಟ್ಟು, ಶಿಕ್ಷಣಕ್ಕೆ ಆದ್ಯತೆ ನೀಡಿ

KannadaprabhaNewsNetwork |  
Published : Sep 14, 2026, 01:30 AM IST
೧೩ಶಿರಾ೩: ಶಿರಾ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀ ರಾಧಾಕೃಷ್ಣ ಗೊಲ್ಲಬಳಗ ಯುವಕರು ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಶಾಸಕ ಟಿ.ಬಿ.ಜಯಚಂದ್ರ, ಶ್ರೀ ಬಸವ ರಮಾನಂದ ಸ್ವಾಮೀಜಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಮೌಢ್ಯ, ಕಂದಚಾರ ಬಿಟ್ಟು, ಕಾಡುಗೊಲ್ಲ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದಾಗ ಕಾಡುಗೊಲ್ಲ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ವನಕಲ್ಲು ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಬಸವ ರಮಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಮೌಢ, ಕಂದಚಾರ ಬಿಟ್ಟು, ಕಾಡುಗೊಲ್ಲ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದಾಗ ಕಾಡುಗೊಲ್ಲ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ವನಕಲ್ಲು ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಬಸವ ರಮಾನಂದ ಸ್ವಾಮೀಜಿ ಹೇಳಿದರು.

ಶಿರಾ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀ ರಾಧಾಕೃಷ್ಣ ಗೊಲ್ಲಬಳಗ ಯುವಕರು ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕಾಡುಗೊಲ್ಲ ಸಮುದಾಯಕ್ಕೆ ಐದು ತಲೆಮಾರಿನಿಂದ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ತಾತ, ಮುತ್ತಾತನ ಹೆಸರಿನಲ್ಲಿರುವ ಆಸ್ತಿಗಳಿಗೆ ಪೋಡಿ ಮುಕ್ತ ಮಾಡಲು ಸರಕಾರ ವಿಶೇಷ ತಹಸೀಲ್ದಾರನ್ನು ನೇಮಿಸಿ ಸಮಸ್ಯೆಯನ್ನು ನಿವಾರಣೆ ಮಾಡಬೇಕು . ರಾಜ್ಯದಲ್ಲಿರುವ ಅಲೆಮಾರಿ, ಅರೇ ಅಲೆಮಾರಿ ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ ಸಮುದಾಯವನ್ನು ಸೇರ್ಪಡೆ ಮಾಡಿ ರಾಜಕೀಯವಾಗಿ ಸ್ಥಾನಮಾನ ಪಡೆಯಲು ಸರಕಾರ ಅವಕಾಶ ಕಲ್ಪಿಸಬೇಕು ಎಂದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ಬಿ.ಜಯಚಂದ್ರ ಸಮುದಾಯ ಪ್ರಗತಿ ಸಾಧಿಸಬೇಕೆಂಬ ಉದ್ದೇಶದಿಂದ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಹಲವಾರು ರೀತಿಯ ಸೌಲಭ್ಯಗಳನ್ನು ನೀಡುವಂತಹ ಕೆಲಸ ಸರ್ಕಾರ ಮಾಡುತ್ತಿದ್ದು, ಇದರ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕಾಡುಗೊಲ್ಲ ಆರಾಧ್ಯ ದೈವ ಜುಂಜಪ್ಪನ ಕ್ಷೇತ್ರ ಅಭಿವೃದ್ಧಿಗೆ ೫೦. ಲಕ್ಷ ರುಪಾಯಿ ನೀಡಲಾಗಿದ್ದು, ಅಭಿವೃದ್ಧಿ ಬಗ್ಗೆ ಇರುವ ಸಮಸ್ಯೆಯನ್ನು ತಾವೇ ಕೂತು ಬಗೆಹರಿಸಿಕೊಳ್ಳಿ. ಕಾಡುಗೊಲ್ಲ ಸಮುದಾಯದ ಅಭಿವೃದ್ಧಿ ಹೊಂದಬೇಕೆಂಬುದೇ ನಮ್ಮ ಸಂಕಲ್ಪ ಎಂದರು.

ಚಿತ್ರದುರ್ಗ ಯಾದವ ಮಹಾಸಂಸ್ಥಾನ ಮಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾರೋಗೆರೆ ಮಹೇಶ್, ಸುದರ್ಶನ್, ಶ್ರೀನಿವಾಸ್ ಬಾಬು, ಪಟೇಲ್ ಕೃಷ್ಣೇಗೌಡ, ಮದಲೂರು ನರಸಿಂಹಮೂರ್ತಿ, ರೂಪೇಶ್ ಕೃಷ್ಣಯ್ಯ, ಲೋಕೇಶ್, ದೇವರಾಜು, ಮೂಡ್ಲಪ್ಪ, ರಂಗನಾಥ್, ಹರೀಶ್ ಯಾದವ ಶಂಕರೇಗೌಡ ಸೇರಿದಂತೆ ಶ್ರೀ ರಾಧಾಕೃಷ್ಣ ಗೊಲ್ಲ ಬಳಗದ ಯುವಕರು ಗ್ರಾಮದ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುರಾತನ ಪರಂಪರೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ
ಎಕರೆಗೆ 20 ಸಾವಿರ ಪರಿಹಾರ ನೀಡಿ: ಜಿ.ಸಿ.ಶಂಕರಪ್ಪ ಒತ್ತಾಯ