ಕನ್ನಡಪ್ರಭ ವಾರ್ತೆ ಆಲಮಟ್ಟಿ
ಸ್ಥಳೀಯ ಹಡೇ೯ಕರ ಮಂಜಪ್ಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಂಗಳದಲ್ಲಿ ವಾಷಿ೯ಕ ಕ್ರೀಡಾ ಹಬ್ಬದಲ್ಲಿ ಮಾತನಾಡಿದ ಅವರು, ಪುಟ್ಟ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರಹಾಕಲು ಶಾಲೆಯಲ್ಲಿ ನಡೆಯವ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಅನುಕೂಲವಾಗುತ್ತವೆ. ಇದರಿಂದ ಮಕ್ಕಳಲ್ಲಿ ಮನರಂಜನೆ ಭಾವ ಅರಳುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಜ್ಞಾನ ತೃಷೆ ವೃದ್ಧಿಸುತ್ತದೆ. ವ್ಯಕ್ತಿತ್ವ ಹರಿತಕ್ಕೆ, ಆತ್ಮವಿಶ್ವಾಸ ಹೆಚ್ಚಳಕ್ಕೆ ಕ್ರೀಡಾ ಪ್ರೇಮ, ಪ್ರಣಯ ಹೊಂದಬೇಕು ಎಂದರು.
ಎಂಎಚ್ಎಂ ಹೈಸ್ಕೂಲಿನ ಮುಖ್ಯ ಶಿಕ್ಷಕ ಎಸ್.ಐ.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಸ್ವಾಸ್ಥ್ಯಕ್ಕೆ ಕ್ರೀಡೆಗಳು ಸಹಕಾರಿ. ಕ್ರೀಡೆ ಉಲ್ಲಾಸ ಭಾವಕ್ಕೆ ಉತ್ತೇಜನ ನೀಡುತ್ತದೆ. ಶಾರೀರಿಕ ಬೆಳವಣಿಗೆಗೆ ಹಿತಕರವಾಗಿದೆ. ಆರೋಗ್ಯ ಭಾಗ್ಯದ ಮುಂದೆ ಎಲ್ಲ ಭಾಗ್ಯಗಳು ನಗಣ್ಯ. ಇಲ್ಲಿ ಚಿಕ್ಕ ಮಕ್ಕಳಲ್ಲಿ ಕ್ರೀಡಾ ಹವ್ಯಾಸ ಬೆಳಗಿಸುತ್ತಿರುವುದು ತುಂಬಾ ಔಚಿತ್ಯ ಪೂರ್ಣವಾಗಿದೆ ಎಂದರು.ಎಂಎಚ್ಎಂ ಹೈಸ್ಕೂಲಿನ ಹಿರಿಯ ಶಿಕ್ಷಕ ಯು.ಎ.ಹಿರೇಮಠ, ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ನಾಗಣಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ಅತಿಥಿಗಳಾಗಿ ಭಾಗವಹಿಸಿದ್ದರು.
ಮೊಬೈಲ್ ಚಟಕ್ಕೆ ಯುವಜನತೆ ತಮ್ಮ ಬದುಕು ಕರಾಳಮಯ ಮಾಡಿಕೊಳ್ಳುತ್ತಿರುವುದು ವಿಷಾಧನೀಯ. ಆ ನಿಟ್ಟಿನಲ್ಲಿ ಪ್ರಜ್ಞಾವಂತರು ತಮ್ಮ ಮೊಗ್ಗಿನ ಕರಳು ಬಳ್ಳಿಗಳಿಗೆ ಮೊದಲು ಮೊಬೈಲ್ ಗುಂಗಿನಿಂದ ಹೊರತಂದು ಆಟೋಟಗಳ ಸ್ಪಧಾ೯ಕಣದ ಚಟಕ್ಕೆ ಅಣಿಗೊಳಿಸುವುದು ಸೂಕ್ತ. ಕ್ರೀಡೆಗಳಿಂದ ಅದಮ್ಯ, ಅಗಮ್ಯ ಚೇತನ ಶಕ್ತಿ ಪಡೆಯಬಹುದು. ಕ್ರೀಡಾ ಸಾಧಕರಾಗಿ ಮಿಂಚಬಹುದು.ಇದಕ್ಕೆಲ್ಲ ನಮ್ಮ ದಿಟ್ಟ ಮನಸ್ಥಿತಿ ಕಾರಣ.
ಆಲಮಟ್ಟಿ: ಸ್ಥಳೀಯ ಹಡೇ೯ಕರ ಮಂಜಪ್ಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಂಗಳದಲ್ಲಿ ವಾಷಿ೯ಕ ಕ್ರೀಡಾ ಹಬ್ಬಕ್ಕೆ ವರ್ಣರಂಜಿತ ಚಾಲನೆ ನೀಡಲಾಯಿತು.
ಅಂಗಳದಲ್ಲಿ ಸಂತಸಭಾವ ಅನುವರಣಿಸಿತು. ಕಲರ್ಫೂಲ್ ನಿನಾದ ಮೇಳೈಸಿ ಹಷೋ೯ಲ್ಲಾಸದ ಘಮ ಪರಿಮಳಿಸಿತ್ತು. ಹಳಕಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಮಾರ್ಗದರ್ಶನದ ಉಸ್ತುವಾರಿಯಲ್ಲಿ ವಾಷಿ೯ಕೋತ್ಸವದ ಅಂಗವಾಗಿ ಕ್ರೀಡಾ ಹಬ್ಬದ ರಸಗಾನ ನೆರವೇರಿತು. ಬಲೂನ್‌ಗಳ ಶೃಂಗಾರ ಕಾವ್ಯದಲ್ಲಿ ಕ್ರೀಡಾ ಮೊನಚು ಸಾಗಿತು. ಹೊಸತು ಕ್ರೀಡಾ ಸಾಧನ ಸಾಮಗ್ರಿಗಳೊಂದಿಗೆ ಪುಟಾಣಿ ಮೊಗಗಳು ಮಿನುಗಿದವು. ಶಾಲಾ ಗುರುಮಾತೆಯರು, ಗುರುಗಳು ಅದ್ದೂರಿಯಾಗಿ ಕ್ರೀಡಾಕೂಟ ಸಂಯೋಜಿಸಿ ಮಕ್ಕಳಲ್ಲಿ ನವತರಣಿಕೆಯ ಆಟೋಟಗಳ ಅವತರಣಿಕೆ ಸೃಜನಶೀಲವಾಗಿ ಸೃಜೀಸಿ ತಮ್ಮ ಕಾಯಕ ತತ್ವಕ್ಕೆ ಖುಷಿ,ಸಂಭ್ರಮದ ಲಕ್-ಲುಕ್ ಕಂಪಿನ ಭಾಷ್ಪ ಸ್ಪಶಿ೯ಸಿದರು.