ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿ: ಶಂಭುಲಿಂಗ ಶ್ರೀ

KannadaprabhaNewsNetwork | Published : Mar 13, 2025 12:47 AM

ಸಾರಾಂಶ

ಗುರು, ಲಿಂಗ, ಜಂಗಮ, ಕಾಯಕ ಇವುಗಳು ವೀರಶೈವ ಧರ್ಮದ ಮೂಲ ಸಿದ್ಧಾಂತ.

ಬ್ಯಾಡಗಿ: ಮಕ್ಕಳ ಕೈಯಲ್ಲಿ ಪೂಜಾ ಗಂಟೆ ಕೊಡಬೇಕಾದ ಸಮಯದಲ್ಲಿ ಮೊಬೈಲ್ ಕೊಡುತ್ತಿದ್ದಿರಿ. ವಿಭೂತಿ ಧರಿಸುವ ಜಾಗದಲ್ಲಿ ಸೌಂದರ್ಯವರ್ಧಕ ಬಳಕೆ ಮಾಡಿದರೂ ಪ್ರಶ್ನಿಸುತ್ತಿಲ್ಲ. ಪಾಲಕರ ಇಂತಹ ಅಸಹಾಯಕತೆಯನ್ನು ಮಕ್ಕಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೋತನಹಳ್ಳಿ ಮಠದ ಪಟ್ಟಾಧ್ಯಕ್ಷ ಶಂಭುಲಿಂಗ ಶ್ರೀ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಗುರುಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಜರುಗಿದ ಲಿಂ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ 45ನೇ ಹಾಗೂ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 7ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರ್ಮಿಕ ಶಿಕ್ಷಣದ ಕೊರತೆಯಿಂದ ಯುವಕ/ ಯುವತಿಯರು ನೈತಿಕವಾಗಿ ಅಧಃಪತನಕ್ಕಿಳಿಯುತ್ತಿದ್ದಾರೆ. ಗುರು, ಲಿಂಗ, ಜಂಗಮ, ಕಾಯಕ ಇವುಗಳು ವೀರಶೈವ ಧರ್ಮದ ಮೂಲ ಸಿದ್ಧಾಂತ. ಇವುಗಳನ್ನು ಪಾಲಿಸಬೇಕು. ಕನಿಷ್ಠ ಮನೆದೇವರನ್ನಾದರೂ ಪೂಜಿಸುವಷ್ಟು ಪ್ರಜ್ಞಾವಂತರಾಗಿ ಎಂದರು.

ಯಾವುದೇ ಕಠಿಣ ಆಚರಣೆ, ಉಪವಾಸ ವ್ರತಗಳು ನಮಗೆ ಬೇಡ. ಕೇಳಿದಷ್ಟು ದುಡ್ಡು ಕೊಟ್ಟು ಮಾಡುವಂತಹ ಅರ್ಚನೆ, ಅಭಿಷೇಕದ ಅವಶ್ಯಕತೆಯಿಲ್ಲ. ತಿಳಿಯದ ಭಾಷೆಯಲ್ಲಿ ಮಂತ್ರ ಪಠಣ ಮಾಡುವಂತೆ ಎಲ್ಲಿಯೂ ವೀರಶೈವ ಲಿಂಗಾಯತ ಧರ್ಮ ಹೇಳಿಲ್ಲ ಎಂದರು.

ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ ನೀಡಿದ ಕೊಡುಗೆಯನ್ನು ವೀರಶೈವ ಲಿಂಗಾಯತ ಸಮಾಜ ಎಂದಿಗೂ ಮರೆಯುವಂತಿಲ್ಲ. ಸಿಂದಗಿ ಶಾಂತವೀರ ಶ್ರೀಗಳ ಹೆಸರಿನಲ್ಲಿ ಆರಂಭಿಸಿರುವ ವೈದಿಕ ಧಾರ್ಮಿಕ ಪಾಠಶಾಲೆಗಳು ಇಂದು ಪ್ರತಿ ಮನೆಯಲ್ಲಿ ಗಂಟೆಗಳ ನಿನಾದ ಕೇಳುವಂತೆ ಮಾಡಿದ್ದಾರೆ. ವೀರಶೈವ ಧರ್ಮದ ಬಡ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ತನ್ಮೂಲಕ ಪಟ್ಟಣದಲ್ಲೆಡೆ ಧಾರ್ಮಿಕ ಕಾರ್ಯಗಳು ನಡೆಯುವಂತೆ ನೋಡಿಕೊಂಡಿದ್ದಾರೆ ಎಂದರು.ಕುಮಾರೇಶ್ವರ ಪಾಠಶಾಲೆ ಹಿರಿಯ ವ್ಯವಸ್ಥಾಪಕ ರಾಚಯ್ಯ ಓದಿಸೋಮಠ, ಕಿರಿತು ಶಾಸ್ತ್ರಿಳಾದ ವೀರಯ್ಯ ಸೋಮಾಪುರ, ಚನ್ನಬಸಯ್ಯ ದೇವನೂರು, ಸಂಗೀತ ಕಲಾವಿದ ರಾಜಯ್ಯಶಾಸ್ತ್ರೀ ಸಾಗರ, ವಿಕಾಸ ಮುಳಗುಂದ, ಶಾಂತಕುಮಾರ ಹೂಗಾರ, ಧರ್ಮಾಧಿಕಾರಿ ಮಂಜಯಸ್ವಾಮಿ ಹಿರೇಮಠ, ಕರಬಸಯ್ಯ ಹಿರೇಮಠ, ಗಿರೀಶ ಇಂಡಿಮಠ ಇತರರಿದ್ದರು.ಅಗ್ನಿವೀರ ನೇಮಕಾತಿಗೆ ಅರ್ಜಿ ಆಹ್ವಾನ

ಹಾವೇರಿ: ಅಗ್ನಿಪಥ್ ಯೋಜನೆಯಡಿಯಲ್ಲಿ 2025- 26ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್ ಪರೀಕ್ಷೆಯ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು. ವೆಬ್‌ಸೈಟ್ ಪರಿಶೀಲಿಸಬಹುದು. ಅಗ್ನಿವೀರ್ ಅಭ್ಯರ್ಥಿಗಳು ತಮ್ಮ ಅರ್ಹತೆಯ ಆಧಾರದ ಮೇಲೆ ಯಾವುದೇ ಎರಡು ವರ್ಗಗಳಿಗೆ ಅರ್ಜಿ ಸಲ್ಲಿಸಬಹುದು. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆಭಾರತೀಯ ಸೇನೆಯಲ್ಲಿ ಆಯ್ಕೆ ನ್ಯಾಯಯುತ ಮತ್ತು ಪಾರದರ್ಶಕ''''''''ವಾಗಿದ್ದು, ಅರ್ಹತೆಯ ಮೇಲೆ ಮಾತ್ರ ನಡೆಯುತ್ತದೆ. ಯಾವುದೇ ಹಂತದಲ್ಲಿ ಭಾರತೀಯ ಸೇನೆಯಲ್ಲಿ ಆಯ್ಕೆ ಅಥವಾ ನೇಮಕಾತಿಗಾಗಿ ಯಾರಿಗೂ ಲಂಚ ನೀಡಬಾರದು. ಅಭ್ಯರ್ಥಿಗಳು ನೇಮಕಾತಿ ಏಜೆಂಟ್‌ಗಳಂತೆ ನಟಿಸುವ ವ್ಯಕ್ತಿಗಳಿಂದ ಮೋಸ ಹೋಗಬಾರದು. ಮಂಗಳೂರು ಸೇನಾ ನೇಮಕಾತಿ ಕಚೇರಿ: ಸಹಾಯವಾಣಿ ತೆರೆದಿರುತ್ತದೆ, ದೂ. 0824- 2951279, ಸಹಾಯಕ್ಕಾಗಿ ಮಂಗಳೂರು ಸೇನಾ ನೇಮಕಾತಿ ಕಚೇರಿ ಅಥವಾ ಹತ್ತಿರದ ಎನ್‌ಸಿಸಿ ಅಥವಾ ಸೈನಿಕ ಮಂಡಳಿಗೆ ಭೇಟಿ ನೀಡಬಹುದು.

Share this article