- ರಾಜ್ಯೋತ್ಸವ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶಾಂತನಗೌಡ
ರಾಜ್ಯೋತ್ಸವ ಕೇವಲ ನವಂಬರ್ ತಿಂಗಳಲ್ಲಿ ಆಚರಿಸಿದರೆ ಸಾಲದು. ಪ್ರತಿ ಹಂತಗಳಲ್ಲಿ ನಾವು ಕನ್ನಡದಲ್ಲೇ ಮಾತನಾಡಿ, ಕನ್ನಡಕ್ಕೆ ಗೌರವ ನೀಡಬೇಕು. ಆಗ ಮಾತ್ರ ಇಂತಹ ರಾಜ್ಯೋತ್ಸವ ಸಂಭ್ರಮ ಸಾರ್ಥಕ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ತಾಲೂಕು ಯುವಶಕ್ತಿ ಒಕ್ಕೂಟ ಹಾಗೂ ಕನಕ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಂಗ್ಲಭಾಷೆ ವ್ಯಾಮೋಹದಿಂದ ಇಂದು ಗ್ರಾಮೀಣ ಮಹಿಳೆಯರು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗೆ ಸೇರಿಸಬೇಕೆಂಬ ಹಂಬಲ ಹೊಂದಿದ್ದಾರೆ. ಇದು ಶಿಕ್ಷಣ ದೃಷ್ಟಿಯಿಂದ ಸರಿಯಾದರೂ, ಮಾತೃಭಾಷೆಗೆ ಆದ್ಯತೆ ನೀಡಿ, ಗೌರವದಿಂದ ನಮ್ಮ ಭಾಷೆ ಪ್ರೀತಿಸಬೇಕು. ಅಪ್ಪ-ಅಮ್ಮ ಪದಗಳು ಹೋಗಿ ಮಮ್ಮಿ-ಡ್ಯಾಡಿ ಎಂದು ಕೂಗುವ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಮೊದಲು ಕನ್ನಡ ಭಾಷೆಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದರು.
ರಾಜಕೀಯ ವಿಷಮ ಪರಿಸ್ಥಿತಿಯಲ್ಲೂ ಒಬ್ಬ ವ್ಯಕ್ತಿ ಸತತ 4 ಬಾರಿ ಸಂಸದರಾಗಿ 1 ಬಾರಿ ಶಿಕಾರಿಪುರದ ಶಾಸಕರಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ, ಅಭಿವೃದ್ಧಿಗೆ ಸಹಕಾರ ನೀಡುತ್ತಿರುವವರು ಸಂಸದ ಬಿ.ವೈ,ರಾಘವೇಂದ್ರ. ಅವರು ಅಪರೂಪದ ರಾಜಕಾರಣಿ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕನಕಶ್ರೀ ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಮ್ಮ ಮಾತೃಭಾಷೆ ಕನ್ನಡ ನಮಗೆ ಅನ್ನ ಕೊಡುವ ಭಾಷೆ. ಆ ಭಾಷೆಯನ್ನೇ ಮರೆತರೆ ನಮ್ಮ ಹೆತ್ತ ತಾಯಿಯನ್ನೇ ಮರೆತಂತೆ ಎಂಬುದನ್ನು ಯಾರೂ ಮರೆಯಬಾರದು. ಮೊದಲು ಕನ್ನಡ ಭಾಷೆಗೆ ಅಗ್ರಸ್ಥಾನ ಕೊಡಬೇಕು ಎಂದರು.
ಡಿ.ಜಿ. ಶಾಂತನಗೌಡ ಸಚಿವರಾಗಲಿ:
ತಹಸೀಲ್ದಾರ್ ಪಟ್ಟರಾಜಗೌಡ, ಪುರಸಭಾಧ್ಯಕ್ಷ ಮೈಲಪ್ಪ, ಮುಖ್ಯಾಧಿಕಾರಿ ಲೀಲಾವತಿ, ಮಾಜಿ ಜಿ.ಪಂ. ಸದಸ್ಯ ಕೆ.ವಿ.ಚನ್ನಪ್ಪ ಮಾತನಾಡಿದರು.
- - -
- ಬಿ.ವೈ.ರಾಘವೇಂದ್ರ, ಸಂಸದ, ಶಿವಮೊಗ್ಗ ಕ್ಷೇತ್ರ
- - - -3ಎಚ್.ಎಲ್.ಐ2.ಜೆಪಿಜಿ:ಹೊನ್ನಾಳಿ ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.