ಶಿವಮೊಗ್ಗ: ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲನ್ನು ಕತ್ತರಿಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು, ಶಿವಮೊಗ್ಗದ ಗೋ ರಕ್ಷಾ ಪರಿವಾರದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಜರಂಗದಳದ ಮುಖಂಡ ರಾಜೇಶ್ ಗೌಡ ಮಾತನಾಡಿ, ಗೋವಿನ ಕೆಚ್ಚಲು ಕುಯ್ಯಲು ಪ್ರಮುಖ ಕಾರಣ ಪಶು ಆಸ್ಪತ್ರೆಯ ಜಾಗವನ್ನು ಉಳಿಸಿಕೊಳ್ಳಲು ಕರ್ಣ ಎಂಬುವವರು ಗೋವಿನೊಂದಿಗೆ ಪ್ರತಿಭಟನೆ ಮಾಡಿ ದರ್ಗಾ ಮಾಡಲು ಹೊರಟ ಪಶು ಆಸ್ಪತ್ರೆ ಜಾಗವನ್ನು ಉಳಿಸಿಕೊಳ್ಳುತ್ತಾರೆ. ಇದಕ್ಕೆ ಪ್ರತಿಯಾಗಿ ಅವರ ಮನೆಯ ಹಸುಗಳ ಮೇಲೆ ಕ್ರೂರತ್ವ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪೊಲೀಸರು ಬಂಧಿಸಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಅಲ್ಲ, ಆತ ಅಲ್ಲೇ ಬೇಕರಿಯೊಂದರಲ್ಲಿ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಸಚಿವ ಜಮೀರ್ ಅಹಮ್ಮದ್ ಸಲಹೆ ಮೇರೆಗೆ ಈ ಕೃತ್ಯ ಎಸಗಿದ್ದಾನೆ ಎಂದು ಕಾಣುತ್ತಿದೆ. ಪೊಲೀಸರು ಸುಳ್ಳು ಕೇಸ್ ದಾಖಲಿಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಪ್ರಮುಖರಾದ ವಾಸುದೇವ್, ನಾರಾಯಣ ವರ್ಣೇಕರ್, ದೇವರಾಜ್, ದತ್ತಾತ್ರಿ, ರಾಜೇಶ್ ಗೌಡ, ಆನಂದರಾವ್ ಜಾಧವ್, ಮಾಲತೇಶ್, ರಮೇಶ್ ಜಾಧವ್, ದೀನದಯಾಳ್, ಜ್ಞಾನೇಶ್ವರ್, ಸುರೇಖಾ ಮುರಳೀಧರ್, ಸುನಿತಾ, ಚೈತ್ರಾ, ಲಕ್ಷ್ಮಿ, ಯಶೋದಾ, ಗೀತಾ ಲಕ್ಷ್ಮಿ ಮೊದಲಾವರಿದ್ದರು.
ಕಾಂಗ್ರೆಸ್ ಭಿನ್ನಮತ ಮುಚ್ಚಿ ಹಾಕಲು ಇದೊಂದು ಷಡ್ಯಂತ್ರಶಿವಮೊಗ್ಗ: ಕಾಂಗ್ರೆಸ್ ಭಿನ್ನಮತ ಮುಚ್ಚಿ ಹಾಕಲು ತಮ್ಮ ಅಧಿಕಾರವನ್ನು ಸುಭದ್ರಗೊಳಿಸಲು ಕಾಂಗ್ರೆಸ್ ಸರ್ಕಾರ ತುಷ್ಠೀಕರಣದ ನೀತಿ ಅನುಸರಿಸುವ ಭಾಗವಾಗಿ ಇದೊಂದು ಷಡ್ಯಂತ್ರ ಅಷ್ಟೇ. ನಿನ್ನೆ ಕೂಡ ಹಿಂದೂಗಳ ಪವಿತ್ರ ಸ್ಥಳವಾದ ನಂಜನಗೂಡಿನಲ್ಲಿ ದೇವರಿಗೆ ಬಿಟ್ಟ ಹಸುವಿನ ಬಾಲವನ್ನು ತುಂಡರಿಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಸ್ಲಿಂ ತುಷ್ಠೀಕರಣ ನೀತಿ ಅವರಿಗೇ ರಕ್ಷಣೆಯಾಗಿದೆ. ನಾವು 25ಕ್ಕೂ ಹೆಚ್ಚು ಗೋಹತ್ಯೆ ಪ್ರಕರಣಗಳನ್ನು ಹಿಡಿದುಕೊಟ್ಟರೂ ಇದುವರೆಗೂ ಯಾವುದೇ ಕೇಸ್ ದಾಖಲಿಸಿಲ್ಲ. ಶಿವಮೊಗ್ಗದಲ್ಲಿ ಹಾಗಾದರೇ ಗೋಹತ್ಯೆ ನಿಷೇಧ ಕಾನೂನು ಇಲ್ಲವೇ ಎಂದು ಪ್ರಶ್ನಿಸಿದರು.