ಕೊಪ್ಪಳ: ನಗರದ ಜಿಲ್ಲಾಡಳಿತ ಭವನದ ಬಳಿ ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ವಿಶ್ವಕರ್ಮ ಸಮಾಜದವರಿಗೆ ಎಸ್ಟಿ ಮೀಸಲಾತಿ ಹಾಗು ನಾನಾ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ಬಡವರಿಗೆ ಜಿಲ್ಲಾ ಕೈಗಾರಿಕೆ ಇಲಾಖೆ ವತಿಯಿಂದ ನಿವೇಶನ ಬಿಡುಗಡೆ ಮಾಡಬೇಕು. ಬಡತನ ಸೇರಿದಂತೆ ಪಂಚ ಕಸುಬು ಮಾಡುವ ವಿಶ್ವಕರ್ಮ ಜನಾಂಗದವರಿಗೆ ಹೆಚ್ಚಿನ ರೀತಿಯಲ್ಲಿ ಕೈಗಾರಿಕೆ ಇಲಾಖೆ ವತಿಯಿಂದ ಆರ್ಥಿಕ ಸಹಾಯಧನ ನೀಡಬೇಕು. ಕೊಪ್ಪಳ ನಗರದಲ್ಲಿ ವಿಶ್ವಕರ್ಮ ವಿದ್ಯಾರ್ಥಿ ನಿಲಯಕ್ಕೆ ಅನುದಾನ ನೀಡಬೇಕು. ವಿಶ್ವಕರ್ಮ ಸಮಾಜದವರಿಗೆ ನೀಡುವ ನಿವೇಶನಕ್ಕೆ ₹೩,೦೦,೦೦೦ ಸರ್ಕಾರದ ಅನುದಾನ ಬಿಡುಗಡೆ ಮಾಡಬೇಕು. ಕಾಂತರಾಜ್ ಆಯೋಗದ ವರದಿ ಜಾರಿಗೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧಿಕಾರೇತರ ಸದಸ್ಯ ಪ್ರಭಾಕರ್ ಬಡಿಗೇರ್, ಚಂದ್ರಶೇಖರ್ ಬಡಿಗೇರ್, ವಿಶ್ವಕರ್ಮ ಸಮಾಜದ ಮುಖಂಡ ವೀರಭದ್ರಪ್ಪ ಬಡಿಗೇರ್, ಮೌನೇಶ್ ಮಾದಿನೂರ್, ಎಚ್ಚರೇಶ ಹೊಸಮನಿ, ಪ್ರಶಾಂತ್ ವಿಶ್ವ ಬ್ರಾಹ್ಮಣ, ಮೌನೇಶ್ ಬಡಿಗೇರ್, ವೀರೇಶ್ ಕಮ್ಮಾರ್, ಕೃಷ್ಣ ಬಡಿಗೇರ್, ಮಹೇಶ ಬೇವಿನಹಳ್ಳಿ, ಬಸವರಾಜ ಇರಕಲ್ಲಗಡ, ಈರಣ್ಣ ಕಲ್ಲತಾವರಗೇರ, ವಿರುಪಾಕ್ಷಿ ಹಿರೇಬೊಮ್ಮನಾಳ, ಶಂಕರ್ ಗುನ್ನಾಳ, ಜಗದೇವಪ್ಪ ಹಿರೆವಂಕಲಕುಂಟಿ, ವಿಶ್ವನಾಥ್ ಲಿಂಗನಬಂಡಿ, ಶರಣಪ್ಪ ಕಾಮನೂರ ಇತರರಿದ್ದರು.