ಸಾಧುಸಂತರ ಇತಿಹಾಸ ಮುಂದಿನ ಪೀಳಿಗೆಗೆ ನೀಡಿ

KannadaprabhaNewsNetwork |  
Published : Sep 06, 2024, 01:01 AM IST
ಫೋಟೋ : 5 ಚ್‌ಎಸ್‌ಕೆ 4 ಮತ್ತು 54: ಹೊಸಕೋಟೆ ನಗರದ ಖಾಜಿ ಮೊಹಲ್ಲಾದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ವಿಧಾನ ಸಭಾ ಸ್ಪೀಕರ್  ಯುಟಿ ಖಾದರ್ ಭಾಗವಹಿಸಿ  ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಸಾಧುಸಂತರ ಇತಿಹಾಸ ಮುಂದಿನ ಪೀಳಿಗೆಗೆ ನೀಡಿ

ನ್ನಡಪ್ರಭವಾರ್ತೆ ಹೊಸಕೋಟೆ ಸಾಧು ಸಂತರ ಹಾಗೂ ಧರ್ಮ ಗುರುಗಳ ಇತಿಹಾಸವನ್ನ ಆಚರಣೆಗಳ ಮೂಲಕ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.ನಗರದ ಖಾಜಿ ಮೊಹಲ್ಲಾದಲ್ಲಿ ನಡೆದ ಹಜರತ್ ಸೈಯದ್ ಶಬ್ಬರ್ ಶಾವಲಿ -ವಾ- ಹಜರತ್ ಶಹಜಾದಿ ಬಿ ಅಮ್ಮ, ಹಜರತ್ ಖಾಜಿ ಬುಡನ್ ಶಾ-ವಾ- ಹಜರತ್ ಮರಿಯಂಬಿರವರ ಉರಸ್ ಹಾಗೂ ಗಂಧ ಪುಷ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನದೆ ಹಲವಾರು ಧರ್ಮ ಗುರುಗಳು ತಮ್ಮದೇ ಆದ ಭಕ್ತಿ ಮಾರ್ಗ ಹಾಗೂ ಶಾಂತಿ ಸಮಾನತೆಯ ಸಹಬಾಳ್ವೆಯೊಂದಿಗೆ ಸಮಾಜದ ಉನ್ನತಿಗೆ ಶ್ರಮಿಸಿ ಹೋಗಿದ್ದಾರೆ. ಅಂತಹವರ ಮಹಾನ್ ಧರ್ಮಗುರುಗಳ ಹೆಸರನ್ನು ಆಚರಣೆಗಳ ಮೂಲಕ ಉಳಿಸುವ ಕೆಲಸ ಆಗಬೇಕು. ಹಜರತ್ ಖಾಜಿ ಬುಡನ್ ಶಾ ಹಾಗೂ ಹಜರತ್ ಮರಿಯಂಬಿರವರು ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜದ ಉನ್ನತಿಗೆ ಶ್ರಮಿಸಿದ್ದಾರೆ. ಅವರ ಒಂದು ಸ್ಮರಣೆಯನ್ನು ದರ್ಗಾದಲ್ಲಿ ಪೂಜೆ ಸಲ್ಲಿಸುವ ಮೂಲಕ ಮಾಡುತ್ತಿದ್ದೇವೆ. ಭಕ್ತಿ ಹಾಗೂ ಭಾವೈಕ್ಯತೆಯಿಂದ ಈ ಉರುಸ್ ಹಾಗೂ ಗಂಧ ಪುಷ್ಪ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವುದು ಪ್ರಶಂಸನಿಯ. ಎಂದರು. ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಹೊಸಕೋಟೆ ತಾಲೂಕಿನಲ್ಲಿ ಉರುಸ್ ಹಾಗೂ ಗಂಧ ಪುಷ್ಪ ಕಾರ್ಯಕ್ರಮಗಳನ್ನು ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆ ಸಾಮರಸ್ಯದಿಂದ ಆಚರಣೆ ಮಾಡುತ್ತಿದ್ದೇವೆ. ಇದರಿಂದಲೇ ತಾಲೂಕಿನಲ್ಲಿ ಶಾಂತಿ ನೆಮ್ಮದಿ ಲಭಿಸಿ ನೆಮ್ಮದಿಯ ಜೀವನ ಮಾಡಲು ಸಾಧ್ಯವಾಗಿದೆ. ಅನೇಕ ದರ್ಶನಿಕರು ಧರ್ಮ ಗುರುಗಳು ಹೊಸಕೋಟೆ ನೆಲದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಅವರ ಸ್ಮರಣೆ ನಿರಂತರವಾಗಿ ಮಾಡುತ್ತಿದ್ದೇವೆ. ಎಂದರು.

ಉದ್ಯಮಿ ಬಿವಿ ಬೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಹೆಚ್.ಎಂ.ಸುಬ್ಬರಾಜ್, ನಗರಸಭೆ ಸದಸ್ಯ ಗೌತಮ್, ವಕ್ತ್ ಬೋರ್ಡ್ ಮಾಜಿ ಅಧ್ಯಕ್ಷ ನಿಸಾರ್ ಅಹ್ಮದ್ ಮುಖಂಡರಾದ ಸೈಯದ್ ನವಾಜ್, ಅಜು, ಸಾಹಿಲ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು