-ನಾಯಕ ಸಮಾಜದ ಮುಖಂಡ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ ಸುದ್ದಿಗೋಷ್ಟಿ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷರಾಗಿ ಸಮಾಜದ ಮುಖಂಡ ಬಿ.ವೀರಣ್ಣ ನೇಮಕವಾಗಿದ್ದರೆ ಅದಕ್ಕೆ ದಾಖಲೆ ನೀಡಬೇಕು ಎಂದು ಸಮಾಜದ ಹಿರಿಯ ಮುಖಂಡ, ವಕೀಲ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾವು ದಾವಣಗೆರೆ ತಾಲೂಕು ನಾಯಕ ಸಮಾಜದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ. ವಕೀಲನಾಗಿದ್ದು, ಸಾರ್ವಜನಿಕ ಸೇವೆ, ಸಮಾಜ ಸೇವೆಯಲ್ಲಿದ್ದೇವೆ. ಬಿ.ವೀರಣ್ಣ ನಾಯಕ ಸಮಾಜದ ಜಿಲ್ಲಾಧ್ಯಕ್ಷರೆಂದು ಸುಮಾರು ವರ್ಷದಿಂದ ಹೇಳಿಕೊಂಡು ಬಂದಿದ್ದು, ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದಕ್ಕೆ ಬಿ.ವೀರಣ್ಣ ದಾಖಲೆ ನೀಡಲಿ ಎಂದರು.
ವೀರಣ್ಣನವರನ್ನು ಸಮಾಜದ ಮುಖಂಡರು ಅಂತಾ ಕರೆದರೆ ಆಕ್ಷೇಪಣೆ ಇಲ್ಲ. ಆದರೆ, ಜಿಲ್ಲಾಧ್ಯಕ್ಷರು ಅಂದಿದ್ದಕ್ಕೆ ನಮ್ಮ ವಿರೋಧವಿದೆ. ಹತ್ತು ವರ್ಷದಿಂದ ಕೆಲವರು ಸ್ವಯಂ ಘೋಷಿತ ಅಧ್ಯಕ್ಷರೆಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ದಾವಣಗೆರೆ ತಾಲೂಕು ನಾಯಕ ಸಮಾಜದ ರಿಜಿಸ್ಟರ್ ನೋಂದಣಿಯಾದ ಸಮಾಜದ ನಿರ್ದೇಶಕರ ಮೂಲಕ ತಾವು ಹಿಂದೆ ತಾಲೂಕು ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ, ಈಗ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ. ಆದರೆ, ಜಿಲ್ಲಾಧ್ಯಕ್ಷರು ಅಧಿಕೃತವಲ್ಲವೆಂದ ಮೇಲೆ ಸೂಕ್ತ ಕ್ರಮ ಆಗಬೇಕು ಎಂದು ಅವರು ತಿಳಿಸಿದರು.
................
ಫೋಟೊ: ದಾವಣಗೆರೆಯಲ್ಲಿ ಹಿರಿಯ ವಕೀಲ, ನಾಯಕ ಸಮಾಜದ ಮುಖಂಡ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.9ಕೆಡಿವಿಜಿ1