ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಶಾಮನೂರು ಶಿವಶಂಕರಪ್ಪನವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು, ಅದರಲ್ಲೂ ದಾವಣಗೆರೆ ದಕ್ಷಿಣದ ಜನತೆ ಅನಾಥರಾದಂತಾಗಿದೆ. ನಿತ್ಯವೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿದ್ದ ಶಾಮನೂರು ಇಲ್ಲದ ಕೊರತೆಯು ಜನರಲ್ಲಿ ಅನಾಥ ಪ್ರಜ್ಞೆ ಕಾಡುವಂತೆ ಮಾಡಿದೆ ಎಂದರು.
ಉಪ ಚುನಾವಣೆಗೆ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಬೇಕು. ಶಿವಶಂಕರಪ್ಪನವರ ನಿಧನದ ನೋವಿನಿಂದ ನಾವ್ಯಾರೂ ಇನ್ನೂ ಹೊರ ಬಂದಿಲ್ಲ. ಉಪ ಚುನಾವಣೆ ಅನಿವಾರ್ಯವೂ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಲು ಸಾಕಷ್ಟು ಜನ ಪೈಪೋಟಿಯಲ್ಲಿದ್ದು, ಕಾಂಗ್ರೆಸ್ಸಿನ ಅಲಿಖಿತ ನಿಯಮದಂತೆ ಮೃತರ ಕುಟುಂಬ ವರ್ಗಕ್ಕೆ ಟಿಕೆಟ್ ನೀಡುವುದು ಒಂದು ಸಂಪ್ರದಾಯವೂ ಆಗಿದೆ. ಹಾಗಾಗಿ ಶಾಮನೂರು ಕುಟುಂಬಕ್ಕೆ ಉಪ ಚುನಾವಣೆ ಟಿಕೆಟ್ ನೀಡಲಿ ಎಂದು ತಿಳಿಸಿದರು.ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣಕ್ಕೂ ಬೇರೆಯವರಿಗೆ ಮಣೆ ಹಾಕಬಾರದೆಂಬುದಷ್ಟೇ ನಮ್ಮ ಮನವಿ. ಇದರ ಹೊರತಾಗಿ ಪಕ್ಷದ ವರಿಷ್ಟರು ಯಾವುದೇ ತೀರ್ಮಾನ ಕೈಗೊಂಡರೂ ನಾವು ಅದಕ್ಕೆ ಬದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಾಲಿಕೆ ಮಾಜಿ ಸದಸ್ಯರಾದ ಎ.ಬಿ.ರಹೀಂ ಸಾಬ್, ಕೆ.ಜಾಕೀರ್ ಅಲಿ, ಷಫೀಕ್ ಪಂಡಿತ್, ಫಿರೋಜ್ ಸಾಬ್, ಕಬೀರ್ ಖಾನ್, ಉದಯಕುಮಾರ, ಮುಖಂಡರಾದ ಎಚ್.ಜೆ.ಮೈನುದ್ದೀನ್, ಅಬ್ದುಲ್ ಘನಿ, ಸಮೀವುಲ್ಲಾ, ಅನ್ವರ್ ಇತರರು ಇದ್ದರು.ದೇಶದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದು, ರಾಜ್ಯದಲ್ಲೂ ಬಿಜೆಪಿ ಅಭ್ಯರ್ಥಿ ಇರುವಲ್ಲಿ ಜೆಡಿಎಸ್ ತನ್ನ ಹುರಿಯಾಳನ್ನು ಕಣಕ್ಕಿಳಿಸುವುದಿಲ್ಲ. ಹಾಗಾಗಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದಾದರೆ ತಮ್ಮ ಅಭ್ಯರ್ಥಿಯನ್ನು ಹಾಕುವುದಿಲ್ಲವೆಂದು ಜೆಡಿಎಸ್ ಪಕ್ಷದ ಕೆಲ ಮುಖಂಡರು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ದಾವಣಗೆರೆ ದಕ್ಷಿಣದ ಉಪ ಚುನಾವಣಾ ಕಣದಲ್ಲಿ ಇರುತ್ತಾರಾ ಅಥವಾ ಇಲ್ಲವೇ ಎಂದು ಜೆಡಿಎಸ್ ಮೊದಲು ಸ್ಪಷ್ಟಪಡಿಸಲಿ.
ಎಚ್.ಜೆ.ಮೈನುದ್ದೀನ್ ಕಾಂಗ್ರೆಸ್ ಯುವ ಮುಖಂಡ