ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕಯ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಶಿರಸಿಕೇಂದ್ರ ಸರ್ಕಾರ ಒಂದು ರೂಪಾಯಿಗೆ ಭೂಮಿ ಮತ್ತು ಹದಿನಾರು ಸಾವಿರ ಗಿಡ ಉದ್ಯಮಿಗೆ ಕೊಡುವ ನೀತಿಯಂತೆ, ಅರಣ್ಯವಾಸಿಗಳು ಸಾವಿರ ರೂಪಾಯಿ ಕೊಡುತ್ತೇವೆ. ನಮ್ಮವರಿಗೂ ಅದೇ ನೀತಿಯಂತೆ ಕೇಂದ್ರ ಸರ್ಕಾರ ಉದಾರ ನೀತಿ ತೋರಿಸಲಿ. ಅಲ್ಲದೇ, ರಾಜ್ಯ ಸರ್ಕಾರವು ತಿರಸ್ಕರಿಸಿದ ಸುಪ್ರೀಂಕೋರ್ಟ್‌ಗೆ ತಿದ್ದುಪಡಿ ಅಫೀಡವಿಟ್ ಸಲ್ಲಿಸಲು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕಯ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದರು.
ನಗರದ ವಿಕಾಸಾಶ್ರಮ ಮೈದಾನದ ನಗರಸಭೆಯ ರಂಗ ಮಂದಿರದಲ್ಲಿ ಜರುಗಿದ ಪುನರ್ ಪರಿಶೀಲನಾ ಅಭಿಯಾನದ ಬೃಹತ್ ಅರಣ್ಯವಾಸಿಗಳ ಮಹಾಸಂಗ್ರಾಮದ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಪ್ರೀಂಕೋರ್ಟ್‌ನ ನಿರ್ದೇಶನ ಮತ್ತು ಕೇಂದ್ರ ಸರ್ಕಾರದ ಮಾರ್ಗದಶನದ ವ್ಯತಿರಿಕ್ತವಾಗಿ ರಾಜ್ಯಾದ್ಯಂತ ಎರಡುವರೇ ಲಕ್ಷಕ್ಕೂ ಮಿಕ್ಕಿ ಅರ್ಜಿಗಳನ್ನ ತಿರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಹಿನ್ನೆಲೆ ಮುಖ್ಯ ಕಾರ್ಯದರ್ಶಿ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರಿಂಕೋರ್ಟ್‌ನಲ್ಲಿ ದಾಖಲಿಸಲಾಗುವುದು. ಅರಣ್ಯವಾಸಿಗಳ ಪರ ಸಮರ್ಥ ಕಾನೂನು ಹೋರಾಟ ಜರುಗಿಸಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ, ಜಿಲ್ಲಾ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ, ಮಹಭಲೇಶ್ವರ ನಾಯ್ಕ ಬೇಡ್ಕಣಿ, ಯಲ್ಲಾಪುರ ಅಧ್ಯಕ್ಷ ಭೀಮಸೀ ವಾಲ್ಮಕೀ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಅಂಕೋಲ ಅಧ್ಯಕ್ಷ ರಮಾನಂದ ನಾಯ್ಕ ಅಚವೆ, ಚಂದ್ರು ಪೂಜಾರಿ, ನೆಹರು ನಾಯ್ಕ ಬಿಳೂರು, ಎಂ.ಆರ್. ನಾಯ್ಕ ಕಂಡ್ರಾಜಿ, ಸಾರಂಬಿ, ರಾಜೇಶ್ ಮಿತ್ರ ನಾಯ್ಕ, ಸ್ವಾತಿ ಜೈನ್, ಹರಿಹರ ನಾಯ್ಕ ಓಂಕಾರ, ಗಣಪತಿ ನಾಯ್ಕ ಬೆಡಸಗಾಂವ, ವಿನಾಯಕ ಮರಾಠಿ ದೊಡ್ಮನೆ, ಮಹೇಂದ್ರ ನಾಯ್ಕ ಕತಗಾಲ, ಸುಭಾಷ ಗಾವಡಾ, ಸೀತಾರಾಮ ಗೌಡ ಹುಕ್ಕಳಿ ಮತ್ತಿತರರು ಉಪಸ್ಥಿತರಿದ್ದರು.