ಕುಂದಗೋಳ: ದೇಶಕ್ಕೆ ಅನ್ನ ಕೊಡುವ ರೈತ, ದೇಶದ ಗಡಿ ಕಾಯುವ ಯೋಧರಿಗೆ ಗೌರವಿಸುವ ಕಾರ್ಯವಾಗಬೇಕಿದೆ ಎಂದು ದುಮ್ಮವಾಡದ ಸರ್ಫಭೂಷಣ ದೇವರು ಹೇಳಿದರು.
ಜೀವನದಲ್ಲಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬ ನಾಣ್ಣುಡಿಯಂತೆ ಶ್ರೀ ಸಿದ್ಧಾರೂಢರ ಜೀವನ ಚರಿತ್ರೆ, ಮದರ್ ಥೆರೆಸಾ, ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರ ಗುರು-ಶಿಷ್ಯರ ಹಾಗೂ ಸಂತ ಶಿಶುನಾಳ ಶರೀಫರು- ಗುರು ಗೋವಿಂದ ಭಟ್ಟರ ಗುರು- ಶಿಷ್ಯ ಸಂಬಂಧ ಕುರಿತು ಭಕ್ತರಿಗೆ ಆಶೀರ್ವಚನ ನೀಡಿದರು.
ಕೊಳ್ಳೂರಿನ ಮೃತ್ಯುಂಜಯ ದೇವರು ಮಾತನಾಡಿ, ಅಜ್ಞಾನದಲ್ಲಿ ಇರುವವರನ್ನು ಯಾರು ಬೆಳಕಿನೆಡೆಗೆ ಕೊಂಡೊಯ್ಯುತ್ತಾರೆಯೋ ಅವರನ್ನು ಗುರು ಎನ್ನುತ್ತಾರೆ. ಗುರುವಿನ ಮಾರ್ಗದರ್ಶನದಲ್ಲಿ ಮುಂದುವರೆದವನು ಜೀವನದಲ್ಲಿ ನಿಜವಾದ ಶಿಷ್ಯನಾಗಲು ಸಾಧ್ಯ ಎಂದರು.ಕಲ್ಯಾಣಸಿರಿ ಪ್ರಶಸ್ತಿ ಪ್ರದಾನ
ಬಟಗುರ್ಕಿಯ ಗದಿಗಯ್ಯ ದೇವರು ಆಶೀರ್ವಚನ ನೀಡಿದರು. ಈ ವೇಳೆ ಶಿವಾನಂದ ಮಠದ ಶಿವಾನಂದ ಶ್ರೀಗಳು, ಬಟಗುರ್ಕಿಯ ಗದಗಯ್ಯ ದೇವರು, ಜತ್ತನ ಮಹಾಂತ ದೇವರು, ಕೊಳ್ಳೂರಿನ ಮೃತ್ಯುಂಜಯ ದೇವರು, ಕುಮಾರ ಕುದರಗುಂಡ ಗವಾಯಿಗಳು, ಮಾಜಿ ಯೋಧರಾದ ಪರಶುರಾಮ ದಿವಾನದ, ಪರಮೇಶ್ವರ ಬೈರಪ್ಪನವರ, ಮುಖಂಡರಾದ ಗೌಡಪ್ಪಗೌಡ ಪಾಟೀಲ, ನಾಗರಾಜ ದೇಶಪಾಂಡೆ, ಮಾದೇವಪ್ಪ ಮುದಗಣ್ಣವರ, ರಮೇಶ ಬಾಳಿಕಾಯಿ, ಪರಶುರಾಮ ಕಲಾಲ, ಈಶ್ವರ ಗಂಗಾಯಿ ಸೇರಿದಂತೆ ಹಲವರಿದ್ದರು. ಬಸವರಾಜ ಹಿರೇಮಠ ಹಾಗೂ ಮೃತ್ಯುಂಜಯ ಜಡಿಮಠ ನಿರೂಪಿಸಿದರು.