ಕನ್ನಡಪ್ರಭ ವಾರ್ತೆ ಗುರುಮಠಕಲ್
ತಾಲೂಕಿನ ಗಿದ್ದ ಬಂಡಾ ತಾಂಡಾ (ಜಿ.ಬಿ.ತಾಂಡಾ)ದಲ್ಲಿ ಸೋಮವಾರ ಕೆ.ಕೆ.ಆರ್.ಡಿ.ಬಿ. ಅನುದಾನದ ಮೈಕ್ರೋ (ನಾನ್ ಸೋಶಿಯಲ್) ಯೋಜನೆಯಲ್ಲಿ ಜಿ.ಬಿ.ತಾಂಡಾದಿಂದ ಆರ್.ಹೊಸಳ್ಳಿ ತಾಂಡಾದವರೆಗಿನ ಮುಖ್ಯರಸ್ತೆ ನಿರ್ಮಾಣ ಹಾಗೂ ಎಲೇರಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.
2023-24ನೇ ಸಾಲಿನ ಅನುದಾನದ ಕೊನೆಯ ಕಾಮಗಾರಿಯಿದು. ಮುಂದೆ ಪ್ರಸಕ್ತ ಸಾಲಿನ ಅನುದಾನದಲ್ಲಿ ಕಾಮಗಾರಿಗಳನ್ನು ಕ್ಷೇತ್ರದ ಅಭಿವೃದ್ಧಿಗೆ ಪೂರಕ ಮತ್ತು ಜನರ ಬಹು ದಿನಗಳ ಅತ್ಯವಶ್ಯಕ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಈಗಾಗಲೇ ಜಿ.ಬಿ. ತಾಂಡಾದಲ್ಲಿ ಆರ್.ಒ. ಪ್ಲಾಂಟ್ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಸಿಸಿ ರಸ್ತೆ ಮತ್ತು ಚರಂಡಿಗೆ 50 ಲಕ್ಷ ರು.ಗಳು ಒದಗಿಸಿದ್ದು, ಎಲೇರಿ ಗ್ರಾಮದ ವಾರಣಾಸಿ ಹಿರೇಮಠದ ಜೀರ್ಣೋದ್ಧಾರಕ್ಕೆ 50 ಲಕ್ಷ ರು.ಗಳು ಅನುದಾನದ ಹಂಚಿಕೆ, ಆಶಾಪುರ ತಾಂಡಾ, ಹಳ್ಳಿ ತಾಂಡಾಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ವಿಶೇಷ ತಹಸೀಲ್ದಾರ್ ಗುಂಡಪ್ಪ, ಗ್ರಾ.ಪಂ. ಅಧ್ಯಕ್ಷ ಬಸವರಾಜ ಎನ್. ಕಣೇಕಲ್, ಅಜಯರೆಡ್ಡಿಗೌಡ ಶಿವರಾಯ ಎಲೇರಿ, ತಾಪಂ ಅಧಿಕಾರಿ ಅಂಬ್ರೀಶ ಪಾಟೀಲ್, ಗ್ರಾಮೀಣ ನೀರು ಸರಬರಾಜು ಎಇಇ ಬಸವರಾಜ ಐರೆಡ್ಡಿ, ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ, ನಿರ್ಮಿತಿ ಕೇಂದ್ರ ಎಇಇ ಕಿರಣಕುಮಾರ, ಪಿಎಸ್ಐ ಭೀಮರಾಯ, ಪಿಡಿಒ ಶೋಭಾ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಈಶ್ವರ ರಾಠೋಡ ಸೇರಿದಂತೆ ಇತರರಿದ್ದರು.