ಕೊಂಗನಹೊಸೂರು ಗ್ರಾಮದ ಡೈರಿ ಬಳಿ, ಪಶುವೈದ್ಯಾಧಿಕಾರಿ ಮಲ್ಲಿಕಾರ್ಜುನ ಮಸಲವಾಡ ಅವರು ರಥೋತ್ಸವಕ್ಕೆ ತೆರಳುವ ಭಕ್ತರಿಗೆ ಉಚಿತವಾಗಿ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಿದರು.
ಹರಪನಹಳ್ಳಿ: ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ಅದ್ಧೂರಿಯಾಗಿ ಶ್ರೀ ಬಸವೇಶ್ವರ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು.
ಬೆಳಗ್ಗೆಯಿಂದಲೇ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ತಳಿರು ತೋರಣ, ವಿವಿಧ ಬಣ್ಣಗಳ ಧ್ವಜಗಳನ್ನು ರಥಕ್ಕೆ ಅಲಂಕರಿಸಲಾಗಿತ್ತು. ಸಂಜೆ ಚಿಗಟೇರಿ, ಬಾವಿಹಳ್ಳಿ, ನಂದಿಬೇವೂರು ತಾಂಡಾ, ಎಂ. ಕಲ್ಲಹಳ್ಳಿ, ಕಣಿವಿಹಳ್ಳಿ, ಮಹಜನದಹಳ್ಳಿ, ಕೊಂಗನಹೊಸೂರು ಸೇರಿದಂತೆ ಸುತ್ತಮುತ್ತಲಿನ ಭಕ್ತರು ನಂದಿಬೇವೂರು ಶ್ರೀ ಬಸವೇಶ್ವರರ ರಥೋತ್ಸವಕ್ಕೆ ಆಗಮಿಸಿ ಸಂಭ್ರಮ-ಸಡಗರದಿಂದ ರಥವನ್ನು ಎಳೆದರು. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.
ಕೊಂಗನಹೊಸೂರು ಗ್ರಾಮದ ಡೈರಿ ಬಳಿ, ಪಶುವೈದ್ಯಾಧಿಕಾರಿ ಮಲ್ಲಿಕಾರ್ಜುನ ಮಸಲವಾಡ ಅವರು ರಥೋತ್ಸವಕ್ಕೆ ತೆರಳುವ ಭಕ್ತರಿಗೆ ಉಚಿತವಾಗಿ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಿದರು. ಬಿ. ವೀರಣ್ಣ, ಕೆಪಿಎಂ ಕೊಟ್ರಯ್ಯ, ಬೆಣ್ಣಿಹಳ್ಳಿ ಚನ್ನಬಸಪ್ಪ, ಯಲ್ಲಾಪುರ ನಿಂಗಪ್ಪ, ಮಹೇಶ್, ಕೆ. ಮಂಜುನಾಥ ಇದ್ದರು.
ಮುತ್ತಿಗಿ ದುರುಗಮ್ಮ ದೇವಿ ರಥೋತ್ಸವ:
ತಾಲೂಕಿನ ಮುತ್ತಿಗಿ ಗ್ರಾಮದಲ್ಲಿ ಶ್ರೀ ದುರುಗಮ್ಮದೇವಿಯ ರಥೋತ್ಸವ ಜರುಗಿತು. ಬೆಳಗ್ಗೆ ವಿಶೇಷ ಪೂಜೆ ನೇರವೇರಿಸಲಾಯಿತು. ರಥೋತ್ಸವಕ್ಕೆ ಆಗಮಿಸಿದ ಭಕ್ತರು ತೇರಿಗೆ ಕಾಯಿ ಒಡೆದು, ಬಾಳೆಹಣ್ಣು ಸಮರ್ಪಿಸಿದರು. ಸಕಲ ವಾದ್ಯಗಳೊಂದಿಗೆ ರಥ ಎಳೆಯಲಾಯಿತು.
ಅರ್ಚಕ ಗುರುಬಸವರಾಜ, ಎ.ಎಂ. ಕೊಟ್ರಯ್ಯ, ಸಾಬಳ್ಳಿ ಮಂಜಪ್ಪ, ಕೆ. ರಾಮಪ್ಪ, ದುರುಗಪ್ಪ, ಡಿ. ಹನುಮಂತಪ್ಪ, ಕೆ. ಹಾಲಪ್ಪ, ಎಸ್. ಗೋಣೆಪ್ಪ, ಯು. ದುರುಗಪ್ಪ, ವೀರೇಶ್, ಚನ್ನಬಸಪ್ಪ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.