ವಿದ್ಯಾರ್ಥಿಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ದೇಶಕ್ಕೆ ಕೀರ್ತಿತರುವ ಕೆಲಸಮಾಡಬೇಕು : ನಾಗರಾಜ ಹಿತ್ತಲಮಕ್ಕಿ

KannadaprabhaNewsNetwork | Published : Apr 5, 2025 12:51 AM

ಸಾರಾಂಶ

ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳನ್ನ ಅಧ್ಯಯನ ಮಾಡಿ ವೈಜ್ಞಾನಿಕ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸ ಬೇಕು

ಗೋಕರ್ಣ: ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳನ್ನ ಅಧ್ಯಯನ ಮಾಡಿ ವೈಜ್ಞಾನಿಕ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸ ಬೇಕು, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತಮ್ಮ ಉಜ್ವಲ್ ಭವಿಷ್ಯ ರೂಪಿಸಿಕೊಂಡು ಪಾಲಕರಿಗೂ, ಶಾಲೆಗೂ ಕೀರ್ತಿ ತರಬೇಕು ಎಂದು ಸಾಣಿಕಟ್ಟಾ ಸದ್ಗುರು ನಿತ್ಯಾನಂದ ಪೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ ಹೇಳಿದರು.

ಅವರು ಅಂಕೋಲಾ ಲಯನ್ಸ್ ಕ್ಲಬ್ ಕರಾವಳಿಯ ಸದಸ್ಯರು ಪೌಢಶಾಲೆಗೆ ಕೊಡುಗೆಯಾಗಿ ನೀಡಿದ ವಿಜ್ಞಾನದ ಪಾಠೋÃಪಕರಣಗಳನ್ನು ಸ್ವೀಕರಿಸಿ ನಂತರ ನಡೆದ ಸಭಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಹಲವು ಅನುಕೂಲತೆಗಳನ್ನ ಶಾಲೆಗೆ ಒದಗಿಸಿದ್ದು,ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿ, ಕೊಡಗೆ ನೀಡಿದ ಲಯನ್ಸ ಕ್ಲಬ್ ಕರಾವಳಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ಲಯನ್ಸ್ ಕ್ಲಬ್ ಕರಾವಳಿ ಅಧ್ಯಕ್ಷರಾದ ದೇವಾನಂದ ಗಾಂವಕರ್ ಮಾತನಾಡಿ ಸರ್ಕಾರಿ, ಅನುದಾನಿತ ಶಾಲೆಗಳ ಶ್ರೇಯೋಭಿವೃದ್ಧಿಗೆ ಟೊಂಕ ಕಟ್ಟಿನಿಂತ ಸರ್ಕಾರೇತರ ಸೇವಾನಿರತ ಸಂಸ್ಥೆ ನಮ್ಮದು, ಈ ಪಾಠೋಪಕರಣಗಳ ಉಪಯೋಗ ಪಡೆದು ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ದಾನಿಗಳಲ್ಲೊಬ್ಬರಾದ ಡಾ. ಕರುಣಾಕರ ನಾಯ್ಕ ಮಾತನಾಡಿ ಸುಂದರ ಪರಿಸರದ ಕನ್ನಡ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುವ ಭಾಗ್ಯ ನಿಮ್ಮದು ಎಂದರು.

ಮುಖ್ಯಾಧ್ಯಾಪಕಿ ಶಾರದಾ ನಾಯಕ ಸ್ವಾಗತ ಮಾಡಿದರು.

ಈ ವೇಳೆ ಪ್ರೌಢಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ವಿಶಾಲ ನಾಯಕ. ಲಯನ್ಸ್ ಕ್ಲಬ್ ಕರಾವಳಿಯ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಹರಿಕಾಂತ್ರ, ಲಯನ್ಸ್ ಕಾರ್ಯದರ್ಶಿ ಮಂಜುನಾಥ ನಾಯಕ, ಖಜಾಂಚಿ ಗಿರಿಧರ ಆಚಾರ್ಯ, ಲಯನ್ಸ ಸದಸ್ಯರಾದ ಸುಬ್ರಮಣ್ಯ ಉಡುಪಿ, ಸಂಜಯ್ ಅರುಂದೇಕರ್ , ಡಾ. ಕರುಣಾಕರ್ ನಾಯ್ಕ,ಗಣಪತಿ ನಾಯಕ ಉಪಸ್ಥಿತರಿದ್ದರು. ಶಾಲೆಯ ಸಿಬ್ಬಂದಿ ವರ್ಗ, ಶಾಲೆಯ ವಿದ್ಯಾರ್ಥಿವೃಂದ ಊರ ನಾಗರಿಕರು ಪಾಲ್ಗೊಂಡಿದ್ದರು. ಶಿಕ್ಷಕ ಶ್ರೀನಿವಾಸ ನಾಯಕರು ವಂದಿಸಿದರು. ಹೇಮಲತಾ ಚೌಡನಕರ್ ಕಾರ್ಯಕ್ರಮ ನಿರೂಪಿಸಿದರು.

Share this article