ಜಿಎಂ ವಿದ್ಯಾನಿಕೇತನ್‌ ಪಬ್ಲಿಕ್ ಸ್ಕೂಲ್‌: ‘ಮರವೇ ಮರ್ಮರವೇ’ ನಾಟಕ ಪ್ರದರ್ಶನ

KannadaprabhaNewsNetwork |  
Published : Dec 18, 2025, 02:45 AM IST
17ನಾಟಕ | Kannada Prabha

ಸಾರಾಂಶ

‘ಮರವೇ ಮರ್ಮರ’ವೇ ಮಕ್ಕಳ ನಾಟಕದ ರಂಗಪ್ರದರ್ಶನ ಬ್ರಹ್ಮಾವರ ಜಿಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಮಂಗಳವಾರ ನಡೆಯಿತು.

ಬ್ರಹ್ಮಾವರ: ಡಾ. ಚಂದ್ರಶೇಖರ ಕಂಬಾರ ಬರೆದ ಕಥೆಗಳನ್ನಾಧರಿಸಿದ ಕೆ. ಜಿ. ಕೃಷ್ಣಮೂರ್ತಿ, ಸಜಿ ಆರ್. ತುಮರಿ ಅರುಣ ಎನ್, ಕಿನ್ನರಿ ಮೇಳದವರು ನಿರ್ದೇಶಿಸಿರುವ ‘ಮರವೇ ಮರ್ಮರ’ವೇ ಮಕ್ಕಳ ನಾಟಕದ ರಂಗಪ್ರದರ್ಶನ ಇಲ್ಲಿನ ಜಿಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಮಂಗಳವಾರ ನಡೆಯಿತು.

ಜಾನಪದ ಕಥೆಗಳನ್ನಾಧರಿಸಿದ ರಂಗ ಪ್ರಸ್ತುತಿಯಲ್ಲಿ ಕಾಡು ಮತ್ತು ನಾಡಿಗೆ ತಾಯಿ ಮಕ್ಕಳ ಸಂಬಂಧವಿದೆ. ಆದರೆ ಪ್ರಕೃತಿ ಕೊಟ್ಟ ವರಗಳನ್ನು ಮನುಷ್ಯ ತನ್ನ ದುರಾಸೆಯಿಂದಾಗಿ ಶಾಪವಾಗಿ ಪರಿವರ್ತಿಸಿಕೊಳ್ಳುತ್ತಿದ್ದಾನೆಂಬ ಅಂಶವನ್ನು ಪ್ರದರ್ಶನದ ಮೂಲಕ ಬೆಳಕಿಗೆ ತಂದರು. ಇದ್ದಿಲು ಮಹಾರಾಜ, ಬಿದಿರಿನ ಚೆಲುವೆ ಮತ್ತು ಆತ್ಮಹತ್ಯೆ ಎಂಬ ಮೂರು ಕಥೆಗಳ ಆಯ್ಕೆಯ ಮೂಲಕ ರಂಗ ಪ್ರಸ್ತುತಿ ಏರ್ಪಡಿಸಿದ್ದರು.ವಿದ್ಯಾರ್ಥಿಗಳು ಕಾಡು ಮತ್ತು ನಾಡಿಗಿರುವ ತಾಯಿಯ ಸಂಬಂಧ ಮತ್ತು ಮರದ ರಕ್ಷಣೆಯ ಕುರಿತು ಮನುಷ್ಯರಿಗಿರುವ ಜವಾಬ್ದಾರಿಗಳನ್ನು ಅರಿತುಕೊಂಡರು. ವಿದ್ಯಾರ್ಥಿಗಳಿಗೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಸಂದೇಶ ನೀಡಿದರು.

ಸಂಸ್ಥೆಯ ಪ್ರಾಂಶುಪಾಲ ಜಾರ್ಜ್ ಕುರಿಯನ್‌ ರಂಗ ಪ್ರದರ್ಶನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ರಂಗಪ್ರದರ್ಶನದ ಕಾರ್ಯಕ್ರಮದಲ್ಲಿ ಜಿ ಎಮ್ ವಿದ್ಯಾನಿಕೇತನ್ ಹಾಗೂ ಜಿ ಎಮ್ ಗ್ಲೋಬಲ್ ಸ್ಕೂಲ್‌ನ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ : ಶ್ರೀ ಶ್ರೀ
ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ