ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ನಂದಿನಿ ಬ್ರಾಹ್ಮಣ ಸಭಾ ವತಿಯಿಂದ ಗೋಪೂಜೆ

KannadaprabhaNewsNetwork |  
Published : Nov 17, 2026, 02:45 AM IST
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ನಂದಿನಿ ಬ್ರಾಹ್ಮಣ ಸಭಾ ವತಿಯಿಂದ ಗೋಪೂಜೆ | Kannada Prabha

ಸಾರಾಂಶ

ಹಬ್ಬಗಳ ಆಚರಣೆ ಮೂಲಕ ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯ ಸಾಧ್ಯವಿದೆ. ಸಾಧಕರನ್ನು ಗುರುತಿಸಿ, ಗೌರವಿಸುವುದರಿಂದ ಸಾಧನೆಗೆ ಮತ್ತಷ್ಟು ಪ್ರೇರಣೆಯಾಗಲಿದೆಯೆಂದು ಕ.ಸಾ.ಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಹೇಳಿದರು.ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ನಂದಿನಿ ಬ್ರಾಹ್ಮಣ ಸಭಾ ವತಿಯಿಂದ ಕಟೀಲು ಮಲ್ಲಿಗೆಯಂಗಡಿ ಬಳಿ ಜರಗಿದ ಗೋಪೂಜೆ ಹಾಗೂ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೂಲ್ಕಿ: ಹಬ್ಬಗಳ ಆಚರಣೆ ಮೂಲಕ ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯ ಸಾಧ್ಯವಿದೆ. ಸಾಧಕರನ್ನು ಗುರುತಿಸಿ, ಗೌರವಿಸುವುದರಿಂದ ಸಾಧನೆಗೆ ಮತ್ತಷ್ಟು ಪ್ರೇರಣೆಯಾಗಲಿದೆಯೆಂದು ಕ.ಸಾ.ಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಹೇಳಿದರು.ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ನಂದಿನಿ ಬ್ರಾಹ್ಮಣ ಸಭಾ ವತಿಯಿಂದ ಕಟೀಲು ಮಲ್ಲಿಗೆಯಂಗಡಿ ಬಳಿ ಜರಗಿದ ಗೋಪೂಜೆ ಹಾಗೂ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ವಹಿಸಿದ್ದು , ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ನಳಪಾಕ ತಜ್ಞ ವೆಂಕಟೇಶ್ ಭಟ್ ಪಾವಂಜೆ, ಉರಗತಜ್ಞ ಯತೀಶ್ ಶೆಟ್ಟಿ ಕಟೀಲು , ಕೃಷಿ ಮತ್ತು ಹೈನುಗಾರಿಕೆಯ ಸಾಧಕ ವಿಷ್ಣುಮೂರ್ತಿ ಆಚಾರ್ಯ ಕತ್ತಲ್ ಸಾರ್ ರವರನ್ನು ಗೌರವಿಸಲಾಯಿತು.

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಧಾರ್ಮಿಕ ಪರಿಷತ್‌ ಸದಸ್ಯ ಸುಬ್ರಹ್ಮಣ್ಯ ರಾವ್ ಕೊರಿಯಾರ್, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಈಶ್ವರ ಕಟೀಲು, ಉದ್ಯಮಿ ಅಭಿಲಾಶ್ ಶೆಟ್ಟಿ, ಕಟೀಲು ನಂದಿನಿ ಬ್ರಾಹ್ಮಣ ಸಭಾದ ಅಧ್ಯಕ್ಷ ಪದ್ಮನಾಭ ಭಟ್, ಎಕ್ಕಾರು ಮಠದ ಹರಿದಾಸ್ ಉಡುಪ, ವೇದವ್ಯಾಸ ಉಡುಪ ಕೊಡೆತ್ತೂರು, ಗೋಪಾಲಕೃಷ್ಣ ಆಸ್ರಣ್ಣ, ಸೌಜನ್ಯ ಆಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಹಾಗೂ ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು, ಪು.ಗುರುಪ್ರಸಾದ್ ಭಟ್ ಕಟೀಲು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ