ದೇವರಿಗೆ ಆಡಂಬರದ ಪೂಜೆ ಬೇಕಿಲ್ಲ

KannadaprabhaNewsNetwork |  
Published : Jan 07, 2024, 01:30 AM ISTUpdated : Jan 07, 2024, 04:55 PM IST
ಮೂಡ್ಕಣಿ ಅಯ್ಯಪ್ಪ ಭಕ್ತವೃಂದದಿಂದ ಗುರುವಂದನೆ ನಡೆಸಿರುವುದು | Kannada Prabha

ಸಾರಾಂಶ

ತಂದೆ-ತಾಯಿ ಮಕ್ಕಳಿಗೆ ಸಂಸ್ಕಾರ ನೀಡಬೇಕು, ಧರ್ಮಿಷ್ಟರನ್ನಾಗಿ ಮಾಡಬೇಕು. ಇದರಲ್ಲಿ ತಾಯಿ ಪಾತ್ರ ಹೆಚ್ಚಿನದಾಗಿರುತ್ತದೆ. ದೇಶ ಧರ್ಮದ ಪರ ನಡೆಯಬೇಕಾದರೆ ಮಕ್ಕಳನ್ನು ಧರ್ಮಿಷ್ಟರನ್ನಾಗಿಸುವ ಅವಶ್ಯಕತೆ ಇದೆ.

ಹೊನ್ನಾವರ: ತಾಲೂಕಿನ ಮೂಡ್ಕಣಿ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ವತಿಯಿಂದ 18ನೇ ವರ್ಷದ ಅನ್ನದಾನ ಹಾಗೂ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮ ನಿಮಿತ್ತ ಬ್ರಹ್ಮಾಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರಿಗೆ ಗುರುವಂದನೆ ನಡೆಯಿತು. ಶ್ರೀಗಳನ್ನು ಪೂರ್ಣಕುಂಭದ ಮೂಲಕ ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ಸನ್ನಿದಾನಕ್ಕೆ ಕರೆತರಲಾಯಿತು. ಆನಂತರ ಗುರುಪಾದುಕೆ ಪೂಜೆ ನಡೆಸಲಾಯಿತು.ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀಗಳು, ದೇವರಿಗೆ ಆಡಂಬರದ ಪೂಜೆ ಬೇಕಿಲ್ಲ. 

ಭಕ್ತಿ, ಶ್ರದ್ಧೆಯಿಂದ ನಮಿಸಿದರೆ ಒಲಿಯುತ್ತಾನೆ. ತಂದೆ-ತಾಯಿ ಮಕ್ಕಳಿಗೆ ಸಂಸ್ಕಾರ ನೀಡಬೇಕು, ಧರ್ಮಿಷ್ಟರನ್ನಾಗಿ ಮಾಡಬೇಕು. ಇದರಲ್ಲಿ ತಾಯಿ ಪಾತ್ರ ಹೆಚ್ಚಿನದಾಗಿರುತ್ತದೆ. ದೇಶ ಧರ್ಮದ ಪರ ನಡೆಯಬೇಕಾದರೆ ಮಕ್ಕಳನ್ನು ಧರ್ಮಿಷ್ಟರನ್ನಾಗಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಸೀಮಾ ಮುಖ್ಯಪ್ರಾಣ ದೇವಾಲಯದ ಅರ್ಚಕ ಸೂರಾಲು ಚಂದ್ರಶೇಖರ ಭಟ್ಟ ಮಾತನಾಡಿ, ಅಯ್ಯಪ್ಪನ ವೃತಾಚರಣೆ ಕೇಲವೆ ದಿನಕ್ಕೆ ಸಿಮೀತವಾಗಬಾರದು. ಮಾಲೆ ವಿಸರ್ಜನೆ ನಂತರವು ವೃತಧಾರಿಯಾಗಿದ್ದ ಸಂದರ್ಭದಲ್ಲಿನ ನಡೆ-ನುಡಿ ಅನುಸರಿಸಬೇಕು ಎಂದು ಮಾಲಾಧಾರಿ ಸ್ವಾಮಿಗಳಿಗೆ ಸಲಹೆ ನೀಡಿದರು‌.

ಶ್ರೀ ಶಂಭುಲಿಂಗೇಶ್ವರ ಆಡಳಿತ ಮಂಡಳಿ ಅಧ್ಯಕ್ಷ ಟಿ.ಟಿ. ನಾಯ್ಕ ಮಾತನಾಡಿ, ಕೆಲವರಿಗೆ ದೇವತಾಕಾರ್ಯ, ಪ್ರವಚನಗಳಲ್ಲಿ ಭಾಗವಹಿಸಲು ಪುರುಸೋತ್ತಿಲ್ಲ. ಪ್ರವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮನುಷ್ಯ ಜನ್ಮದಲ್ಲಿ ಸಾರ್ಥಕತೆ ಕಾಣಬಹುದು ಎಂದರು.

ಮಾಲಾಧಾರಿಗಳು ವೃತಾಚರಣೆ ನಂತರವು ಸಹ ಇತರರಿಗೆ ಮಾರ್ಗದರ್ಶಕರಂತಿರಬೇಕು ಎಂದ ಅವರು, ಪ್ರತಿ ವರ್ಷವು ಸನ್ನಿಧಾನದಲ್ಲಿ ಮಾಲೆಧರಿಸುವ ಮಾಲಾಧಾರಿಗಳ ವಸ್ತ್ರದ ಖರ್ಚು-ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ ಸನ್ನಿಧಾನದ ರಮೇಶ ಗುರುಸ್ವಾಮಿ, ಪಿ.ಟಿ. ನಾಯ್ಕ ಉಪಸ್ಥಿತರಿದ್ದರು. 

ಬ್ರಹ್ಮಾಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಭಕ್ತರಿಗೆ ಮಂತ್ರಾಕ್ಷತೆ ನೀಡಿದರು.ಸಭಾ ಕಾರ್ಯಕ್ರಮದ ನಂತರ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ, ಅನ್ನಪೂರ್ಣೆಶ್ವರಿ ಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಿತು. ಸಂಜೆ 6 ಗಂಟೆಗೆ ದುರ್ಗಾದೀಪ ನಮಸ್ಕಾರ, ಮಹಾಪೂಜೆ ನಡೆಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ