ನಿಸ್ವಾರ್ಥ ಸೇವೆ ಮಾಡುವವರಿಗೆ ದೇವರೇ ಶಕ್ತಿ ಕೊಡುತ್ತಾನೆ

KannadaprabhaNewsNetwork |  
Published : Nov 21, 2025, 01:00 AM IST
ಸಿಕೆಬಿ-1 ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ 3192 ಸಂಸ್ಥೆಯ ಡಿಸ್ಟ್ರಿಕ್ಟ್ ಗರ್ವನರ್ ಪ್ರೊ ರೋಟರಿಯನ್ ಎಲಿಜಬೆತ್ ಚೆರಿಯನ್ ಅವರು 10 ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿದರು. ಮೆಡಿಕಲ್ ಕಾಲೇಜಿನ ಸಿಎಸ್ಆರ್ ನಿರ್ದೇಶಕರಾದ ಲತಾ ಪ್ರಸಾದ್, ಪ್ರೀತಿ ಫೌಂಡೇಶನ್ ಮುಖ್ಯಸ್ಥರಾದ ವೇಲುಪತಿ ಹಾಗೂ ಡಾ ಬಿಎನ್ ನರಸಿಂಹ ಮೂರ್ತಿ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಸ್ವಲ್ಪ ಒಳ್ಳೆಯದು, ಭಾಗಶಃ ಒಳ್ಳೆಯದು ಎಂಬುದು ಸರಿಯಲ್ಲ. ಅರ್ಧ ಸ್ವಾರ್ಥ, ಇನ್ನರ್ಧ ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡುತ್ತೇನೆ ಎಂದರೆ ಭಗವಂತ ಒಪ್ಪುವುದಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಿಸ್ವಾರ್ಥಿಯಾಗಿ ಜನರಿಗೆ ಒಳ್ಳೆಯದನ್ನು ಮಾಡಲು ನಿರ್ಧರಿಸಿ ಮುಂದುವರಿಯುವವರಿಗೆ ದೇವರೇ ಶಕ್ತಿ ಕೊಡುತ್ತಾನೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''''''ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ''''''''ದ 96ನೇ ದಿನದ ಆಶೀರ್ವಚನ ನೀಡಿದ ಸದ್ಗುರು, ನಿಸ್ವಾರ್ಥ ಮನೋಭಾವವು ಭೂಮಿಯ ಮೇಲಿರುವ ಶ್ರೇಷ್ಠ ಶಕ್ತಿ ಎಂದು ಪ್ರತಿಪಾದಿಸಿದರು.ಸ್ವಲ್ಪ ಒಳ್ಳೆಯದು, ಭಾಗಶಃ ಒಳ್ಳೆಯದು ಎಂಬುದು ಸರಿಯಲ್ಲ. ಅರ್ಧ ಸ್ವಾರ್ಥ, ಇನ್ನರ್ಧ ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡುತ್ತೇನೆ ಎಂದರೆ ಭಗವಂತ ಒಪ್ಪುವುದಿಲ್ಲ. ಭಕ್ತಿಯಲ್ಲಿ ಯಾವಾಗಲೂ ಪೂರ್ಣವಾಗಿ ಮುಳುಗಿರಬೇಕು. ಸಂಪೂರ್ಣವಾಗಿ ಅರ್ಪಿಸಿಕೊಂಡಾಗ ಮಾತ್ರ ಎಲ್ಲವನ್ನು ಸಾಧಿಸಲು ಸಾಧ್ಯವಾಗುತ್ತದೆ. ಶುದ್ಧ ಹೃದಯದ ಜನರಿಂದಾಗಿ ಈ ಮಿಷನ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಒಬ್ಬ ವ್ಯಕ್ತಿಯ ಕೊಡುಗೆಯಿಂದ ಸಂಸ್ಥೆಯನ್ನು ನಿರ್ಮಿಸಿಲ್ಲ, ಇದು ಸಾಮೂಹಿಕ ಶಕ್ತಿಯಾಗಿದೆ ಎಂದು ವಿವರಿಸಿದರು.ನಮ್ಮ ಶಾಸ್ತ್ರಗಳು ಅದ್ಭುತವಾದ ಸತ್ಯಗಳನ್ನು ಹೇಳುತ್ತವೆ. ಜಗತ್ತಿನ ಯಾವುದೇ ತತ್ತ್ವಶಾಸ್ತ್ರ, ಇತರ ಗ್ರಂಥಗಳು ಹೀಗಿರಲಾರವು. ಶಾಸ್ತ್ರಗಳು ನಮ್ಮನ್ನು ನೆನಪಿಸುತ್ತವೆ. ನಮಗೆ ಸತ್ಯವನ್ನು ಪುನರಾವರ್ತಿಸುತ್ತಲೇ ಇರುತ್ತವೆ, ನಾವು ಶಾಸ್ತ್ರಗಳನ್ನು ಹೆಚ್ಚು ಓದುತ್ತಿದ್ದಂತೆ ಅದು ನಮ್ಮ ಭಾಗವಾಗುತ್ತದೆ. ಸ್ವಲ್ಪ ಸಮಯದ ನಂತರ ಅವುಗಳನ್ನು ನಂಬುವುದು ಮತ್ತು ಪಾಲಿಸುವುದು ಅಭ್ಯಾಸವಾಗುತ್ತದೆ ಎಂದು ಹೇಳಿದರು.ಸಿಎಸ್‌ಆರ್ ಸರ್ಕಲ್ ಆಫ್ ಹಾನರ್:ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಬೆಂಬಲ ನೀಡುತ್ತಿರುವ ನೀಡುತ್ತಿರುವ ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ 3192 ಸಂಸ್ಥೆಗೆ, ಡಫ್ನರ್ ಇನ್​ಸ್ಟ್ರುಮೆಂಟ್ಸ್‌ಗೆ, ಎಲಕಾನ್ಸ್ ಪ್ರೈವೇಟ್ ಲಿಮಿಟೆಡ್‌ಗೆ, ಸಿಲಿಕಾನ್ ವ್ಯಾಲಿ ಮೂಲದ ಹೋಮ್ ಆಫ್ ಹೋಪ್ ಸಂಸ್ಥೆಗೆ, ಗುರುಕುಲಂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡುತ್ತಿರುವ ಮಿಷನ್ ಸಮೃದ್ಧಿ ಕಂಪನಿಗೆ, ಆರೋಗ್ಯ ಕ್ಷೇತ್ರಕ್ಕೆ ಬೆಂಬಲ ನೀಡುತ್ತಿರುವ ಎಂಜೆನ್ ಗ್ಲೋಬಲ್ ಸಂಸ್ಥೆಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಕೇಂದ್ರಗಳ ಲೋಕಾರ್ಪಣೆ:

ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ 3192 ಸಂಸ್ಥೆಯ ನೆರವಿನೊಂದಿಗೆ 10 ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಲೋಕಾರ್ಪಣೆಗೊಳಿಸಿದರು. ಅನೇಕಲ್, ಗೌರಿಬಿದನೂರು, ಹೊಸಕೋಟೆ, ಚನ್ನಹಳ್ಳಿ, ಹಾಸನ, ಶಿಡ್ಲಘಟ್ಟ, ಪೆನುಮಾಲೆ, ಶಿರಸಿ ಹಾಗೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಸೂಳಗಿರಿ ತಾಲೂಕಿನ ದೊಡ್ನಹಳ್ಳಿಯಲ್ಲಿ ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳು ಕಾರ್ಯಾಚರಣೆ ಆರಂಭಿಸಿದವು.ಅಮೆರಿಕ ಪ್ರತಿನಿಧಿ ರೆಜಾರ್ಟಾ ಟಬಾಕು ಮತ್ತು ನೆದರ್ಲ್ಯಾಂಡ್ಸ್ ಪ್ರತಿನಿಧಿ ಪವನ್ ದದ್ಲಾನಿ ಅವರು ತಮ್ಮ ಜೀವನದಲ್ಲಿನ ಆಧ್ಯಾತ್ಮಿಕ ಬದಲಾವಣೆಯ ಅನುಭವವನ್ನು ಹಂಚಿಕೊಂಡರು

ಸಿಕೆಬಿ-1 ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ 3192 ಸಂಸ್ಥೆಯ ಡಿಸ್ಟ್ರಿಕ್ಟ್ ಗರ್ವನರ್ ಪ್ರೊ ರೋಟರಿಯನ್ ಎಲಿಜಬೆತ್ ಚೆರಿಯನ್ ಅವರು 10 ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿದರು.

PREV

Recommended Stories

ಅಧಿಕಾರ ಕೊಟ್ಟಿರುವುದು 5 ವರ್ಷಕ್ಕೆ: ಸಿಎಂ ಸಿದ್ದರಾಮಯ್ಯ
ಕೊಟ್ಟ ಮಾತನ್ನು ಎಂದೂ ಸಿಎಂ ತಪ್ಪೋಲ್ಲ : ಡಿಕೆಸು