ನಿಂದನೆ ಎದುರಿಸುವ ಧೈರ್ಯ ದೇವರು ಕೊಟ್ಟಿದ್ದಾನೆ: ಕುಮಾರಸ್ವಾಮಿ

KannadaprabhaNewsNetwork |  
Published : Oct 22, 2026, 01:30 AM IST
೨೧ಕೆಎಂಎನ್‌ಡಿ-೩ಮದ್ದೂರು ತಾಲೂಕಿನ ಬೆಸಗರಹಳ್ಳಿ ಅಡ್ಡರಸ್ತೆಯಲ್ಲಿ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸ್ವೀಕರಿಸಿದರು. | Kannada Prabha

ಸಾರಾಂಶ

ತಾಯಿ ಶ್ರೀಚಾಮುಂಡೇಶ್ವರಿ ಮತ್ತು ರಾಜ್ಯದ ಏಳು ಕೋಟಿ ಜನರ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದಾಗುತ್ತದೆ. ದುಡುಕಿ ನಿರ್ಧಾರ ಮಾಡುವುದು ಬೇಡ. ರಾಜಕೀಯದಲ್ಲಿ ಇಂತಹ ಸಾಕಷ್ಟು ನಿಂದನೆಗಳನ್ನು ಎದುರಿಸಿದ್ದೇನೆ. ಅದನ್ನೆಲ್ಲಾ ಎದುರಿಸುವ ಧೈರ್ಯವನ್ನು ಭಗವಂತ ನನಗೆ ಕೊಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಮದ್ದೂರು

ನಿಂದನೆ ಎದುರಿಸುವ ಧೈರ್ಯವನ್ನು ದೇವರು ನನಗೆ ಕೊಟ್ಟಿದ್ದಾನೆ. ತೇಜೋವಧೆ ಮಾಡುವ ವ್ಯಕ್ತಿಗೆ ಹೊಡೆಸುವುದು ನಮ್ಮ ಸಂಸ್ಕೃತಿಯಲ್ಲ. ನ್ಯಾಯದ ದಾರಿಯಲ್ಲಿ ಹೋರಾಟ ಮಾಡೋಣ. ತಾಳ್ಮೆ ಇರಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಹೇಳಿದರು.

ನಾಗಮಂಗಲದ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ತಾಲೂಕಿನ ಬೆಸಗರಹಳ್ಳಿ ಅಡ್ಡರಸ್ತೆಯಲ್ಲಿ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ತಮ್ಮ ವಿರುದ್ಧ ವೈಯಕ್ತಿಕ ನಿಂದನೆ ಮಾಡಿರುವ ವ್ಯಕ್ತಿಯನ್ನು ಮಟ್ಟ ಹಾಕಿ ಎಂದು ಆಕ್ರೋಶ ಭರಿತ ಕಾರ್ಯಕರ್ತರ ಗುಂಪು ಕುಮಾರಸ್ವಾಮಿ ಮುಂದೆ ಅಳಲು ತೋಡಿಕೊಂಡರು.

ಕಾರ್ಯಕರ್ತರನ್ನು ಸಮಾಧಾನಪಡಿಸಿದ ಅವರು, ತಾಯಿ ಶ್ರೀಚಾಮುಂಡೇಶ್ವರಿ ಮತ್ತು ರಾಜ್ಯದ ಏಳು ಕೋಟಿ ಜನರ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದಾಗುತ್ತದೆ. ದುಡುಕಿ ನಿರ್ಧಾರ ಮಾಡುವುದು ಬೇಡ. ರಾಜಕೀಯದಲ್ಲಿ ಇಂತಹ ಸಾಕಷ್ಟು ನಿಂದನೆಗಳನ್ನು ಎದುರಿಸಿದ್ದೇನೆ. ಅದನ್ನೆಲ್ಲಾ ಎದುರಿಸುವ ಧೈರ್ಯವನ್ನು ಭಗವಂತ ನನಗೆ ಕೊಟ್ಟಿದ್ದಾನೆ. ನ್ಯಾಯದ ದಾರಿಯಲ್ಲಿರುವ ನಾವು ಯಾರಿಗೂ ಹೆದರುವುದು ಬೇಡ. ಅಡ್ಡ ಮಾರ್ಗ ಹಿಡಿಯುವುದೂ ಬೇಡ. ಸತ್ಯದ ದಾರಿಯಲ್ಲಿ ಹೋರಾಟ ಮಾಡೋಣ. ಅಲ್ಲಿವರೆಗೆ ತಾಳ್ಮೆಯಿಂದ ಇರಿ ಎಂದು ಸಚಿವ ಕುಮಾರಸ್ವಾಮಿ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಮಾಜಿ ಶಾಸಕ ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಿದರಕೋಟೆ ಕುಶ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಪ್ರದೀಪ್ ಗೌಡ, ಜೆಡಿಎಸ್ ಮುಖಂಡರಾದ ಇಂದುಶೇಖರ್, ಆಬಲವಾಡಿ ರವೀಂದ್ರ, ಕೊಣಸಾಲೆ ಮಧು, ಕೋಟಿ ರಾಮಲಿಂಗ, ಕೃಷ್ಣೇಗೌಡ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಸುಸೂತ್ರವಿರಲು ಸದಸ್ಯರಲ್ಲಿ ಬಾಂಧವ್ಯ ಮುಖ್ಯ
ಬಾಲಕೃಷ್ಣ ಸಚಿವರಾದ ಬಳಿಕ ಕ್ಷೇತ್ರಕ್ಕೆ ಹೆಚ್ಚು ಅನುದಾನ