ನಮ್ಮ ಅಪರಾಧಗಳನ್ನು ಕ್ಷಮಿಸುವವನು ಭಗವಂತ: ಮ.ಶಾ.ಸಂ.ಶ್ರೀ ಬ್ರಹ್ಮಣ್ಯಾಚಾರ್ಯರು

KannadaprabhaNewsNetwork |  
Published : Apr 06, 2026, 02:00 AM IST
ಶ್ರೀ ಸತ್ಯಪ್ರದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ದಶಮಾನೋತ್ಸವ ಸಮಾರಂಭ | Kannada Prabha

ಸಾರಾಂಶ

ತರೀಕೆರೆಎಷ್ಟು ತಪ್ಪು ಮಾಡಿದರೂ ಅದನ್ನು ಸ್ವೀಕರಿಸುವವನು ಭಗವಂತ ಮಾತ್ರ. ಭಗವಂತನು ನಮ್ಮ ಅಪರಾಧಗಳನ್ನು ಕ್ಷಮಿಸುವವನು ಎಂದು ಮ.ಶಾ.ಸಂ.ಶ್ರೀ ಬ್ರಹ್ಮಣ್ಯಾಚಾರ್ಯರು ಹೇಳಿದ್ದಾರೆ.

ಶ್ರೀ ಸತ್ಯಪ್ರದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ದಶಮಾನೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಎಷ್ಟು ತಪ್ಪು ಮಾಡಿದರೂ ಅದನ್ನು ಸ್ವೀಕರಿಸುವವನು ಭಗವಂತ ಮಾತ್ರ. ಭಗವಂತನು ನಮ್ಮ ಅಪರಾಧಗಳನ್ನು ಕ್ಷಮಿಸುವವನು ಎಂದು ಮ.ಶಾ.ಸಂ.ಶ್ರೀ ಬ್ರಹ್ಮಣ್ಯಾಚಾರ್ಯರು ಹೇಳಿದ್ದಾರೆ.ಶ್ರೀ ಸತ್ಯಪ್ರದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿಯಿಂದ ದೇವಸ್ಥಾನ ಆವರಣದಲ್ಲಿ ನಡೆದ ಶ್ರೀ ಸತ್ಯಪ್ರದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ದಶಮಾನೋತ್ಸವದಲ್ಲಿ ಪ್ರವಚನ ಮಾಡಿದರು. ದೇವರು ನಮಗೆ ಬಾಯಿ ಕೊಟ್ಟಿರುವುದು ಭಗವಂತನ ಕೀರ್ತನೆ, ನಾಮಸ್ಮರಣೆ ಮಾಡಬೇಕು, ದೇವರು ತುಂಬಾ ಹತ್ತಿರದಲ್ಲೇ ಇದ್ದಾನೆ. ದೇವರು ಕಣ್ಣು ಬಿಟ್ಟರೆ ಅಕ್ಷಯವಾಗುತ್ತದೆ. ತಾಯಿ ಎಂದರೆ ದೇವರು, ತಂದೆ ಭಗವಂತ ಮಾಡುವಷ್ಟು ಉಪಕಾರವನ್ನು ಬೇರೆ ಯಾರೂ ಮಾಡುವುದಿಲ್ಲ. ತಾಯಿಗೆ ನಮ್ಮ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ಇರುತ್ತದೆ ಎಂದು ಹೇಳಿದರು.ಭಗವಂತನ ಕಥೆಗೆ ಅಂತ್ಯವಿಲ್ಲ. ನಮ್ಮ ತಪ್ಪುಗಳು ನಮಗೆ ಕಾಣುವುದಿಲ್ಲ. ಬರುವ ಹಾಗೆ ಭಗವಂತನನ್ನು ಕರೆಯಬೇಕು, ಭಗವಂತನ ಪ್ರೀತಿ ಹೃದಯದ ಒಳಗೆ ಪ್ರಾಪ್ತವಾಗಬೇಕು. ದಶ ಎಂದರೆ ಪೂರ್ಣ ಎಂದು ಅರ್ಥ, ಇದು ನೂರು ಸಾವಿರ ಎಂದು ಪರಿಪೂರ್ಣ, ಹಿರಿಯರ ಆಶೀರ್ವಾದ ಅಗತ್ಯ, ದೇವಸ್ಥಾನ ಅತ್ಯಂತ ವೈಭವದಿಂದ ಇದೆ ಎಂದರು.ದೇವಸ್ಥಾನದ ಅಡಳಿತ ಮಂಡಳಿ ಮತ್ತು ಭಕ್ತವೃಂದದವರಿಂದ ಮ.ಶಾ.ಸಂ.ಶ್ರೀ ಬ್ರಹ್ಮಣ್ಯಾಚಾರ್ಯರನ್ನು ಸನ್ಮಾನಿಸಲಾಯಿತು. ಶ್ರೀ ಗಳವರಿಂದ ಫಲ ಮಂತ್ರಾಕ್ಷತೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ದೇವಸ್ಥಾನ ಅಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ಉತ್ಸವದಲ್ಲಿ ಶ್ರೀ ಪದ್ಮಾವತಿ ಸಮೇತ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಗರುಡೋತ್ಸವ ಮೆರವಣಿಗೆ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು. ವಿವಿಧ ಕಲಾವೃಂದದವರಿಂದ ಭಜನಾ ಮಂಡಳಿ ಮತ್ತು ಎಲ್ಲ ಭಕ್ತ ವೃಂದದವರಿಂದ ಸಾಂಸ್ಕೃತಿಕ ಕಲಾ ಪ್ರದರ್ಶನ ನೆರವೇರಿತು.

-

4ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಶ್ರೀ ಸತ್ಯಪ್ರದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಅಡಳಿತ ಮಂಡಳಿ ವತಿಯಿಂದ ನೆಡೆದ ದಶಮಾನೋತ್ಸವ ಸಮಾರಂಭದಲ್ಲಿ ಮ.ಶಾ.ಸಂ.ಶ್ರೀ ಬ್ರಹ್ಮಣ್ಯಾಚಾರ್ಯರು ಅವರು ಪ್ರವಚನ ನೀಡಿದರು. -----------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೈಂಗಿಕ‌ ದೌರ್ಜನ್ಯ: ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಲಿ: ರವಿಂದ ಬೆಲ್ಲದ
ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ: ಆರೋಪಿ ಬಂಧನ