ದೇವರು ನಮ್ಮ ಪ್ರತಿ ನಡವಳಿಕೆ ಗಮನಿಸುತ್ತಿರುತ್ತಾನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Apr 20, 2026, 02:15 AM IST
Siddaramaiah

ಸಾರಾಂಶ

ದೇವರು ಸರ್ವಾಂತರಯಾಮಿಯಾಗಿದ್ದು, ನಮ್ಮ ಪ್ರತಿ ನಡವಳಿಕೆಯನ್ನು ಗಮನಿಸುತ್ತಿರುತ್ತಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಬೀರಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂ ಭಕ್ತ ಕನಕದಾಸ ಮಹಾದ್ವಾರ ಉದ್ಘಾಟನಾ ಸಮಾರಂಭವನ್ನು  ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರಾಣಿಬೆನ್ನೂರು: ದೇವರು ಸರ್ವಾಂತರಯಾಮಿಯಾಗಿದ್ದು, ನಮ್ಮ ಪ್ರತಿ ನಡವಳಿಕೆಯನ್ನು ಗಮನಿಸುತ್ತಿರುತ್ತಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ನಿಟ್ಟೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂ ಭಕ್ತ ಕನಕದಾಸ ಮಹಾದ್ವಾರ ಉದ್ಘಾಟನಾ ಸಮಾರಂಭವನ್ನು ಭಾನುವಾರ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮಾನವೀಯತೆಯಿಂದ ನಡೆದುಕೊಂಡಾಗ ಮಾತ್ರ ದೇವರ ಒಲಿಯುತ್ತಾನೆ

ಶುದ್ಧವಾದ ಭಕ್ತಿ, ಮಾನವೀಯತೆಯಿಂದ ನಡೆದುಕೊಂಡಾಗ ಮಾತ್ರ ದೇವರ ಒಲಿಯುತ್ತಾನೆ, ದೇವರಲ್ಲಿ ಪ್ರಾರ್ಥನೆ ಮಾಡುವಾಗ ಎಲ್ಲರಿಗೂ ಒಳ್ಳೆಯದು ಮಾಡು, ನನಗೂ ಮಾಡುವಂತೆ ಕೇಳಬೇಕು. ಸಮಾಜದಲ್ಲಿ ಬೇರೆಯವರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಸಾಮಾಜಿಕ ವ್ಯವಸ್ಥೆ ಹೊಂದಾಣಿಕೆಯಾಗುವ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ.  

ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದು ಕುವೆಂಪು ಹೇಳಿದ್ದಾರೆ. ನಮ್ಮ ಸರ್ಕಾರದ ಆಶಯವೂ ಇದೇ ಆಗಿದ್ದು ಅದರಂತೆ ಆಡಳಿತ ನಡೆಸುತ್ತಾ ಬಂದಿದ್ದೇವೆ. ನಿಟ್ಟೂರ ಗ್ರಾಮದಲ್ಲಿ ಕುರುಬ ಸಮಾಜದ 13 ಕುಟುಂಬಗಳಿದ್ದರೂ ಕೂಡ ಎಲ್ಲಾ ಸಮಾಜದವರೂ ಒಗ್ಗೂಡಿ ದೇವಸ್ಥಾನದ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಮಾದರಿಯಾಗಿದೆ ಎಂದರು. 

ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಪ್ರತಿಯೊಬ್ಬರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ

 ಸಾಮಾಜಿಕ, ಆರ್ಥಿಕ ಸ್ವಾತಂತ್ರ‍್ಯ ಇರದಿದ್ದರೆ ರಾಜಕೀಯ ಸ್ವಾತಂತ್ರ‍್ಯ ಸಿಗುವುದಿಲ್ಲ. ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ‍್ಯ ಇರಬೇಕು. ಅದಕ್ಕಾಗಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಪ್ರತಿಯೊಬ್ಬರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದರು. 

 ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರುಗಳಾದ ಪ್ರಕಾಶ ಕೋಳಿವಾಡ, ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಯಾಸಿರ್‌ಖಾನ್ ಪಠಾಣ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಮಾಜಿ ಶಾಸಕ ಎಸ್. ರಾಮಪ್ಪ, ರಾಣಿಬೆನ್ನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಹನುಮಂತಪ್ಪ ದೇವರಗುಡ್ಡ, ಚೋಳಪ್ಪ ಕಸವಾಳ, ಮಂಜಯ್ಯ ಚಾವಡಿ, ಷಣ್ಮುಖ ಕಂಬಳಿ, ಕರಬಸಪ್ಪ ಕೂಲೇರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಾಯಿಯೊಳಗೆ ಮೈಕ್ ಇಟ್ಕೊಂಡು ಮಾತಾಡಬೇಕಷ್ಟೇ..!
ಬಿಜೆಪಿ, ದಳದವರಿಗೂ ನನ್ನ ಹೃದಯ ತೆರೆದಿದೆ: ಸಿಎಂ