ಅಸಮಾನತೆ ವಿರುದ್ಧ ಹೋರಾಡಿದ್ದ ದೇವರ ದಾಸಿಮಯ್ಯ: ಶುಭಂ ಶುಕ್ಲಾ

KannadaprabhaNewsNetwork |  
Published : Apr 04, 2025, 12:48 AM IST
ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಉದ್ಘಾಟಿಸಿದರು. | Kannada Prabha

ಸಾರಾಂಶ

ಮುದೆನೂರಿನ ನೀರಿನ ಸೆಲೆಗಳನ್ನು ಬಳಸಿ ಬೇಸಾಯ ಮಾಡುತ್ತಾ ದಾಸೋಹಕ್ಕಾಗಿ ತನ್ನ ಕಣಜದಲ್ಲಿದ್ದ ಇಳೆಯ ಬೆಳೆಯನ್ನು ಬಳಸಿ, ಜನರಿಗೆ ಹಂಚುತ್ತಾ ಕಾಯಕ- ದಾಸೋಹ ಪರಿಕಲ್ಪನೆ ತಿಳಿಸಿ ದೇವರ ಅನುಗ್ರಹ ಪಡೆದು ದೇವರ ದಾಸಿಮಯ್ಯನಾದ ಎಂದು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ತಿಳಿಸಿದರು.

ಸವಣೂರು: ಹೆಣ್ಣು- ಗಂಡು, ಮೇಲು- ಕೀಳು, ಜಾತಿ- ಪಂಥ ಆಚರಣೆಗಳ ಭೇದಗಳನ್ನು ಗುರುತಿಸಿ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧಿಕ್ಕರಿಸಿದ ವಚನಕಾರ, ದೇವರ ದಾಸಿಮಯ್ಯ ಎಂದು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ತಿಳಿಸಿದರು.

ಬುಧವಾರ ಕಂದಾಯ ಇಲಾಖೆ, ದೇವಾಂಗ ಸಮಾಜ ಸಹಯೋಗದಲ್ಲಿ ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಸಭಾಭವನದಲ್ಲಿ ಏರ್ಪಡಿಸಿದ್ದ ಆದ್ಯ ವಚನಕಾರ ದೇವರ ದಾಸೀಮಯ್ಯನವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.11ನೇ ಶತಮಾನದ ಕ್ರಿಶ 1070ರ ವರೆಗೆ ಬದುಕಿದ್ದ ಇವರು ಮುದೆನೂರಿನ ನೀರಿನ ಸೆಲೆಗಳನ್ನು ಬಳಸಿ ಬೇಸಾಯ ಮಾಡುತ್ತಾ ದಾಸೋಹಕ್ಕಾಗಿ ತನ್ನ ಕಣಜದಲ್ಲಿದ್ದ ಇಳೆಯ ಬೆಳೆಯನ್ನು ಬಳಸಿ, ಜನರಿಗೆ ಹಂಚುತ್ತಾ ಕಾಯಕ- ದಾಸೋಹ ಪರಿಕಲ್ಪನೆ ತಿಳಿಸಿ ದೇವರ ಅನುಗ್ರಹ ಪಡೆದು ದೇವರ ದಾಸಿಮಯ್ಯನಾದ. ಇಲ್ಲಿಯವರೆಗೆ 150 ವಚನಗಳು ದೊರೆತಿವೆ ಎಂದರು.

ತಹಸೀಲ್ದಾರ್ ಭರತರಾಜ್ ಕೆ.ಎನ್. ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಈರಣ್ಣ ಗುಡಿಸಾಗರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ರೈತ ಸಂಘದ ಪದಾಧಿಕಾರಿ ಪ್ರಕಾಶ ಬಾರ್ಕಿ ಹಾಗೂ ಆನಂದ ಮತ್ತಿಗಟ್ಟಿ ಮಾತನಾಡಿದರು.

ಸಿಡಿಪಿಒ ಉಮಾ ಕೆ.ಎಸ್., ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಜೀವನ ಪಮ್ಮಾರ, ಬಿಸಿಎಂ ಇಲಾಖೆ ನಿರ್ದೇಶಕಿ ಸುಲೋಚನಾ ಕಟ್ನೂರ, ದೇವಾಂಗ ಸಮಾಜದ ಪ್ರಮುಖರಾದ ಲಕ್ಷ್ಮಣ ಸಿಗಡಿ, ನಾಗೇಂದ್ರ ಕೊಳ್ಳಿ, ರಮೇಶಗೌಡ ಗುಡಿಸಾಗರ, ಪಾಂಡುರಂಗಗೌಡ ಗುಡಿಸಾಗರ, ಚಿನ್ನಪ್ಪಗೌಡ ಗುಡಿಸಾಗರ, ಯಶೋದಾ ಗುಡಿಸಾಗರ, ಮಹಾದೇವಗೌಡ ಗುಡಿಸಾಗರ, ಜಯಶ್ರೀ ಸಂಪಗಾಂವಿ, ಲೀಲಾವತಿ ಗುಡಿಸಾಗರ, ಸುಮಂಗಲಾ ಗುಡಿಸಾಗರ, ಕಲಾವತಿ ಗುಡಿಸಾಗರ, ಇತರರು ಪಾಲ್ಗೊಂಡಿದ್ದರು. ಭಗವಾಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಚಾಲನೆ

ಹಾನಗಲ್ಲ: ಹಿಂದೂಗಳ ಹೊಸ ವರ್ಷದ ಯುಗಾದಿ ಹಬ್ಬದ ಆಚರಣೆಯನ್ನು ಭಗವಾ ಧ್ವಜ ಹಾರಿಸುವ ಮೂಲಕ ಆಚರಿಸುವ ಸಂಪ್ರದಾಯ ಆರಂಭಗೊಳ್ಳಬೇಕು ಎಂದು ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ ತಿಳಿಸಿದರು.

ಯುಗಾದಿ ಹಬ್ಬದಂದು ತಾಲೂಕಿನ 2000ಕ್ಕೂ ಅಧಿಕ ಮಠ- ಮಂದಿರಗಳಿಗೆ ಭಗವಾಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಪಟ್ಟಣದ ಆನಂದೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಿ ಮಾತನಾಡಿದರು.ನಮ್ಮ ಧರ್ಮಧ್ವಜವು ನಮ್ಮ ಧರ್ಮದ ಸಂಕೇತವಾಗಿದೆ. ಧರ್ಮ ರಕ್ಷಣೆಗೆ ವರ್ಷದ ಮೊದಲ ಹಬ್ಬವಾದ ಯುಗಾದಿ ನಾಂದಿ ಹಾಡುತ್ತದೆ. ಧರ್ಮ ಪಾಲನೆಯ ಕೇಂದ್ರವಾಗಿರುವ ಮಠ- ಮಂದಿರಗಳ ಮೇಲೆ ಭಗವಾಧ್ವಜ ವರ್ಷವಿಡೀ ಹಾರಾಡುತ್ತಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಆನಂದೇಶ್ವರ ಯುವಕ ಮಂಡಳದ ಸದಸ್ಯರು ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗಣ್ಯರಾದ ಗಣೇಶ ಮೂಡ್ಲಿಯವರ, ಜಗದೀಶ ಸಿಂಧೂರ, ರಾಮು ಯಳ್ಳೂರ, ರವಿಚಂದ್ರ ಪುರೋಹಿತ, ಬಸವರಾಜ ಹಾದಿಮನಿ, ಮನೋಜ ಕಲಾಲ, ಪ್ರವೀಣ ಸುಲಾಖೆ, ಅಣ್ಣಪ್ಪ ಚಾಕಾಪುರ, ಗುರು ಗೊಲ್ಲರ, ಮಂಜುನಾಥ ಬಸವಂತಕರ, ಅಮಿತ್ ನೆಲೋಗಲ್, ವಿನಾಯಕ ಕಮಡೊಳ್ಳಿ, ರಾಜು ಕಮಾಟಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ