ವಿಜೃಂಭಣೆಯಿಂದ ಜರುಗಿದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ
ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದ ರಥೋತ್ಸವದಲ್ಲಿ ಸಂದರ್ಭದಲ್ಲಿ ನಡೆಯುವ ಸಾಂಸ್ಕತಿಕ ಕಾರ್ಯಕ್ರಮಗಳಾದ ಗಮಕ, ಸಂಗೀತ ದೇವರನಾಮ, ಭಜನೆಗಳು ಭಗವಂತನ ಸ್ತುತಿಯ ಅವಿಭಾಜ್ಯ ಅಂಗ ಎಂದು ಶಿವಮೊಗ್ಗ ಗಮಕ ಕಲಾ ಪರಿಷತ್ ಅಧ್ಯಕ್ಷ ವೇ.ಬ್ರ.ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದ್ದಾರೆ.ಬ್ರಾಹ್ಮಣ ಸೇವಾ ಸಮಿತಿ ತರೀಕೆರೆಯಿಂದ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ 133ನೇ ರಥೋತ್ಸವ ಅಂಗವಾಗಿ ಪಟ್ಟಣದ ಅನ್ನಪೂರ್ಣ ಸಭಾ ಭವನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದರೆ ಭಗವಂತನ ಆಶೀರ್ವಾದಕ್ಕೆ ನಾವು ಹತ್ತಿರವಾಗುತ್ತೇವೆ ಎಂದು ಹೇಳಿದರು.ಬ್ರಾಹ್ಮಣ ಸೇವಾ ಸಮಿತಿ ಮಾಜಿ ಅಧ್ಯಕ್ಷ ಆರ್.ಎನ್.ಶ್ರೀನಿವಾಸ್ ಮಾತನಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ ಶ್ರೀ ಶೃಂಗೇರಿ ಶ್ರೀಗಳ ದಿವ್ಯಾಶ್ರೀರ್ವಾದಿಂದ ಪ್ರಾರಂಭವಾಗಿ ಇಂದು 133ನೇ ರಥೋತ್ಸವ ನಡೆಯುತ್ತಿದ್ದು ಇದಕ್ಕೆ ತರೀಕೆರೆ ಹಲವಾರು ಮಹನೀಯರ ಶ್ರದ್ಧಾಭಕ್ತಿಯಿಂದ ಸೇವೆ ಸಲ್ಲಿಸಿದ್ದಾರೆ. ಈ ವಿಜೃಂಭಣೆಗೆ ಭಕ್ತರ ಸಹಕಾರವೇ ಕಾರಣ. ಇದರಲ್ಲಿ ವೈದಿಕರ ಸಹಕಾರ ಹೆಚ್ಚಿನದಾಗಿದೆ ಅಲ್ಲದೆ ಆಗಮಶಾಸ್ತ್ರದಲ್ಲಿ ನಡೆಯುತ್ತಿರುವ ಈ ರಥೋತ್ಸವ ಅತ್ಯಂತ ಪವಿತ್ರ ಎಂದು ತಿಳಿಸಿ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.ಮತ್ತೂರು ಪ್ರಸಿದ್ಧ ಗಮಕ ಕಲಾವಿದ ವೇ.ಬ್ರ.ಶ್ರೀ ಅಚ್ಟುತ ಅವಧಾನಿ ಮಾತನಾಡಿ ಶಾಸ್ತ್ರ, ವೇದಗಳು ಭಗವಂತನ ಆರಾಧನೆಗೆ ಸಲ್ಲುತ್ತದೆ. ಆದುದರಿಂದ ರಥೋತ್ಸವಕ್ಕೆ ಉತ್ಸವ ಇತ್ಯಾದಿಗಳ ಮೂಲಕ ಭಗವಂತ ಆರಾಧಿಸಿಸಲು ಹತ್ತಿರ ವಾಗುತ್ತದೆ. ಗಮಕದಲ್ಲಿ ಭಗವಂತನ ನಾಮಸ್ಮರಣೆ ಅಡಗಿದೆ ಎಂದು ಹೇಳಿದರು.ಬ್ರಾಹ್ಣಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ 133ನೇ ರಥೋತ್ಸವ ನಡೆಯುತ್ತಿದ್ದು, ಸ್ಕಂದ ಮಾತಾ ವಿಪ್ರ ಮಹಿಳಾ ಸಂಘದವರಿಗೆ ಅಭಿನಂದನೆ ತಿಳಿಸಿ ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವ ಸರ್ವ ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಭಾರತ ವಾಚನದಲ್ಲಿ ಸ್ಕಂದ ಕುಮಾರನ ಜನನ, ವಿವಾಹ ಎಲ್ಲವನ್ನೂ ಕೆಲವು ಕಾವ್ಯಗಳಿಂದ ಆಯ್ದು ವಾಚನ ವ್ಯಾಖ್ಯಾನ ನಡೆಯಿತು, ಶ್ರೀ ಸುಬ್ರಹ್ಣಣ್ಯ ಕ್ಷೇತದ ಬಗ್ಗೆ ಮಾಹಿತಿ ನೀಡಲಾಯಿತು. ಬೆಂಗಳೂರು ವಾಗ್ದೇವಿ ಗಮಕ ಕಲಾ ತಂಡದವರಿಂದ ಕುಮಾರವ್ಯಾಸ ಭಾರತದಿಂದ ಅಂತ್ಯಾಕ್ಷರಿ ಕಾರ್ಯಕ್ರಮದಲ್ಲಿ ವಲ್ಲಿದೇವಸೇನಾಪತೆ ಅದಷ್ಟು ಬರುವ ಹಾಗೆ ಕಾವ್ಯಗಳನ್ನು ವಾಚಿಸಲಾಯಿತು.
ವಿಜಯಪ್ರಕಾಶ್, ವಾಣಿ ಶ್ರೀನಿವಾಸ್, ಸಂಧ್ಯಾ ಶ್ರೀಧರ್, ಸುರಭಿ, ಲಕ್ಷ್ಮೀ ಮಂಜುನಾಥ್ ಭಾಗವಹಿಸಿದ್ದರು.ವೇ.ಬ್ರ.ಶ್ರೀ ಕೆ.ಟಿ.ಲಕ್ಷ್ಮೀನಾರಾಯಣ ಭಟ್ಟ ಸಂಗೀತ ಲಹರಿ ಉದ್ಘಾಟಿಸಿದರು. ಲೇಖಕರು ಮತ್ತು ವಾಸ್ತುಶಿಲ್ಪ ಚಿಂತಕರು ಶಂಕರ ಅಜ್ಜಂಪುರ ಮಾತನಾಡಿದರು. ತರೀಕೆರೆ ವಿಶ್ರಾಂತ ಉಪನ್ಯಾಸಕ ಡಾ.ಬಿ.ಎಚ್.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ದ್ದರು. ಲೇಖಕರು ಮತ್ತು ವಾಸ್ತುಶಿಲ್ಪ ಚಿಂತಕ ಶಂಕರ ಅಜ್ಜಂಪುರ, ಬೆಂಗಳೂರು ಪ್ರದೀಪ್ ನಾಡಿಗ್ ಮತ್ತು ತಂಡದಿಂದ ಕೊಳಲು ವಾದನ ನಡೆಯಿತು.ಬ್ರಾಹ್ಮಣ ಸೇವಾ ಸಮಿತಿ ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸಮೂರ್ತಿ, ರೋಹಿಣಿ ನರಸಿಂಹಮೂರ್ತಿ, ಜಾಹ್ನವಿ, ವೈ.ಎನ್. ಮಂಜುನಾಥ ಭಟ್ ಉಪಸ್ತಿತರಿದ್ದರು.ಅಜ್ಜಂಪುರ ಬ್ರಾಹ್ಣಣ ಮಹಾಸಭಾ ಅಧ್ಯಕ್ಷ ಎಂ.ಜಿ.ಮಂಜುನಾಥ ಸಂಗೀತ ಸುಧೆಯ ಉದ್ಘಾಟಿಸಿದರು. ಮೈಸೂರು ಒಡೆಯರ್ ಕಾಲೇಜ್ ಅಫ್ ಅರ್ಕಿಟೆಕ್ಚರ್ ಸಹ ಸಂಸ್ಥಾಪಕ ಕುಕ್ಕೆ ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ದತ್ತಿ ದಾನಿಗಳ ಹೆಸರಿನಲ್ಲಿ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿದ್ಯಾ ಮಂಜುನಾಥ್, ವೀಣಾ ಸುರೇಶ್ ಅವರಿಂದ ಸಂಗೀತ ಸುಧೆ ಏರ್ಪಡಿಸಲಾಗಿತ್ತು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಿತು. ಕೂಡಲಿ ಶ್ರೀ ಮಠ ಅಸ್ತಾನ ವಿದ್ಯಾಂಸರು ಮೈಸೂರು ಅರಳೀಕಟ್ಟೆ ಷಣ್ಮುಖಸ್ವಾಮಿ, ಬ್ರಾಹ್ಮಣ ಸೇವಾ ಸಮಿತಿ ಉಪಾಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಡಿ.ಸಿ. ಶ್ರೀನಿವಾಸಮೂರ್ತಿ, ಅಚ್ಚುತಮೂರ್ತಿ, ಸ್ಕಂದ ಮಾತಾ ಮಹಿಳಾ ಸಂಘದ ಅಧ್ಯಕ್ಷ ಭಾಮ ಸುಬ್ರಹ್ಮಣ್ಯ, ಖಚಾಂಚಿ ಡಿ.ಜಿ. ಸಚಿನ್, ಸಹಕಾರ್ಯದರ್ಶಿ ವೈ.ಎನ್.ಮಂಜುನಾಥ ಭಟ್ ಭಾಗವಹಿಸಿದ್ದರು.ವಿದುಷಿ ರೋಹಿಣಿ ನರಸಿಂಹಮೂರ್ತಿ ತಂಡದವರಿಂದ ಸಂಗೀತ ಕಾರ್ಯಕ್ರಮ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.-30ಕೆಟಿಆರ್.ಕೆ.2ಃತರೀಕೆರೆಯಲ್ಲಿ ಬ್ರಾಹ್ಮಣ ಸೇವಾ ಸಮಿತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಯನ್ನು ಶಿವಮೊಗ್ಗ ಗಮಕ ಕಲಾ ಪರಿಷತ್ ಅಧ್ಯಕ್ಷ ವೇ.ಬ್ರ.ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ನೇರವೇರಿಸಿದರು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಮತ್ತಿತರರು ಇದ್ದರು.-