ಶಿವರಾಜ ವಿಶ್ವನಾಥ
ದೇಶದೆಲ್ಲೆಡೆ ಮನೆಮಾತಾದ ''''''''ಗೋದ್ರೇಜ್ ಎಂಟರ್‌ಪ್ರೈಸಸ್ ಗ್ರೂಪ್'''''''', ಈಗ ಸಾಂಪ್ರದಾಯಿಕ ಬೀಗಗಳ ಯುಗದಿಂದ ಡಿಜಿಟಲ್ ಕ್ರಾಂತಿಯತ್ತ ಮುಖ ಮಾಡಿದೆ. ದೇಶದಲ್ಲಿ ಸ್ಮಾರ್ಟ್ ಸುರಕ್ಷತಾ ಸಾಧನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ದೇಶದಲ್ಲೇ ಮೊದಲ ಬಾರಿ ಗೋವಾದ ಟಿವಿಮ್‌ನಲ್ಲಿ ವಿಶೇಷ ಡಿಜಿಟಲ್ ಲಾಕ್ ಉತ್ಪಾದನಾ ಘಟಕವನ್ನು ಹೊಂದಿದೆ ಎಂದು ಗೋದ್ರೆಜ್ ಎಂಟರ್ ಪ್ರೈಸಸ್ ವಕ್ತಾರ ಹೇಳಿದರು.
ಗೋವಾದ ಟಿವಿಂನಲ್ಲಿ ನಡೆದ ಮಾಧ್ಯಮ ಕಾರ್ಯಕ್ರಮದಲ್ಲಿ ಮಾತನಾಡಿ, ಟಿವಿಮ್‌ನಲ್ಲಿರುವ ಈ ಡಿಜಿಟಲ್ ಘಟಕವು ಕೇವಲ ಉತ್ಪಾದನೆಗೆ ಸೀಮಿತವಾಗಿಲ್ಲ. ಇಲ್ಲಿ ಹಾರ್ಡ್‌ವೇರ್ ಎಂಜಿನಿಯರಿಂಗ್ ಮತ್ತು ಸಾಫ್ಟ್‌ವೇರ್ ವಿನ್ಯಾಸ ಅಭಿವೃದ್ಧಿಯನ್ನು ಒಂದೇ ಸೂರಿನಡಿ ಅಳವಡಿಸಲಾಗಿದೆ. ಇದು ಮುಂದಿನ ಪೀಳಿಗೆಯ ''''''''ಸ್ಮಾರ್ಟ್ ಲಾಕಿಂಗ್'''''''' ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.ತಿಂಗಳಿಗೆ 11000 ಡಿಜಿಟಲ್ ಲಾಕ್ ಉತ್ಪಾದನೆ:
ಮಹಿಳಾ ಸಬಲೀಕರಣ:
ಇಲ್ಲಿನ ಮೆಕ್ಯಾನಿಕಲ್ ಹಾಗೂ ಡಿಜಿಟಲ್ ಲಾಕರ್ ಉತ್ಪಾದನಾ ಘಟಕದಲ್ಲಿ ಶೇ.85ರಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹ.ಎರಡು ಬೃಹತ್ ಘಟಕಗಳು:
ಗೋವಾದ ಮಡ್ಕೈನಲ್ಲಿ ದೇಶದ ಅತಿದೊಡ್ಡ ಮೆಕ್ಯಾನಿಕಲ್ ಲಾಕ್ ಘಟಕವಿದ್ದರೆ, ಟಿವಿಮ್‌ನಲ್ಲಿ ದೇಶದ ಮೊದಲ ಡಿಜಿಟಲ್ ಘಟಕವನ್ನು ಹೊಂದಿದೆ.ಈ ೫ ನಗರಗಳಲ್ಲಿ ಭಾರಿ ಬೇಡಿಕೆ:
ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಮತ್ತು ಅಹಮದಾಬಾದ್‌ನಂತಹ ದೊಡ್ಡ ನಗರಗಳಲ್ಲಿ ಡಿಜಿಟಲ್ ಬೀಗಗಳಿಗೆ ಹೆಚ್ಚು ಬೇಡಿಕೆ ಇದ್ದು ಅದಕ್ಕೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತಿದೆ.ಜಾಗತಿಕ ರಫ್ತು:
ಇಲ್ಲಿ ತಯಾರಾದ ಬೀಗಗಳು ಕೇವಲ ಭಾರತಕ್ಕೆ ಮಾತ್ರವಲ್ಲದೆ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದ ಹಲವು ದೇಶಗಳಿಗೆ ರಫ್ತಾಗುತ್ತಿವೆ ಎಂದು ತಿಳಿಸಿದರು.---ಬಾಕ್ಸ್.....
5ನೇ ಆವೃತ್ತಿಯ ''''''''ಜಿವೀಸ್'''''''' ಪ್ರಶಸ್ತಿ ಪ್ರದಾನಆರ್ಕಿಟೆಕ್ಚರ್ಸ್ ಮತ್ತು ಇಂಟೀರಿಯರ್ ಡಿಸೈನರ್ಸ್ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಗೋವಾದ ಖಾಸಗಿ ಹೋಟೆಲ್‌ನಲ್ಲಿ 5ನೇ ಆವೃತ್ತಿಯ ''''''''ಜಿವೀಸ್'''''''' ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಗೋದ್ರೇಜ್ ವ್ಯಾಲ್ಯೂ ಕೋ-ಕ್ರಿಯೇಟರ್ಸ್ ಕ್ಲಬ್ (ಜಿವಿವಿಸಿ) ಅಡಿಯಲ್ಲಿ ವಸತಿ, ವಾಣಿಜ್ಯ, ಆತಿಥ್ಯ, ಸಾಂಸ್ಥಿಕ ಮತ್ತು ವಿಶೇಷ ವಿನ್ಯಾಸ ವಿಭಾಗಗಳು ಸೇರಿದಂತೆ ಒಟ್ಟು 15 ವಿಭಾಗಗಳಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಯಿತು.
ಖ್ಯಾತ ಆರ್ಕಿಟೆಕ್ಚರ್‌ಗಳಾದ ವಿವೇಕ್ ಸಿಂಗ್ ರಾಥೋಡ್, ಹಾರ್ಟ್‌ಮಟ್, ಯತಿನ್ ಪಟೇಲ್, ಸೌರಭ್ ಚಂದ್ರ, ರಾಹುಲ್ ಸಾಠೆ ಮತ್ತು ಚರಂಜಿತ್ ಸಿಂಗ್ ಶಾ ಸೇರಿದಂತೆ ಪ್ರಮುಖ ತಜ್ಞರ ಸಮಿತಿ ಮೌಲ್ಯಮಾಪನ ಪ್ರಕ್ರಿಯೆ ಮೂಲಕ ವಿಜೇತರನ್ನು ಆಯ್ಕೆ ಮಾಡಿದೆ.---ಫೋಟೊ ಕ್ಯಾಪ್ಷನ್
ಗೋವಾದಲ್ಲಿ ನಡೆದ 5ನೇ ಆವೃತ್ತಿಯ ಜೀವಿಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 15 ವಿಭಾಗಗಳಲ್ಲಿ ವಿಜೇತರಾದ ಆರ್ಕಿಟೆಕ್ಚರ್ಸ್ ಮತ್ತು ಇಂಟೀರಿಯರ್ ಡಿಸೈನರ್ಸ್, ಹಾಗೂ ಜ್ಯೂರಿಗಳು.===
‘ಜಿವೀಸ್’ ಪ್ರಶಸ್ತಿ ವಿಜೇತರು*ಕಂಪಾರ್ಟಮೆಂಟ್ ಎಸ್.೪ ಸಂಸ್ಥೆ - ಸಾರ್ವಜನಿಕ ಸಾಂಸ್ಥಿಕ ಸಂಸ್ಥೆ
*ಮಿಲನಾ ಮಲಾಡಕರ್ ಮತ್ತು ಅರವಿಂದ್ ಜಗನ್ನಾಥನ್- ಶಿಕ್ಷಣ ಸಂಸ್ಥೆ*ಶ್ರೇಯಾ ಸಂಘ್ವಿ ಮತ್ತು ವಿಫುಲ್ ಸಂಘ್ವಿ- ಸುರಕ್ಷಿತ ಕಟ್ಟಡ
*ಮನೋಜ್ ಪಟೇಲ್- ವಾಣಿಜ್ಯ ಯೋಜನೆ, 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರ*ಪ್ರಾಚಿ ಪರೇಖ್ ವೋರಾ ಮತ್ತು ವಿನೀತ್ ಜೆ.ವೋರಾ ವಸತಿ ಯೋಜನೆ, 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರ
*ರೋನಕ್ ಮುಕೇಶ್ ಪಟೇಲ್- ಬಹು ಘಟಕ ವಸತಿ ಯೋಜನೆ*ಓಂಕಾರ್ ವೈಂಗಣಕರ್- ಹೆಲ್ತ್‌ಕೇರ್
*ಮನೀಶ್ ಬಾನಕರ್- ಹೋಟೆಲ್ ಉದ್ಯಮ (50+ಕೊಠಡಿ)*ಶ್ರವಣ ಪ್ರದೀಪ್ ಮತ್ತು ಮೇಘಾ ನಾಣಯ್ಯ- ವಿಲ್ಲಾ, ಬಂಗಲೆ ವಿಭಾಗ
*ಸ್ನೇಹಾ ಓಸ್ತ್‌ವಾಲ್- ವಾಣಿಜ್ಯ ಕಟ್ಟಡ (3000ಕ್ಕಿಂತ ಹಚ್ಚು ಚದರಡಿ)*ದೀಪಿಕಾ ಸೇಠಿ- ಹೋಟೆಲ್ ಉದ್ಯಮ (50ಕ್ಕಿಂತ ಕಡಿಮೆ ಕೊಠಡಿ)
*ಬಿಜೋಯ್ ರಾಮಚಂದ್ರನ್ ಮತ್ತು ಸುನಿತಾ ಕೊಂಡೂರು- ಅಪಾರ್ಟ್‌ಮೆಂಟ್/ವಿಲ್ಲಾ/ಬಂಗಲೆ (3000+ಚದರಡಿ)*ಪ್ರಣವಿ ಜೈನ್ ಮತ್ತು ದೃವ್ ಡಿವಿ-ವಾಣಿಜ್ಯ ಕಟ್ಟಡ (3000ಕ್ಕಿಂತ ಕಡಿಮೆ ಚದರಡಿ)
*ಕೋಪಲ್ ತ್ರಿವೇದಿ- ಅಪಾರ್ಟ್‌ಮೆಂಟ್/ವಿಲ್ಲಾ/ಬಂಗಲೆ(3000ಕ್ಕಿಂತ ಕಡಿಮೆ ಚದರಡಿ)*ಮಾಳವಿಕ ಮಹೇಶ್ ಮತ್ತು ರಾಹುಲ್ ಕುಮಾರ್-(3000ಕ್ಕಿಂತ ಕಡಿಮೆ ಚದರಡಿ)