ಪಡಿತರ ವಿತರಣೆಯಲ್ಲಿ ತಾರತಮ್ಯ: ಜನರ ಆಕ್ರೋಶ
ದೇವ್ರು ಕೊಟ್ರು ಪೂಜಾರಿ ಕೊಡ್ತಿಲ್ಲ ಎಂಬಂತೆ ಸರ್ಕಾರದ ಆದೇಶದಂತೆ ಪಡಿತರದಾರರಿಗೆ ಅಕ್ಕಿ ನೀಡದೆ ಸೊಸೈಟಿಯಲ್ಲಿ ಪಡಿತರ ವಿತರಕರು ತಾರತಮ್ಯ ಮಾಡುತ್ತಿದ್ದಾರೆಂದು ಜನ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಸಿಂಗಟಗೆರೆ ಹೋಬಳಿ ಬಿ.ಮಲ್ಲೇನಹಳ್ಳಿ ಗ್ರಾಮದ ಸೊಸೈಟಿಯಲ್ಲಿ ಮಂಗಳವಾರ ನಡೆದಿದೆ
ಈ ಬಗ್ಗೆ ಗ್ರಾಹಕರು ಆರೋಪಿಸಿದ್ದು, ಅಕ್ಕಿ ಕೊಡೋದ್ರಲ್ಲಿ ವಿತರಕರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ. ಒಂದೊಂದು ಕಾರ್ಡಿಗೆ 5-10 ಕೆ.ಜಿ. ಅಕ್ಕಿ ಕಡಿಮೆ ಕೊಡುತ್ತಿದ್ದಾರೆ ಎಂದು ಪಡಿತರ ವಿತರಕರ ಜೊತೆ ಜನರ ವಾಗ್ವಾದ ನಡೆಸಿದ್ದಾರೆ.ಬಿ.ಮಲ್ಲೇನಹಳ್ಳಿ ನ್ಯಾಯ ಬೆಲೆ ಅಂಗಡಿ ವ್ಯಾಪ್ತಿಗೆ ಬಿ.ಮಲ್ಲೇನಹಳ್ಳಿ, ಬಿ.ಬೊಮ್ಮೇನಹಳ್ಳಿ, ಬಿ.ಬಸವನಹಳ್ಳಿ ತಾಂಡ್ಯ ಮತ್ತು ಗೊಲ್ಲರಹಟ್ಟಿ ಗ್ರಾಮಗಳ ಪಡಿತರದಾರರು ಒಳಪಡಲಿದ್ದಾರೆ. ಮಂಗಳವಾರ ಮಧ್ಯಾಹ್ನ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಸಂದರ್ಭದಲ್ಲಿ 8 ಪಡಿತರ ಚೀಟಿದಾರರಿಗೆ 105 ಕೆಜಿ ಅಕ್ಕಿ ಬದಲಾಗಿ 75 ಕೆಜಿ ಅಕ್ಕಿ ವಿತರಿಸಿರುವ ಬಗ್ಗೆ ಹಾಗೂ 75 ಕೆಜಿ ಬದಲಾಗಿ 55 ಕೆಜಿ ಹಾಗೂ 30ಕ್ಕು ಹೆಚ್ಚು ಜನ ಪಡಿತರದಾರರಿಗೆ ತಲಾ 2 ಕೆಜಿ ಅಕ್ಕಿ ಕಡಿಮೆ ನೀಡಿರುವ ಬಗ್ಗೆ ಪ್ರಶ್ನಿಸಿದ್ದಾರೆ ಅಕ್ಕಿ ಪಡೆದವರು ಪ್ರಶ್ನಿಸಿದ್ದಾರೆ.
-- ಬಾಕ್ಸ ಸುದ್ದಿಗೆ---
ಅಧಿಕಾರಿಗಳ ಭೇಟಿಕಡೂರು ತಾಲೂಕಿನ ಬಿ. ಮಲ್ಲೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆ ನಿರೀಕ್ಷಕ ಶ್ರೀನಿವಾಸ್ ಮತ್ತು ಶಿಲ್ಪಾ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿದರು. ದೂರು ಬಂದ ಹಿನ್ನಲೆಯಲ್ಲಿ ಈ ಸೊಸೈಟಿ ಶಿವಕುಮಾರ್ ಎಂಬುವರಿಗೆ ಸೇರಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮಂಗಳವಾರ ಪಡಿತರದಾರರಿಗೆ ವಿತರಣೆ ಮಾಡಿರುವ ಪಡಿತರದಲ್ಲಿ 30 ಜನರಿಗೆ 2 ಕೆಜಿ ಅಕ್ಕಿ ಕಡಿಮೆ ನೀಡಲಾಗಿದೆ. ಒಬ್ಬ ಪಡಿತರದಾರರಿಗೆ 30 ಕೆಜಿ ಅಕ್ಕಿ ಕಡಿಮೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಾಲೂಕು ಆಹಾರ ನಿರೀಕ್ಷಕ ಶ್ರೀನಿವಾಸ್ ಮತ್ತು ಶಿಲ್ಪಾ ತಿಳಿಸಿದರು.18ಕೆಕೆಡಿಯು2.
ಕಡೂರು ತಾಲೂಕಿನ ಬಿ. ಮಲ್ಲೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆಯ ನಿರೀಕ್ಷಕ ಶ್ರೀನಿವಾಸ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿದರು.