ಪೂರ್ವ, ಪಾಶ್ಚಿಮಾತ್ಯ ಸಾಹಿತ್ಯ ಸಮನ್ವಯಗೊಳಿಸಿದ ಗೋಕಾಕ

KannadaprabhaNewsNetwork |  
Published : Sep 02, 2026, 03:15 AM IST
ಧಾರವಾಡ ‌ಕಟ್ಟೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಶಶಿಧರ ನರೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರತಿಭೆಯಾಗಿ ಗುರುತಿಸಿಕೊಂಡ ಗೋಕಾಕರು ಕವಿ, ಕಾದಂಬರಿಕಾರ, ವಿಮರ್ಶಕ, ಚಿಂತಕ, ಶಿಕ್ಷಣ ತಜ್ಞ ಹಾಗೂ ಆಡಳಿತಗಾರರಾಗಿ ಅಪಾರ ಸೇವೆ ಸಲ್ಲಿಸಿದ ಮಹನೀಯರು.

ಧಾರವಾಡ:

ಲೇಖಕ ವಿ.ಕೃ. ಗೋಕಾಕ ಅವರಿಗೆ ಪೂರ್ವ ಮತ್ತು ಪಾಶ್ಚಿಮಾತ್ಯ ಸಾಹಿತ್ಯ ಸಮನ್ವಯಗೊಳಿಸಿದ ಕೀರ್ತಿ ಸಲ್ಲುತ್ತದೆ ಎಂದು ಸಾಂಸ್ಕತಿಕ ಚಿಂತಕ ಡಾ. ಶಶಿಧರ ನರೇಂದ್ರ ಹೇಳಿದರು.

ರಾಣಿಚೆನ್ನಮ್ಮ ನಗರದಲ್ಲಿರುವ ಧಾರವಾಡ ಕಟ್ಟೆ ಸಭಾಂಗಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ 426ನೇ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರತಿಭೆಯಾಗಿ ಗುರುತಿಸಿಕೊಂಡ ಗೋಕಾಕರು ಕವಿ, ಕಾದಂಬರಿಕಾರ, ವಿಮರ್ಶಕ, ಚಿಂತಕ, ಶಿಕ್ಷಣ ತಜ್ಞ ಹಾಗೂ ಆಡಳಿತಗಾರರಾಗಿ ಅಪಾರ ಸೇವೆ ಸಲ್ಲಿಸಿದ ಮಹನೀಯರು ಎಂದರು.

ಮಾನವನ ಬದುಕು, ಸಂಸ್ಕೃತಿ, ಧರ್ಮ, ಸಮಾಜ ಮತ್ತು ಆಧ್ಯಾತ್ಮಿಕತೆಯ ಕುರಿತು ಅವರು ಆಳವಾದ ಚಿಂತನೆ ನಡೆಸಿದ್ದಾರೆ. ಅವರ ಪ್ರಸಿದ್ಧ ಮಹಾಕಾವ್ಯ ‘ಭಾರತ ಸಿಂಧು ರಶ್ಮಿ’ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ವೈಭವವನ್ನು ಪ್ರತಿಬಿಂಬಿಸುವ ಮಹತ್ವದ ಕೃತಿಯಾಗಿದೆ. ಈ ಕೃತಿಗಾಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು ಎಂದರು.

ಕನ್ನಡ ಪ್ರಾಧ್ಯಾಪಕ ಡಾ. ಚಿದಾನಂದ ಮಾಸನಕಟ್ಟಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕಟ್ಟೆಯ ಪ್ರೊ. ಬಸವರಾಜ ಡೋಣೂರ, ವಿ.ಕೃ. ಗೋಕಾಕರು ಒಬ್ಬ ಯುಗಪ್ರವರ್ತಕ ಲೇಖಕರು. ಮಹಾಕಾವ್ಯ ರಚನೆಗೆ ಕವಿಗೆ ಒಂದು ದೊಡ್ಡ ಕನಸು, ವಿಶಾಲವಾದ ಜೀವನದೃಷ್ಟಿ ಹಾಗೂ ಸುದೀರ್ಘ ಸಿದ್ಧತೆ ಅಗತ್ಯ. ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚಿಸಿದ ಇಬ್ಬರು ಮಹತ್ವದ ಕನ್ನಡ ಲೇಖಕರೆಂದರೆ ವಿ.ಕೃ. ಗೋಕಾಕರು ಮತ್ತು ಕುವೆಂಪು ಎಂದರು.

ಪ್ರೊ. ಪೊಲೀಸ್‌ಪಾಟೀಲ್, ಪ್ರೊ. ಮುಕುಂದ ಲಮಾಣಿ, ಪ್ರತೀಕ್ ಕೆರೂರ, ಮುತ್ತು ಮಠಪತಿ, ಮನೋಜ್ ಉಪಸ್ಥಿತರಿದ್ದರು. ಡಾ. ವಿಜಯಲಕ್ಷ್ಮೀ ದಾನರಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದ ಮಾರ್ಗಸೂಚಿಯಂತೆ ಬರ ಘೋಷಣೆ: ಸಿಎಂ
ಕ್ಷೇತ್ರದಲ್ಲಿ 21 ಕೆಪಿಎಸ್ ಶಾಲೆಗಳ ಮಂಜೂರು-ಶಾಸಕ ಪಠಾಣ