ಕೊಟ್ಟೂರೇಶ್ವರ ದೇವಸ್ಥಾನದ ಗೋಪುರ ಕಳಸಕ್ಕೆ ಬಂಗಾರ ಲೇಪನ ಕಾರ್ಯ

KannadaprabhaNewsNetwork |  
Published : May 30, 2025, 12:13 AM IST
ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠಕ್ಕೆ ವಿಜಯನಗರ ಜಿಲಾಧಿಕಾರಿ ಎಂ.ಎಸ್. ದಿವಾಕರ್‌ ಬೇಟಿ ನೀಡಿ ದೇವಸ್ಥಾನದ ಪ್ರಗತಿ ಪರಿಶೀಲನೆ ವಿವರ ಪಡೆದುಕೊಂಡರು. | Kannada Prabha

ಸಾರಾಂಶ

ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಜಿಲ್ಲೆಯಲ್ಲಿನ ಹೆಸರಾಂತ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠದ ಗೋಪುರ ಮೇಲಿನ ಬೃಹತ್‌ ಕಳಸ ಶಿಥಿಲಗೊಂಡ ಹಿನ್ನೆಲೆ ಅದನ್ನು ಬದಲಾಯಿಸಬೇಕೆಂಬ ಭಕ್ತರ ಅಪೇಕ್ಷೆಯ ಮೇರೆಗೆ ಇದೀಗ 9.5 ಅಡಿ ಎತ್ತರದ ತಾಮ್ರದ ನೂತನ ಕಳಸ ಸಿದ್ದಗೊಂಡಿದ್ದು ಅದಕ್ಕೆ ಬಂಗಾರದ ಲೇಪನ ಮಾಡಿದ ನಂತರ ಎರಡು ತಿಂಗಳಲ್ಲಿ ಕಳಸವನ್ನು ಗೋಪುರ ಮೇಲೆ ಅಳವಡಿಸಿಲು ಸಿದ್ಧತೆ ಕೈಗೊಂಡಿದ್ದೇವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.

ಅಮಾವಾಸ್ಯೆಯ ನಿಮಿತ್ತ ಮಂಗಳವಾರ ಇಲ್ಲಿನ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಧಾರ್ಮಿಕ ದತ್ತಿ ಇಲಾಖೆಯಿಂದ 105 ಕೆಜಿ ಗಾತ್ರದ ಬೃಹತ್‌ ಕಳಸವನ್ನು ಭಕ್ತರು ನೀಡಿದ ತಾಮ್ರದ ಕಳಸವನ್ನು 100 ಗ್ರಾಂ ಬಂಗಾರ ಬಳಸಿ ಲೇಪನಗೊಳಿಸುವ ಕಾರ್ಯ ಕೈಗೊಳ್ಳಲಾಗಿತ್ತು ಆದರೆ ಭಕ್ತರು ಪೂರ್ಣ ಪ್ರಮಾಣದಲ್ಲಿ ಕಳಸವನ್ನು ಬಂಗಾರ ಲೇಪನ ಗೊಳಿಸಲು 1 ಕೆಜಿ ಬಂಗಾರವನ್ನು ಉಪಯೋಗಿಸಲು ಆಪೇಕ್ಷೆ ಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ 1 ಕೆಜಿ ಬಂಗಾರವನ್ನು ಭಕ್ತರಿಂದ ಸಂಗ್ರಹಿಸಿ ಕಳಸಕ್ಕೆ ಲೇಪನಗೊಳಿಸಿ ನಂತರ ಕಳಸದ ಆರೋಹಣ ಕಾರ್ಯ ಕೈಗೊಳ್ಳಲಾಗುವುದು. ಶ್ರಾವಣ ಮಾಸದ ನಂತರ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ದತೆ ಕೈಗೊಳ್ಳಲಾಗಿದೆ ಎಂದರು.

ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನದ ಬಲಭಾಗದ ರಸ್ತೆಯಲ್ಲಿ 83.50 ಲಕ್ಷ ವೆಚ್ಚದಲ್ಲಿ ಬೃಹತ್‌ ಶೆಲ್ಟರ್‌ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾರ್ಯಕ್ಕಿರುವ ಬಂದಿರುವ ಎಲ್ಲಾ ತೊಂದರೆಗಳನ್ನು ನಿವಾರಿಸಿ ಕೂಡಲೇ ಭಕ್ತರಿಗೆ ನೆರಳು ಹೊದಗಿಸುವ ಶೆಲ್ಟರ್‌ ಕಾರ್ಯವನ್ನು ಪೂರ್ಣ ಮುಗಿಸುವಂತೆ ಸೂಚಿಸಿದರು.

ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಜರುಗುವ ತೇರುಬಯಲು ಪ್ರದೇಶದ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆಯನ್ನಾಗಿಸುವ ಪ್ರಸ್ತಾಪ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದ್ದು, ಸಾಧಕ ಬಾಧಕಗಳನ್ನು ಯೋಚಿಸಿ ಮುಂಬರುವ ರಥೋತ್ಸವದ ವೇಳೆಗೆ ಸಿಸಿ ರಸ್ತೆ ಕಾರ್ಯವನ್ನು ಸಂಪೂರ್ಣಗೊಳಿಸಲಾಗುವುದು. ದೇವಸ್ಥಾನದಲ್ಲಿ ಭಕ್ತರಿಗೆ ದಿನ ನಿತ್ಯ ಪ್ರಸಾದ ಸೇವೆಯನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಮಾಡಲಾಗುತ್ತಿದ್ದು, ಪ್ರತಿ ದಿನ ಬೆಳಗ್ಗೆ 10 ಗಂಟೆ ಮತ್ತು ರಾತ್ರಿ 8 ಗಂಟೆಯಿಂದಲೇ ಆರಂಭಿಸುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಧಾರ್ಮಿಕ ದತ್ತಿ ಇಲಾಖೆಯಿಂದ ಪಟ್ಟಣಕ್ಕೆ ಆಗಮಿಸುವ ಭಕ್ತರ ಸೌಲಭ್ಯಕ್ಕಾಗಿ ಕೊಟ್ಟೂರು ಪಟ್ಟಣದ ಹರಪನಹಳ್ಳಿ, ಹಡಗಲಿ, ಉಜ್ಜಿನಿ, ಚಿರಿಬಿ ರಸ್ತೆಗಳ ಬದಿಯಲ್ಲಿನ ಸಿಎ ಸೈಟುಗಳನ್ನು ಖರೀದಿ ಮಾಡಿ ತಲಾ ಒಂದು ಯಾತ್ರಿ ನಿವಾಸವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ತಹಶೀಲ್ದಾರ್‌ ಅಮರೇಶ್‌ ಜಿ.ಕೆ., ಪಪಂ ಮುಖ್ಯಾಧಿಕಾರಿ ಎ. ನಸುರುಲ್ಲಾ, ದೇವಸ್ಥಾನದ ಇಒ ಹನುಮಂತಪ್ಪ, ಧರ್ಮಕರ್ತ ಎಂ.ಕೆ. ಶೇಖರಯ್ಯ, ಪೂಜಾ ಬಳಗದ ನಾಗಭೂಷಣ, ಅಜ್ಜನಗೌಡ ಮತ್ತಿತರರು ಇದ್ದರು.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌