ಕನ್ನಡಪ್ರಭ ವಾರ್ತೆ ದಾವಣಗೆರೆ
ಏಷ್ಯಾ ನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಸಿದ ಮೂರನೇ ದಿನ ಭಾನುವಾರ ನಡೆದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕಾ ರಂಗದವರು ಈ ರೀತಿ ಗುಡಿ ಕೈಗಾರಿಕೆಗಳಿಗೆ, ಸಣ್ಣ ಉದ್ಯಮಿಗಳಿಗೆ, ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾಡುತ್ತಿರುವ ಇದು ಆದರ್ಶದ ಕೆಲಸ. ಇಂತಹ ಸಮಾಜಮುಖಿ ಕಾರ್ಯಗಳು ಇಂತಹ ಸಂಸ್ಥೆಗಳಿಂದ ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.
ಅಂಧ ಸಂಗೀತ ಶಿಕ್ಷಕರ ನೇಮಕವಾಗಲಿ:ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಮಾತನಾಡಿ, ಅಂಧ ಸಂಗೀತ ಶಿಕ್ಷಕರ ನೇಮಕಾತಿ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸರ್ಕಾರ ಶೀಘ್ರ ಗಮನಹರಿಸಿ ರಾಜ್ಯದಲ್ಲಿ ಅಂಧ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಬೇಕು. ವಿಶೇಷವಾಗಿ ಅಂಧ ಸಂಗೀತ ಪದವೀಧರರಿಗೆ ಸರ್ಕಾರ ವಯೋಮಿತಿ ನೀಡುತ್ತಿದೆ. ಅಂತಹ ಶಿಕ್ಷಕರಿಗೆ ಜೀವನಕ್ಕೆ ಆಧಾರ ಇಲ್ಲದಂತಾಗಿದೆ. ಹಾಗಾಗಿ ಅವರಿಗೆ ಸಂಗೀತ ವೃತ್ತಿಯೇ ಜೀವನಾಧಾರ. ಸರ್ಕಾರ ಈ ಕೂಡಲೇ ಸಂಗೀತ ಶಿಕ್ಷಕರ ನೇಮಕಾತಿ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಡಿವೈಎಸ್‌ಪಿ ಶರಣಬಸವೇಶ್ವರ, ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಎಚ್. ಸಿದ್ದಲಿಂಗ ಸ್ವಾಮಿ, ವ್ಯವಸ್ಥಾಪಕ ಅಮರಯ್ಯ ಸ್ವಾಮಿ, ಅಂಧ ಶಿಕ್ಷಕ ಶ್ರೀಶೈಲ, ಸುವರ್ಣ ನ್ಯೂಸ್ ನ ವಿ.ಪಿ. ವಿಜಯಕುಮಾರ, ಬಿ.ಎಂ.ಶ್ರೀನಿವಾಸ, ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಮಹಾಂತೇಶ ಕುರಬೇಟ, ಕ್ಯಾಮರಾ ಮ್ಯಾನ್ ಕಿರಣಕುಮಾರ, ಪ್ರಸಾರಾಂಗ ವಿಭಾಗದ ಶಿವರಾಜ ಇತರರು ಇದ್ದರು.
ಇಂದು ಇಲ್ಲಿ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳು ಸುಶ್ರಾವ್ಯವಾಗಿ ವಚನ, ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನೂ ಮನರಂಜಿಸಿದ್ದಾರೆ. ಇಂತಹ ಮಕ್ಕಳಿಗೆ ಸುವರ್ಣ ವಾಹಿನಿ, ಕನ್ನಡಪ್ರಭ ಉತ್ತಮ ವೇದಿಕೆ ಕಲ್ಪಿಸಿದೆ. ಈ ಶಾಲೆ ಅಂಧ ಮಕ್ಕಳಿಗೆ ಅವಶ್ಯಕ ಇರುವ ಸಂಗೀತ ಪರಿಕರಗಳ ಖರೀದಿಗೆ ನಾನು ಸ್ವತಃ ₹25,000 ಕೊಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಘೋಷಣೆ ಮಾಡಿದರು.