ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಶ್ರೀ ಚಾಮುಂಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ದೇವಿ ಶೈಲಾಪುತ್ರಿ ಆರಾಧನೆಯೊಂದಿಗೆ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿ ಆಚರಿಸುವ 46ನೇ ದಸರಾ ಜನೋತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು.ಸ್ವ್ವಾತಂತ್ರ ಹೋರಾಟಗಾರರ ಭವನದಲ್ಲಿ ದೇವಿ ಮೂರ್ತಿಯನ್ನು ಸಕಲ ಪೂಜಾ ವಿಧಿವಿಧಾನಗಳ ಮೂಲಕ ಅರ್ಚಿಸಿ ಪ್ರತಿಷ್ಠಾಪಿಸಲಾಯಿತು.
ಹತ್ತು ದಿನಗಳ ನಡೆಯುವ ದಸರಾ ಜನೋತ್ಸವಕ್ಕೆ ವಿಘ್ನ ಎದುರಾಗದಂತೆ ದೇವಿಯನ್ನು ಶ್ರೀ ಕಾವೇರಿ ದಸರಾ ಸಮಿತಿ ಪ್ರಾರ್ಥಿಸಿತು.ಬಸ್ ನಿಲ್ದಾಣದಲ್ಲಿ ಸೈಕ್ಲೋನ್ ಡ್ಯಾನ್ಸ್ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸುವ ಮೂಲಕ 46ನೇ ಜನೋತ್ಸವಕ್ಕೆ ವಿಭಿನ್ನವಾಗಿ ಚಾಲನೆ ನೀಡಲಾಯಿತು.
ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಕಾರ್ಯದರ್ಶಿ ವರಲಕ್ಷ್ಮೀ, ಉಪಾದ್ಯಕ್ಷ ಶಿವಾಜಿ, ಕೋಶಾಧಿಕಾರಿ ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಎಂ. ಮಂಜುಳಾ, ಸಂಸ್ಕ್ರತಿ ಸಮಿತಿ ಸಂಚಾಲಕರಾದ ಪಾರುವಂಗಡ ದಿಲನ್ ಚಂಗಪ್ಪ, ಸೈಕ್ಲೋನ್ ರಮೇಶ್, ವಿಗ್ರಹದಾನಿಗಳಾದ ಎಂ.ಪಿ ಕೇಶವ ಕಾಮತ್, ಸಂಯೋಜಕರಾದ ಮನೆಯಪಂಡ ಶಿಲಾ ಬೋಪ್ಪಣ್ಣ, ಚಂದನ್ ಕಾಮತ್, ಜಪ್ಪೆಕೊಡಿ ರಾಜ ಉತ್ತಪ್ಪ, ಶೋಭಿತ್ ಪಿ.ವಿ, ಕಡೆಮಾಡ ಕುಸುಮ, ನೊರೆರ ಧನ್ಯ ರವೀಂದ್ರ, ಗುರುರಾಜ್ ಸಮಿತಿ ಮಾಜಿ ಅಧ್ಯಕ್ಷರಾದ ಕುಲ್ಲಚಂಡ ಬೋಪಣ್ಣ, ಸೆಲ್ವಿ, ಬಿ.ಎನ್ ಪ್ರಕಾಶ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಚೈತ್ರ ಬಿ. ಚೇತನ್, ಮನ್ನಕ್ಕಮನೆ ಸೌಮ್ಯ ಬಾಲು, ರಾಜೇಶ್ ಕೆ ಇದ್ದರು.ಇಂದಿನ ಕಾರ್ಯಕ್ರಮ :
ಶುಕ್ರವಾರ ಸಂಜೆ 6ಗಂಟೆಯಿಂದ ನಾಟ್ಯಮಯೂರಿ ನೃತ್ಯ ಶಾಲೆಯಿಂದ ಭರತ ನಾಟ್ಯ, ಮೈಸೂರಿನ ಸುಮ ರಾಜ್‌ಕುಮಾರ್ ಅವರಿಂದ ಮಾತನಾಡುವ ಗೊಂಬೆ, ಬಸವರಾಜ್ ಬೆಳ್ಳಾರಿ ಅವರಿಂದ ನೃತ್ಯ ಕಾರ್ಯಕ್ರಮಗಳು, ಮಂಗಳೂರು ನಂದಗೋಕುಲ ಮತ್ತು ಮೈಸೂರು ಯೂನಿಕ್ ಸಿಜ್ಹಲರ್ಸ್ ಅಕಾಡೆಮಿ ವತಿಯಿಂದ ನೃತ್ಯ ವೈಭವ ನಡೆಯಲಿದೆ.