ಗೋಣಿಕೊಪ್ಪ: ಗೋಣಿಕೊಪ್ಪಲು ಕಾವೇರಿ ದಸರಾ ಸಮಿತಿಯವರು ಆಯೋಜಿಸಿದ ದಸರಾ ಆಚರಣೆ ಸಂದರ್ಭದ ಪೂರ್ವಭಾವಿ ಸಭೆಯಲ್ಲಿ, ಕಾವೇರಿ ದಸರಾ ಸಮಿತಿ ಅಧ್ಯಕ್ಷರಾಗಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ. ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ ಹಾಗೂ ಖಜಾಂಜಿಯಾಗಿ ಜಿಲ್ಲಾ ಉಪ ವಿಭಾಗ ಅಧಿಕಾರಿಗಳ ಆದಿನ ಅಧಿಕಾರಿಯನ್ನು ನೇಮಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು. ಉಳಿದಂತೆ ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷರು ಹಾಗೂ ವಿವಿಧ ಸಮಿತಿಗಳ ಸಂಚಾಲಕರನ್ನು ಸದ್ಯದಲ್ಲೇ ನಡೆಯುವ ಸಭೆಯಲ್ಲಿ ಆಯ್ಕೆಗೊಳಿಸಲಾಗುವುದು ಎಂದು ತೀರ್ಮಾನಿಸಲಾಯಿತು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಕೇಶವ ಕಾಮತ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ಪ್ರಮುಖರಾದ ಅಜಿತ್ ಅಯ್ಯಪ್ಪ, ಮಂಜುಳಾ, ದಶಮಂಟಪ ಮಾಜಿ ಅಧ್ಯಕ್ಷರಾದ ಸಾಜಿ ಅಚ್ಚುತನ್, ದಶಮಂಟಪ ಅಧ್ಯಕ್ಷರಾದ ಚೇತನ್ ಹಾಗೂ ದಸರಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಪ್ರಮುಖರು ಇದ್ದರು.