ಜೈಲ್‌ ಜಾಮರ್‌ ತೆರವಿಗೆ ಒತ್ತಾಯಿಸಿ ನಾಳೆ ಸಂಪುಟ ಸಭೆಗೆ ವಕೀಲರ ಮುತ್ತಿಗೆ

KannadaprabhaNewsNetwork |  
Published : Sep 17, 2026, 02:45 AM IST
ಜಗದೀಶ ಶೇಣವ | Kannada Prabha

ಸಾರಾಂಶ

ನಗರದ ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್‌ ನೆಟ್‌ವರ್ಕ್ ಜಾಮರ್‌ ಅಳವಡಿಕೆಯಿಂದ ನ್ಯಾಯಾಲಯ ಸಹಿತ ಸುತ್ತಲಿನ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಅನೇಕ ಬಾರಿ ಸರ್ಕಾರದ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ, ಜೈಲ್‌ ಜಾಮರ್‌ ತೆರವಿಗೆ ಒತ್ತಾಯಿಸಿ ಸೆ.18ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುವ ವೇಳೆ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ ತಿಳಿಸಿದರು.

ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್‌ ನೆಟ್‌ವರ್ಕ್ ಜಾಮರ್‌ ಅಳವಡಿಕೆಯಿಂದ ನ್ಯಾಯಾಲಯ ಸಹಿತ ಸುತ್ತಲಿನ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಅನೇಕ ಬಾರಿ ಸರ್ಕಾರದ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ, ಜೈಲ್‌ ಜಾಮರ್‌ ತೆರವಿಗೆ ಒತ್ತಾಯಿಸಿ ಸೆ.18ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುವ ವೇಳೆ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ ತಿಳಿಸಿದರು.ಅವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.18ರಂದು ಬೆಳಗ್ಗೆ 9ಕ್ಕೆ ಮಂಗಳೂರಿನ ಕೋರ್ಟ್‌ ಆವರಣದಲ್ಲಿ ವಕೀಲರು ಒಟ್ಟು ಸೇರಿ ಅಲ್ಲಿಂದ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ. 250 ಮಂದಿ ವಕೀಲರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆ ನಡೆಸಿದರೆ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ ಎಂಬ ಅರಿವು ನಮಗಿದೆ. ಪರಿಣಾಮ ಗೊತ್ತಿದ್ದೆ ನಾವು ಪ್ರತಿಭಟನೆಗೆ ನಿರ್ಧರಿಸಿದ್ದೇವೆ. ಗೋಲಿಬಾರ್‌ ಬೇಕಾದರೆ ಮಾಡಲಿ. ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿಯುವುದಿಲ್ಲ. ಸಚಿವ ಸಂಪುಟ ಸಭೆಗೆ ಭದ್ರತೆ ನೀಡುವುದು ಸರ್ಕಾರದ ಮೊದಲ ಆದ್ಯತೆಯಾದರೆ, ಜೈಲ್‌ ಜಾಮರ್‌ ತೆಗೆಸುವುದೇ ನಮ್ಮ ಮೊದಲ ಆದ್ಯತೆ ಎಂದರು.

ಸರ್ಕಾರ ತಕ್ಷಣ ಜೈಲಿನ ಮೊಬೈಲ್‌ ಜಾಮರ್‌ ತೆರವುಗೊಳಿಸಲಿ. ಅದರ ಕ್ರೆಡಿಟ್‌ ನಮಗೆ ಬೇಡ. ಯಾರೂ ಬೇಕಾದರೂ ಕ್ರೆಡಿಟ್‌ ತೆಗೆದುಕೊಳ್ಳಲಿ. ಇದರಲ್ಲಿ ರಾಜಕೀಯವಿಲ್ಲ. ಜಾಮರ್‌ನಿಂದ ಆಗುತ್ತಿರುವ ಸಮಸ್ಯೆ ಬಗೆಹರಿದರೆ ಸಾಕು ಎಂದು ಒತ್ತಾಯಿಸಿದರು.

ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೌತಮ್‌, ಉಪಾಧ್ಯಕ್ಷ ಪ್ರವೀಣ್‌ ಅದ್ಯಪಾಡಿ, ಕೋಶಾಧಿಕಾರಿ ರೇಖಾ, ಮಹೇಶ್‌ ಜೋಗಿ, ರಾಘವೇಂದ್ರ ರಾವ್‌, ಸುಜಿತ್‌ಕುಮಾರ್‌, ಸುಂದರ ಗೌಡ, ಅಕ್ಷತಾ, ಅನಿತಾ, ತೀರ್ಥೇಶ್‌, ಜಯಪ್ರಕಾಶ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗೆ ನೀರು ಹರಿಸಿ, ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹ
ಅಗ್ನಿ ದುರಂತ: ಗಾಯಗೊಂಡಿದ್ದ ಮತ್ತಿಬ್ಬರ ಸಾವು