ಸುಂಟಿಕೊಪ್ಪ: 62ನೇ ವರ್ಷದ ಸ್ವರ್ಣ ಗೌರಿ, ಗಣೇಶೋತ್ಸವ

KannadaprabhaNewsNetwork |  
Published : Sep 17, 2026, 02:45 AM IST
ಚಿತ್ರ.1: ಪುಷ್ಪ ಅಲಂಕೃತವಾದ ಮಂಟಪದಲ್ಲಿ ಗೌರಮ್ಮನನ್ನು ಕುಳ್ಳಿರಿಸಿ ಮುಖ್ಯ ಬೀದಿಯಲ್ಲಿ ವಾಹನದ ಮೂಲಕ ಮೆರವಣಿಗೆಯಲ್ಲಿ ಸಾಗುತ್ತಿರುವುದು. 2:ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಮುಸ್ಲಿಂ ಬಾಂದವರು ಸಿಹಿ ತಿಂಡಿ ಹಾಗೂ ತಂಪುಪಾನಿಯಗಳನ್ನು ವಿತರಿಸುತ್ತಿರುವುದು. | Kannada Prabha

ಸಾರಾಂಶ

ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 62ನೇ ವರ್ಷದ ಸ್ವರ್ಣ ಗೌರಿ ಮತ್ತು ಗಣೇಶೋತ್ಸವದ ಸುಂಟಿಕೊಪ್ಪದಲ್ಲಿ ಆರಂಭವಾಯಿತು. ಪಟ್ಟೆಮನೆ ಗೌರಮ್ಮನ ಬಾವಿಯಿಂದ ಗಂಗಾಜಲವನ್ನು ತರುವುದರೊಂದಿಗೆ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮವು ವಿವಿಧ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳೊಂದಿಗೆ ಸೋಮವಾರ ಶ್ರೀರಾಮ ಮಂದಿರದಲ್ಲಿ ಶ್ರೀ ಗೌರಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 62ನೇ ವರ್ಷದ ಸ್ವರ್ಣ ಗೌರಿ ಮತ್ತು ಗಣೇಶೋತ್ಸವದ ಸುಂಟಿಕೊಪ್ಪದಲ್ಲಿ ಆರಂಭವಾಯಿತು. ಪಟ್ಟೆಮನೆ ಗೌರಮ್ಮನ ಬಾವಿಯಿಂದ ಗಂಗಾಜಲವನ್ನು ತರುವುದರೊಂದಿಗೆ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮವು ವಿವಿಧ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳೊಂದಿಗೆ ಸೋಮವಾರ ಶ್ರೀರಾಮ ಮಂದಿರದಲ್ಲಿ ಶ್ರೀ ಗೌರಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸಮಿತಿಯ ಪದಾಧಿಕಾರಿಗಳು ರಾಮ ಮಂದಿರ ದೇವಾಲಯದಿಂದ ಬೆಳಿಗ್ಗೆ 8.30 ಗಂಟೆಗೆ ಹೊರಟು ಪಟ್ಟೆಮನೆ ಗೌರಮ್ಮನ ಬಾವಿಯಿಂದ ಗಂಗಾಜಲವನ್ನು ತರುವುದರೊಂದಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಭವ್ಯ ಮಂಟಪದಲ್ಲಿ ಗೌರಮ್ಮನನ್ನು ಕುಳ್ಳಿರಿಸಿ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ರಾಮಂದಿರದಲ್ಲಿ ಬೆಳಿಗ್ಗೆ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.ಪೂಜಾ ಕೈಂಕರ್ಯಗಳನ್ನು ಅರ್ಚರಾದ ಹಾ.ಮ ಗಣೇಶ್ ಶರ್ಮಾ, ಮಂಜುನಾಥ್ ಭಟ್ ನೆರವೇರಿಸಿದರು. ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಶ್ರೀರಾಮ ಸೇವಾ ಸಮಿತಿ ಟ್ರಸ್ಟಿ ಕಾರ್ಯದರ್ಶಿ ಆಶೋಕ್‌ಶೇಟ್, ಟ್ರಸ್ಟಿ ಎ.ಲೋಕೇಶ್‌ಕುಮಾರ್,ಕೆ.ಪಿ.ಜಗನ್ನಾಥ್ ಡಿ.ನರಸಿಂಹ, ಶಾಂತರಾಂಕಾಮತ್,ಬಿ.ಎ.ಸುರೇಶ್,ಧನುಕಾವೇರಪ್ಪ, ಎ.ಎಸ್.ಸುನಿಲ್, ಸುರೇಶ್‌ಗೋಪಿ, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆಸದಾಶಿವ, ಪಟ್ಟೆಮನೆಅನಿಲ್‌ಕುಮಾರ್, ಬಿ.ಕೆ.ಮೋಹನ್, ಬಿ.ಎಸ್.ಸದಾಶಿವ ರೈ, ಶ್ರೀ.ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಸ್.ವಿಘ್ನೇಶ್, ಉಪಾಧ್ಯಕ್ಷರಾದ ಬಿ.ಕೆ.ಪ್ರಶಾಂತ್, ಸಿ.ಸಿ.ಸುನಿಲ್‌ಕುಮಾರ್,ಎ . ಗಣೇಶ್, ಪ್ರಧಾನಕಾರ್ಯದರ್ಶಿಎಚ್.ಎ.ನಿಖಿಲ್, ಖಜಾಜಿ ಪದ್ಮನಾಭ, ಪದಾಧಿಕಾರಿಗಳಾದ ಎ.ಪಾಂಡ್ಯನ್, ಹೆಚ್.ನವೀನ್, ಜಿ.ಹೃತಿಕ್, ಆರ್.ಮಣಿ, ಕೆ.ಎ.ಅಜಿತ್,ಆರ್.ಪ್ರಶಾಂತ್, ಎಸ್.ರಾಜೇಶ್, ಬಿ.ಡಿ.ಆಶ್ವಥ್, ಹೆಚ್.ಸಿ.ಯೋಗೇಶ್, ಚೇತನ್, ಆರ್.ಪುನೀತ್, ಗುಣಶೇಖರ್, ತ್ರೀಜಲ್, ಮಹೇಶ್, ದಿನೇಶ್, ಮಿಥುನ್ ಮತ್ತಿತರರಿದ್ದರು.ಕನ್ನಡ ವೃತ್ತದಲ್ಲಿ ಮುಸ್ಲಿಂ ಬಾಧವರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ , ಮುಸ್ಲಿಂ ಜಮಾತ್ ಕಾರ್ಯದರ್ಶಿ ಅಬ್ಧುಲ್ ಸಲಾಂ, ಎ.ಎಂ.ಶರೀಫ್, ಹಮೀದ್, ಶಂಷುದ್ದೀನ್, ಇಬ್ರಾಹಿಂ, ಆಶ್ರಫ್, ನಾಜರ್, ಇಲ್ಯಾಸ್, ಹಸೈನಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.ಸುಂಟಿಕೊಪ್ಪ ಪಟ್ಟಣದಲ್ಲಿ ಕಾರ್ಯಚರಿಸುತ್ತಿರುವ ಹಸಿಮೀನು ಮತ್ತು ಕೋಳಿ ಮತ್ತು ಕುರಿ ಮಾಂಸ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಮುಚ್ಚಿ ಗೌರಿ ಮೆರವಣಿಗೆ ಸಂದರ್ಭ ಸೌಹಾರ್ದತೆ ಮೆರೆದರು. ಮುಸ್ಲಿಮರಿಂದ ಸಿಹಿ ವಿತರಣೆಹಿಂದೂ ಬಾಂಧವರು ಗೌರಿ ಗಣೇಶ ಸಡಗರದಲ್ಲಿ ತೊಡಗಿಸಿಕೊಂಡಿರುವ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಕನ್ನಡ ವೃತ್ತದಲ್ಲಿ ಸ್ವರ್ಣ ಗೌರಿ ಮೆರವಣಿಗೆಯ ಸಂದರ್ಭದಲ್ಲಿ ಭಕ್ತಾದಿಗಳಿಗೆ ಸಿಹಿ ತಿಂಡಿ ಹಾಗೂ ತಂಪುಪಾನಿಯಗಳನ್ನು ವಿತರಿಸಿದರು.ಚಿತ್ರ.1: ಪುಷ್ಪ ಅಲಂಕೃತವಾದ ಮಂಟಪದಲ್ಲಿ ಗೌರಮ್ಮನನ್ನು ಕುಳ್ಳಿರಿಸಿ ಮುಖ್ಯ ಬೀದಿಯಲ್ಲಿ ವಾಹನದ ಮೂಲಕ ಮೆರವಣಿಗೆಯಲ್ಲಿ ಸಾಗುತ್ತಿರುವುದು. 2:ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಮುಸ್ಲಿಂ ಬಾಂದವರು ಸಿಹಿ ತಿಂಡಿ ಹಾಗೂ ತಂಪುಪಾನಿಯಗಳನ್ನು ವಿತರಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗೆ ನೀರು ಹರಿಸಿ, ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹ
ಅಗ್ನಿ ದುರಂತ: ಗಾಯಗೊಂಡಿದ್ದ ಮತ್ತಿಬ್ಬರ ಸಾವು