ಶುಭ ಶುಕ್ರವಾರದ ಅಂಗವಾಗಿ ಸಂತ ಅಂತೋಣಿ ದೇವಾಲಯ ವತಿಯಿಂದ ಸಂತ ಮೇರಿ ಶಾಲಾ ಸಭಾಂಗಣದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಆರಾಧಾನೆಯನ್ನು ಶುಭ ಶುಕ್ರವಾರದ ಸಾಂಘ್ಯಗಳನ್ನು ಬೆಂಗಳೂರಿನ ಧರ್ಮ ಕೇಂದ್ರದ ಪ್ರೇಮ್ ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಳಾದ ರೇ.ಫಾ. ವಿಜಯ ಕುಮಾರ್ ಪ್ರಸುತ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಶುಭ ಶುಕ್ರವಾರದ ಅಂಗವಾಗಿ ಸಂತ ಅಂತೋಣಿ ದೇವಾಲಯ ವತಿಯಿಂದ ಸಂತ ಮೇರಿ ಶಾಲಾ ಸಭಾಂಗಣದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಆರಾಧಾನೆಯನ್ನು ಶುಭ ಶುಕ್ರವಾರದ ಸಾಂಘ್ಯಗಳನ್ನು ಬೆಂಗಳೂರಿನ ಧರ್ಮ ಕೇಂದ್ರದ ಪ್ರೇಮ್ ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಳಾದ ರೇ.ಫಾ. ವಿಜಯ ಕುಮಾರ್ ಪ್ರಸುತ್ತಪಡಿಸಿದರು. ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಸುತ್ತು ಆರಾಧನೆಗಳನ್ನು ದೇವಾಲಯದ ಧರ್ಮಗುರುಗಳು ಹಾಗೂ ಕನ್ಯಾ ಸ್ತ್ರೀಯರು ನೆರವೇರಿಸಿದರು. ಕ್ರೈಸ್ತ ಬಾಂಧವರು ದೇವಾಲಯದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 2.30ಕ್ಕೆ ಪ್ರಭು ಯೇಸು ಕ್ರಿಸ್ತರು ಅನುಭವಿಸಿದ ಶಿಲುಬೆ ಯಾತನೆಯ ಸ್ಮರಣೆಯು ಸಂತ ಅಂತೋಣಿ ಶಾಲಾ ಆವರಣದಿಂದ ಆರಂಭಗೊಂಡಿತು. ಸಹನಾ ಮೂರ್ತಿ ಪ್ರಭು ಕ್ರಿಸ್ತರು ಜಗದ ರಕ್ಷಕನಾಗಿ ಹುಟ್ಟಿ ಬಂದು ಪರಸ್ಪರ ಪ್ರೀತಿ, ಶಾಂತಿ, ತ್ಯಾಗವನ್ನು ಕಲಿಸಿ ಕೊಟ್ಟು ಅದರಂತೆ ಉಸಿರಿನ ಕೊನೆಯವರೆಗೂ ಶಿಲುಬೆಯಲ್ಲಿ ಪ್ರಾಣವನ್ನು ತ್ಯಾಗ ಮಾಡುವ ಸಂದರ್ಭದಲ್ಲಿ ಶತ್ರಗಳನ್ನು ಕ್ಷಮಿಸಿ ದ್ವೇಷಿಸದೆ, ಪ್ರೀತಿಸುವ ಪರಿಪಾಠವನ್ನು ತನ್ನ ಶಿಷ್ಯರ ಮೂಲಕ ಇಡೀ ಜಗತ್ತಿಗೆ ಸಾರಿದರು.
ಭೂ ಲೋಕದಲ್ಲಿ ಮಾನವರ ರಕ್ಷಣೆಗಾಗಿ, ಮಾನವರು ಎಸಗಿದ ಪಾಪಗಳಿಗಾಗಿ ಶಿಲುಬೆಯಲ್ಲಿ ಕ್ರೂರವಾದ ನೋವು, ಕಷ್ಟ, ಹಿಂಸೆ ಹಾಗೂ ನಿಂದನೆಗಳನ್ನು ಅನುಭವಿಸುವ ಮೂಲಕ ಲೋಕದ ರಕ್ಷಣೆಯನ್ನು ಮಾಡಲಾಗಿದ್ದು, ಅದರ ಆಚರಣೆಯ ಅಂಗವಾದ ಪವಿತ್ರ ದಿನವೇ ಶುಭ ಶುಕ್ರವಾರವಾಗಿದೆ. ಶುಭ ಶುಕ್ರವಾರದ ಹಿಂದಿನ 40 ದಿನಗಳು ಕ್ರೈಸ್ತ ಬಾಂಧವರು ಉಪವಾಸ, ಪ್ರಾರ್ಥನೆ, ಭಕ್ತಿ ಸಂಗೀತ ಭಾವನೆ ಮೂಲಕ ಆರಾಧನೆ ಮಾಡುತ್ತಾರೆ. ಯೇಸು ಕ್ರಿಸ್ತನು ಮಾನವನ ಪಾಪಕ್ಕಾಗಿ ಲೋಕ ರಕ್ಷಣೆ ಮಾಡುವ ದಿಸೆಯಲ್ಲಿ ನೋವು, ಕಷ್ಟ ಯಾತನೆಗಳನ್ನು ಅನುಭವಿಸುವ ಮೂಲಕ ಮಾನವ ಕುಲವನ್ನು ಸಂರಕ್ಷಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.