ಪೌಷ್ಟಿಕಾಂಶ ಆಹಾರದಿಂದ ಉತ್ತಮ ಆರೋಗ್ಯ: ಡಾ. ಯಶೋಧಾ ಹೊಂಬಲ

KannadaprabhaNewsNetwork |  
Published : Dec 14, 2024, 12:46 AM IST
13ಡಿಡಬ್ಲೂಡಿ2ಕರ್ನಾಟಕ ಕಾಲೇಜಿನ ಕಾವೇರಿ ವಿದ್ಯಾರ್ಥಿನಿಯರ ವಸತಿ ನಿಯಮದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನೇಟರಿ ಪ್ಯಾಡ ವಿತರಿಸಲಾಯಿತು | Kannada Prabha

ಸಾರಾಂಶ

ಹದಿಹರೆಯದ ಯುವತಿಯರಲ್ಲಿ ಅನೇಕ ಆರೋಗ್ಯ ಸಮಸ್ಯೆ ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಮತೋಲನ ಆಹಾರ ಸೇವಿಸಬೇಕು. ಹಸಿರು ತರಕಾರಿ, ಹಣ್ಣು, ಕಾಳು, ಹಾಲಿನ ಉತ್ಪನ್ನ ಊಟದ ತಟೆಯಲ್ಲಿ ಇರಬೇಕು.

ಧಾರವಾಡ:

ಉತ್ತಮ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದು ವೈದ್ಯೆ ಡಾ. ಯಶೋಧಾ ಹೊಂಬಲ ಹೇಳಿದರು.

ಇಲ್ಲಿನ ಕರ್ನಾಟಕ ಕಾಲೇಜಿನ ಕಾವೇರಿ ವಿದ್ಯಾರ್ಥಿ ವಸತಿ ನಿಲಯ ಮತ್ತು ಕಾಲೇಜಿನ ಲೇಡೀಸ್ ಅಸೋಸಿಯೇಷನ್ ಸಹಯೋಗದಲ್ಲಿ ಕಾವೇರಿ ವಿದ್ಯಾರ್ಥಿನಿಯರ ವಸತಿ ನಿಲಯದ ಸಭಾಂಗಣದಲ್ಲಿ ವಿದ್ಯಾರ್ಥಿನಿಯರಲ್ಲಿ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ಸಂವಾದದಲ್ಲಿ ಮಾತನಾಡಿದರು.

ಹದಿಹರೆಯದ ಯುವತಿಯರಲ್ಲಿ ಅನೇಕ ಆರೋಗ್ಯ ಸಮಸ್ಯೆ ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಮತೋಲನ ಆಹಾರ ಸೇವಿಸಬೇಕು. ಹಸಿರು ತರಕಾರಿ, ಹಣ್ಣು, ಕಾಳು, ಹಾಲಿನ ಉತ್ಪನ್ನ ಊಟದ ತಟೆಯಲ್ಲಿ ಇರಬೇಕು. ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು.

ಇಂದು ಸಾಮಾನ್ಯವಾಗಿ ಯುವತಿಯರು ರಕ್ತಹೀನತೆಯ ಸಮಸ್ಯೆಗೆ ಒಳಗಾಗುತ್ತಿದ್ದು, ಆರೋಗ್ಯದ ಗುಟ್ಟು ಪರಿಪೂರ್ಣವಾದ ಪೋಷಕಾಂಶ ಹೊಂದಿದ ಆಹಾರ ತೆಗೆದುಕೊಳ್ಳುಬೇಕು ಎಂದರು.

ಮಹರ್ಷಿ ಟ್ರಸ್ಟ್‌ನ ಯೋಗ ಮತ್ತು ನೈಸರ್ಗಿಕ ಆಸ್ಪತ್ರೆಯ ವೈದ್ಯೆ ಸೌಮ್ಯ ಕುಕನೂರ, ವಿದ್ಯಾರ್ಥಿಗಳು ನಿತ್ಯ ಯೋಗ, ಧ್ಯಾನದಂತಹ ಚಟುವಟಿಕೆ ಅಳವಡಿಸಿಕೊಳ್ಳಬೇಕು. ನಿಸರ್ಗಕ್ಕೂ, ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕು. ಉತ್ಸಾಹಭರಿತ ಜೀವನ ಕ್ರಮಕ್ಕೆ ಯೋಗ ಮತ್ತು ನಿಸರ್ಗದಲ್ಲಿ ಪರಿಹಾರವಿದೆ ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನೇಟರಿ ಪ್ಯಾಡ್ ವಿತರಿಸಲಾಯಿತು. ಕರ್ನಾಟಕ ಕಲಾ ಕಾಲೇಜಿನ ವಿಭಾವರಿ ಕುಲಕರ್ಣಿ, ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ಸ್ಟೆಲ್ಲಾ ಸ್ಟಿವನ್, ಕಾವೇರಿ ವಸತಿ ನಿಲಯದ ಡಾ. ಅನ್ನಪೂರ್ಣ. ಎಸ್, ನೇತ್ರಾ, ಸಂಗೀತಾ ಮತ್ತು ವೀಣಾ ಇದ್ದರು.

13ಡಿಡಬ್ಲೂಡಿ2

ಕರ್ನಾಟಕ ಕಾಲೇಜಿನ ಕಾವೇರಿ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನೇಟರಿ ಪ್ಯಾಡ್‌ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ