ನಿತ್ಯ ಯೋಗದಿಂದ ಆರೋಗ್ಯ ಉತ್ತಮ: ಅವಟಿ

KannadaprabhaNewsNetwork |  
Published : Jun 18, 2024, 12:48 AM IST
ಯೋಗ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ವಿಶ್ವಕ್ಕೆ ಯೋಗ ಭಾರತ ಶ್ರೇಷ್ಠ ಕೊಡುಗೆಯಾಗಿದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ದೇಹದ ಆರೋಗ್ಯ ಉತ್ತಮವಾಗಿರಲಿದ್ದು, ಸದಾ ಚೈತನ್ಯವಾಗಿರಲಿದೆ. ಜೊತೆಗೆ ಆಯುಷ್ಯ ಕೂಡ ಹೆಚ್ಚಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ವಿಶ್ವಕ್ಕೆ ಯೋಗ ಭಾರತ ಶ್ರೇಷ್ಠ ಕೊಡುಗೆಯಾಗಿದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ದೇಹದ ಆರೋಗ್ಯ ಉತ್ತಮವಾಗಿರಲಿದ್ದು, ಸದಾ ಚೈತನ್ಯವಾಗಿರಲಿದೆ. ಜೊತೆಗೆ ಆಯುಷ್ಯ ಕೂಡ ಹೆಚ್ಚಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ ಹೇಳಿದರು.ತಾಲೂಕಿನ ಟಕ್ಕಳಕಿ ಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾರತ ಸೇವಾದಳದ ಜಿಲ್ಲಾ ಹಾಗೂ ತಾಲೂಕು ಸಮಿತಿ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಆದರ್ಶ ಶಿಕ್ಷಕರ ವೇದಿಕೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹಯೋಗದಲ್ಲಿ ವಿಶ್ವ‌ಯೋಗ ದಿನದ ಅಂಗವಾಗಿ ನಾಲ್ಕು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರೋಗಿಯು ಯೋಗದಿಂದ ನಿರೋಗಿಯಾಗಬಲ್ಲ. ಅಂತಹ ಶಕ್ತಿ ಯೋಗಕ್ಕೆ ಇದೆ. ಯೋಗ ಮಾಡಿ ನಿರೋಗಿ ಆಗಿಯಾಗುವಂತೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಡಿ.ಎಂ.ಚಲವಾದಿ ಮಾತನಾಡಿದರು.

ಯೋಗ ಶಿಕ್ಷಕರಾಗಿ ತಾಲೂಕು ಯೋಗ ಪತಂಜಲಿ ಸಮಿತಿಯ ಅಧ್ಯಕ್ಷ ಕಾಶೀನಾಥ ಅವಟಿ ಹಾಗೂ ಸೇವಾದಳ ವಲಯ ಸಂಘಟಕ ನಾಗೇಶ ಡೋಣೂರ ಸೂರ್ಯ ನಮಸ್ಕಾರ, ಪ್ರಾಣಾಯಾಮ ಹಾಗೂ ಕೆಲ ಯೋಗದ ಆಸನಗಳನ್ನು ತಿಳಿಸಿಕೊಟ್ಟರು ಮತ್ತು ಅವುಗಳ ಮಹತ್ವದ ಕುರಿತು ವಿವರಿಸಿದರು.ಆದಶ೯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಎನ್.ಯಾಳವಾರ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಅವಟಿ, ವಸತಿ ನಿಲಯದ ವೈದ್ಯ ಕಿಶೋರ್ ಇತರರು ಇದ್ದರು. ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವು ಮಡಿಕೇಶ್ವರ ನಿರೂಪಿಸಿದರು, ಕೊಟ್ರೇಶ್ ಹೆಗ್ಡಾಳ ವಂದಿಸಿದರು. ಶಿಬಿರದಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸೇವಾದಳ ಶಿಕ್ಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!