ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ತೋಟಗಾರಿಕೆಯಲ್ಲಿ ಸಮಗ್ರ ಬೇಸಾಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿ, ರೈತರು ಹೆಚ್ಚು ಇಳುವರಿ ಪಡೆಯುವ ದೃಷ್ಟಿಯಿಂದ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಪರಿಣಾಮ ಭೂಮಿ ತನ್ನ ಸತ್ವವನ್ನು ಕಳೆದುಕೊಂಡು ಬಂಜರು ಸ್ಥಿತಿ ತಲುಪುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಭೂಮಿ ರಕ್ಷಣೆ ಜೊತೆಗೆ ಮನುಷ್ಯರ ಆರೋಗ್ಯವನ್ನು ವೃದ್ಧಿಸಬೇಕೆಂದು ತಿಳಿಸಿದರು.
ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ನಿಮ್ಮ ಮನೆ ಮುಂದಿಯೇ ಬಂದು ಸೊಪ್ಪು ತರಕಾರಿಗಳನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ತೋಟಗಾರಿಕೆಯಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ ಕೇಂದ್ರ ಪುರಸ್ಕೃತ ತೆಂಗು ಅಭಿವೃದ್ದಿ ಮಂಡಳಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಕಾರ್ಯಕ್ರಮದಡಿಯಲ್ಲಿ ಪ್ರತಿ ಎಕರೆಗೆ 7 ಸಾವಿರ ಬೆಲೆಯ ಔಷಧಿ, ಗೊಬ್ಬರ, ಹಸಿರಲೆ ಬೀಜ ಸೇರಿದಂತೆ ಇತರೆ ಪರಿಕರಗಳನ್ನು ವಿತರಿಸಿದರು.
ಮಳವಳ್ಳಿ:ರಾಜ್ಯ ಪೌರ ನೌಕರರ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕು ಘಟಕದ ನಿರ್ದೇಶಕರಾಗಿ ಎಂ.ಸುಧಾಮಣಿ, ಪಳ್ಳಮ್ಮ, ಸುಮಿತ್ರಾ, ವಿ.ಶ್ರೀನಿವಾಸ್, ರೇಣುಕಯ್ಯ, ಎಸ್.ನವೀನ ಕುಮಾರ್, ಚಂದ್ರಮ್ಮ, ಶಿವರಾಜು ಅವರು ಆಯ್ಕೆಯಾದರು.ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಮಾತನಾಡಿ, ಸರ್ಕಾರದ ಎಲ್ಲ ಇಲಾಖೆಗಳಲ್ಲೂ ನೌಕರರ ಶ್ರಮದಿಂದಲೇ ಸರ್ಕಾರದ ಸಲವತ್ತುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಸಾಧ್ಯವಾಗುತ್ತಿದೆ. ಸಂಘಟನಾತ್ಮಕವಾಗಿ ಸಂಘ ಕರ್ತವ್ಯ ನಿರ್ವಹಿಸಲಿ ಎಂದು ಆಶಿಸಿದರು. ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.