ಉತ್ತಮ ನಾಯಕತ್ವದ ಬೆಳವಣಿಗೆ ಅಗತ್ಯ: ರವಿ ಹೆಗಡೆ

KannadaprabhaNewsNetwork |  
Published : Dec 25, 2025, 02:45 AM IST
ಫೋಟೊಪೈಲ್-೨೩ಎಸ್ಡಿಪಿ೨- ಸಿದ್ದಾಪುರದಲ್ಲಿ ಲಯನ್ಸ ಕ್ಲಬ್ ಸದಸ್ಯರಿಗೆ ಸಿ.ಎಲ್.ಎಲ್.ಐ. ತರಬೇತಿಯನ್ನು ನೀಡಲಾಯಿತು. | Kannada Prabha

ಸಾರಾಂಶ

ಸಮೂಹ ನಾಯಕತ್ವದ ಬೆಳವಣಿಗೆಯಲ್ಲಿ ಅನೇಕ ಅಂತರ್ಗತ ಅಂಶಗಳಿದ್ದು ಅವುಗಳನ್ನು ರೂಢಿಸಿಕೊಂಡು ಬೆಳೆದು ಬಂದಾಗ ಲಯನ್ಸ್ ಕ್ಲಬ್‌ಗಳ ಕಾರ್ಯ ನಿರ್ವಹಣೆ ಉತ್ತಮವಾಗಲು ಸಾಧ್ಯ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಲಯನ್ಸ್ ಕ್ಲಬ್ ವ್ಯಾಪ್ತಿಯಲ್ಲಿ ಉತ್ತಮ ನಾಯಕತ್ವದ ಬೆಳವಣಿಗೆ ತೀರಾ ಅಗತ್ಯ. ಅದಕ್ಕಾಗಿ ಕಾಲ ಕಾಲಕ್ಕೆ ನಡೆಯುವ ಸಿ.ಎಲ್.ಎಲ್.ಐ. ಎಂಬ ತರಬೇತಿಯನ್ನು ಹಿರಿಯ ಸದಸ್ಯರು ಹಾಗೂ ಹೊಸ ಸದಸ್ಯರು ಪಡೆದುಕೊಳ್ಳುವುದು ಅಗತ್ಯವಿದೆ. ಸಮೂಹ ನಾಯಕತ್ವದ ಬೆಳವಣಿಗೆಯಲ್ಲಿ ಅನೇಕ ಅಂತರ್ಗತ ಅಂಶಗಳಿದ್ದು ಅವುಗಳನ್ನು ರೂಢಿಸಿಕೊಂಡು ಬೆಳೆದು ಬಂದಾಗ ಲಯನ್ಸ್ ಕ್ಲಬ್‌ಗಳ ಕಾರ್ಯ ನಿರ್ವಹಣೆ ಉತ್ತಮವಾಗಲು ಸಾಧ್ಯ ಎಂದು ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ-೩೧೭ಬಿ ಮಾಜಿ ಜಿಲ್ಲಾ ಗವರ್ನರ್ ರವಿ ಹೆಗಡೆ ಹೂವಿನ್ಮನೆ ಹೇಳಿದರು.

ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಬಾಲಭವನದಲ್ಲಿ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಿ.ಎಲ್.ಎಲ್.ಐ. ವಿಭಾಗದ ಜಿಲ್ಲಾ ಸಂಯೋಜಕ ಅಶೋಕ ಹೆಗಡೆ ಶಿರಸಿ ತರಬೇತಿ ನೀಡಿ ಲಯನ್ಸ್ ಸಂಸ್ಥೆ ಯಾವಾಗಲೂ ಉತ್ತಮ ನಾಯಕತ್ವದ ಬೆಳವಣಿಗೆಗೆ ಶ್ರಮಿಸುತ್ತಿದ್ದು ಅನೇಕ ಜನಪರ ಕಾರ್ಯ ಕೈಗೊಳ್ಳುತ್ತಿದೆ. ಸೇವಾತತ್ಪರ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸಿಕೊಂಡು ಎಲ್ಲರೂ ಕ್ಲಬ್ಬಿನ ಹಂತದಲ್ಲಿ ಅಧ್ಯಕ್ಷರಾಗಿ ಹಾಗೆಯೇ ಜಿಲ್ಲಾ ಹಂತದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿಕೊಂಡು ಬರಲು ಅವಕಾಶವಿದೆ. ತನ್ಮೂಲಕ ಜವಾಬ್ದಾರಿ ಹಾಗೂ ಕರ್ತವ್ಯದ ಅರಿವನ್ನು ಹೆಚ್ಚಿಸಲು ಸಾಧ್ಯ ಎಂದರು.

ಹಿರಿಯ ಸದಸ್ಯರಾದ ಜಿ.ಜಿ. ಹೆಗಡೆ ಹಾಗೂ ಶ್ಯಾಮಲಾ ಹೆಗಡೆ ಹೂವಿನ್ಮನೆ, ಎಂ.ಆರ್. ಪಾಟೀಲ ಹೊಸೂರು, ಆರ್.ಎಂ. ಪಾಟೀಲ ಹೊಸೂರು, ನಾಗರಾಜ ಪಾಟೀಲ ಮಳವತ್ತಿ, ವೀಣಾ ಶೇಟ್, ಅನಿಲ್ ದೇವನಳ್ಳಿ, ನವೀನ ಪೈ ಇಟಗಿ, ಗಣೇಶ ಪೈ ಇಟಗಿ, ದರ್ಶನ ಶೇಟ್ ಸಿದ್ದಾಪುರ, ವಿನಾಯಕ ಕೆ.ಆರ್., ರಾಘವೇಂದ್ರ ಭಟ್, ಕುಮಾರ ಗೌಡರ್ ಹೊಸೂರು, ಆಕಾಶ ಹೆಗಡೆ ಗುಂಜಗೋಡ ಮುಂತಾದವರು ತರಬೇತಿಯಲ್ಲಿ ಭಾಗವಹಿಸಿದ್ದರು.

ಲಯನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಆರ್. ಭಟ್ಟ ಕಲ್ಲಾಳ ಸ್ವಾಗತಿಸಿದರು. ಕಾರ್ಯದರ್ಶಿ ಆಕಾಶ ಹೆಗಡೆ ಗುಂಜಗೋಡ ಧ್ವಜವಂದನೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಪೊನ್ನಣ್ಣರಿಗೆ ‘ಯುಕೊ’ ಅಭಿನಂದನೆ
ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟನೆ