ಅಧ್ಯಯನಶೀಲತೆಯಿಂದ ಮಾತ್ರ ಉತ್ತಮ ಸಾಹಿತ್ಯ

KannadaprabhaNewsNetwork |  
Published : Apr 16, 2026, 03:00 AM IST
ಸತೀಶ ಹೊಸಮನಿ | Kannada Prabha

ಸಾರಾಂಶ

ಒತ್ತಡದ ಜೀವನದಿಂದಾಗಿ ಸಾಹಿತ್ಯ ರಚನೆ ಕ್ಷೀಣಗೊಳ್ಳುತ್ತಿದೆ. ಗ್ರಂಥಗಳನ್ನು ಓದದೇ ಬರೆಯುವ ಸಾಹಿತ್ಯ ಸತ್ವಯುತವಾಗಿರುವುದಿಲ್ಲ. ಅಧ್ಯಯನಶೀಲತೆಯಿಂದ ಮಾತ್ರ ಉತ್ತಮ ಸಾಹಿತ್ಯ ಕೊಡಲು ಸಾಧ್ಯ ಎಂದು ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಲೇಖಕ ಡಾ.ಸತೀಶಕುಮಾರ ಹೊಸಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಒತ್ತಡದ ಜೀವನದಿಂದಾಗಿ ಸಾಹಿತ್ಯ ರಚನೆ ಕ್ಷೀಣಗೊಳ್ಳುತ್ತಿದೆ. ಗ್ರಂಥಗಳನ್ನು ಓದದೇ ಬರೆಯುವ ಸಾಹಿತ್ಯ ಸತ್ವಯುತವಾಗಿರುವುದಿಲ್ಲ. ಅಧ್ಯಯನಶೀಲತೆಯಿಂದ ಮಾತ್ರ ಉತ್ತಮ ಸಾಹಿತ್ಯ ಕೊಡಲು ಸಾಧ್ಯ ಎಂದು ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಲೇಖಕ ಡಾ.ಸತೀಶಕುಮಾರ ಹೊಸಮನಿ ಹೇಳಿದರು.

ಹೃದಯವಾಹಿನಿ ಮಂಗಳೂರು, ಮಂಜುನಾಥ್ ಎಜುಕೇಶನ್ ಟ್ರಸ್ಟ್ (ರಿ) ಮತ್ತು ಗೋವಾ ಕದಂಬ ಪ್ರತಿಷ್ಠಾನ ಪಣಜಿ ಸಂಯುಕ್ತವಾಗಿ ಪಣಜಿಯ ಅಶೋಕ ಪ್ಲಾಜಾ ಸಭಾಂಗಣದಲ್ಲಿ ಆಯೋಜಿಸಿದ್ದ 21ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಕ್ಕಳು ಸಾಹಿತ್ಯ ಪರಕೃತಿಗಳನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಅವರ ಗಮನವನ್ನು ಮೊಬೈಲ್ ಸಂಪೂರ್ಣವಾಗಿ ಕಿತ್ತುಕೊಂಡಿದೆ. ಬಹಳಷ್ಟು ಮಕ್ಕಳು ಮೊಬೈಲ್ ವ್ಯಸನಿಗಳಾಗುತ್ತಿರುವುದು ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು. ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ ಮಾತನಾಡಿ, ಹೊರನಾಡ ಕನ್ನಡಿಗರು ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಏಕೆಂದರೇ ಅದು ತಾಯಿನಾಡಿನೊಂದೆಗಿನ ನಂಟನ್ನು ಗಟ್ಟಿಗೊಳಿಸುವ ದಾರಿಯಾಗಿದೆ ಎಂದರು.ರಾಷ್ಟ್ರೀಯ ಕನ್ನಡ ಸಮ್ಮೇಳನ ಸಮಿತಿ ಸ್ಥಾಪಕಾಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡದ ಕಲಾವಿದರು ಸಾಹಿತಿಗಳಿಗೆ 25 ವರ್ಷಗಳಿಂದ ದೇಶ ವಿದೇಶಗಳಲ್ಲಿ 10,000ಕ್ಕೂ ಹೆಚ್ಚು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದೇವೆ. ಈ ಸಾಧನೆಗೈದ ಕರ್ನಾಟಕದ ಏಕೈಕ ಸಂಘಟನೆ ನಮ್ಮದು. ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಮುಂತಾದ ದಿಗ್ಗಜರು ವೇದಿಕೆಗೆ ಶೋಭೆ ತಂದಿದ್ದಾರೆ. ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾದವರು ಮುಂದಿನ ವರ್ಷಗಳಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಲು ಪರಿಗಣಿಸಲ್ಪಡುತ್ತಾರೆ ಎಂದರು.ಡಾ.ಸತೀಶ ಕುಮಾರ ಹೊಸಮನಿ ಸ್ವರಚಿತ ಹಸಿರು ಹೊನ್ನು ಮತ್ತು ಶರಣ ಸಂಸ್ಕೃತಿ ಕೃತಿ ಗಣ್ಯರು ಬಿಡುಗಡೆ ಮಾಡಿ ಕೃತಿಯ ಲೇಖಕರನ್ನು ಅಭಿನಂದಿಸಿದರು.ಪ್ರತಿ ಲೋಕಾರ್ಪಣೆ ಮತ್ತು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಮ್ಮೇಳನ ಅಧ್ಯಕ್ಷ ಡಾ.ಸುಬ್ರಮಣಿ (ಪಲ್ಲವಿ ಮಣಿ), ಪ್ರೊ.ಪ್ರಭುಲಿಂಗ ದಂಡಿನವರ, ಮಂಗಳೂರಿನ ಎಸ್.ಕೆ.ಮುನ್ಸಿಪಲ್ ಎಂಪ್ಲಾಯಸ್ ಯೂನಿಯನ್‌ನ ಮಾಜಿ ಅಧ್ಯಕ್ಷ ಶಿವರಾಜ್ ಪಾಂಡೇಶ್ವರ್, ಮಂಗಳೂರಿನ ಕರಾವಳಿ ಲಯನ್ಸ್ ಅಧ್ಯಕ್ಷ ರಿಯಾಜ್, ರಾಯಚೂರಿನ ಕಲಾ ಸಂಕುಲ ಪ್ರಧಾನ ಕಾರ್ಯದರ್ಶಿ ಮಾರುತಿ ಬಡಿಗೇರ ಉಪಸ್ಥಿತರಿದ್ದರು.ಹೃದಯವಂತರು ಪ್ರಶಸ್ತಿ ಪ್ರದಾನ:

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಶೈನಿ ಗ್ರೇಸ್, ರುದ್ರಯ್ಯ ಸ್ವಾಮಿ ಹಿರೇಮಠ, ಬಸವರಾಜ.ಎಚ್, ಭೀಮವ್ವ ಬೆಲ್ಲದಬಾಗೆವಾಡಿ ಅವರಿಗೆ ಹೃದಯವಂತರು ಪ್ರಶಸ್ತಿ-2026 ಪ್ರದಾನ ಮಾಡಲಾಯಿತು. ಕರ್ನಾಟಕದಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ ನೀಡಿದರು. ಅಂತಾರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರಿಂದ ನಗೆ ಹೊನಲು ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡದಲ್ಲಿ ತೇಲಿಸಿತು. ಶ್ರೀಸಾಯಿ ರಾಮನ ಕಲಾಕೇಂದ್ರ ತುಮಕೂರು, ಭಾರ್ಗವಿ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಬೆಂಗಳೂರು ಹಾಗೂ ರತಿಕ ಹಡಗಲಿ ಮತ್ತು ತಂಡ ಧಾರವಾಡ ಇವರಿಂದ ಉಳ್ಳಾಲ ಅಬ್ಬಕ್ಕ ರಾಣಿ ನೃತ್ಯ ರೂಪಕ, ಭರತನಾಟ್ಯ ಮತ್ತು ಜಾನಪದ ನೃತ್ಯಗಳು ಮನಮೋಹಕವಾಗಿ ಮೂಡಿ ಬಂದವು. ಮಂಗಳೂರಿನ ಆಫೀಸರ್ ಕ್ಲಬ್‌ನ ಕರೋಕೆ ತಂಡ ಗಾಯಕರಾದ ನಾಗರಾಜು.ಆರ್.ಬಿ, ಶಿವರಾಜ ಪಾಂಡೇಶ್ವರ, ಶಂಸುದ್ದೀನ್, ಜಗದೀಶ್ ಪೖ, ರಿಯಾಜ್ ಮಂಗಳೂರು, ಸಂತೋಷಿ ರಾಯಚೂರು, ಚಿತ್ರ ಕಲಾವಿದೆ ಹೇಮಾ ಪಾಟೀಲ್ ಅವರು ನಡೆಸಿಕೊಟ್ಟ ಸ್ವರ -ಕುಂಚ- ಚಿತ್ರ ಕಾರ್ಯಕ್ರಮ ಸಭೆಯನ್ನು ಮಂತ್ರ ಮುಗ್ಧಗೊಳಿಸಿತು. ಅಮೂಲ್ಯ ಸುಜಿತ್ ಮತ್ತು ಅನು ಆನಂದ್ ಅವರ ಸೆಮಿ ಕ್ಲಾಸಿಕಲ್ ಮತ್ತು ಭರತನಾಟ್ಯ ಪ್ರದರ್ಶನ ಸೊಗಸಾಗಿದ್ದವು. ಪಣಜಿ ಮಕ್ಕಳು ನಡೆಸಿಕೊಟ್ಟ ಪ್ಯಾಶನ್ ಶೋ ವರ್ಣ ರಂಜಿತವಾಗಿತ್ತು. ಪೂರ್ಣಿಮ.ಎನ್ ಮತ್ತು ಸಾಗರ್.ಟಿ.ಎಸ್ ಸಮ್ಮೇಳನದ ನಿರೂಪಣೆ ನೆರವೇರಿಸಿದರು.ಕರ್ನಾಟಕ ಸರ್ಕಾರ ಶಾಲಾ ಮಕ್ಕಳಿಗೆ ಶಾಲೆಯ ಒಳಗಡೆ ಮೊಬೈಲ್ ಬಳಕೆ ನಿಷೇಧಿಸಿದೆ. ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬ ಘೋಷ ವಾಕ್ಯವನ್ನು ಪ್ರಚಾರ ಮಾಡುತ್ತಿದೆ. ಸರ್ಕಾರದ ಈ ಪ್ರಯತ್ನ ಸಫಲವಾಗಲು ವಿದ್ಯಾರ್ಥಿಗಳ ತಂದೆ-ತಾಯಿಗಳ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

-ಡಾ.ಸತೀಶಕುಮಾರ ಹೊಸಮನಿ,

ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಂಚಿತ, ದುರ್ಬಲ ವರ್ಗಗಳ ಧ್ವನಿ ಅಂಬೇಡ್ಕರ್‌
ರೈತರ ವಿವಿಧ ಸಮಸ್ಯೆ ಈಡೇರಿಸಲು ಅಗ್ರಹ