ಮುಕುಂದ ರಾವಂದೂರು
ಪಿರಿಯಾಪಟ್ಟಣ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ತಾಲೂಕಿನ ಪ್ರಮುಖ ಬೆಳೆಯಾದ ತಂಬಾಕು ನಾಟಿ ಮಾಡಲು ರೈತರು ಮುಂದಾಗಿದ್ದಾರೆ. ವಾಡಿಕೆಯಂತೆ ಏಪ್ರಿಲ್ ತಿಂಗಳ ಕೊನೆಯ ದಿನಗಳಲ್ಲಿ ಭರಣಿ ಮಳೆ ಹುಟ್ಟುತ್ತಲೇ ತಂಬಾಕು ರೈತರು ತಮ್ಮ ಕೃಷಿ ಚಟುವಟಿಕೆಗಳತ್ತ ಮುಖ ಮಾಡುತ್ತಿದ್ದುರು, ಆದರೆ ಈ ಬಾರಿ ಬರಗಾಲದಿಂದಾಗಿ ಭರಣಿ ಮಳೆ ರೈತರನ್ನು ಚಿಂತೆಗೆ ದೂಡಿತ್ತು, ಕೃತಿಕಾ ಮಳೆಯ ಅಬ್ಬರದಿಂದಾಗಿ ರೈತರ ಮುಖದಲ್ಲಿ ಸಂತಸ ಮನೆ ಮಾಡಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳಾದ ರಾವಂದೂರು, ದೊಡ್ಡ ಬೇಲಾಳು, ಕಂಪಲಾಪುರ, ಹಿಟ್ನೆ ಹೆಬ್ಬಾಗಿಲು, ರಾಮನಾಥತುಂಗ ಸೇರಿದಂತೆ ಆನೇಕ ಗ್ರಾಮಗಳಲ್ಲಿ ಸತತವಾಗಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದ ತಂಬಾಕು ರೈತನು ಸಂತಸ ವ್ಯಕ್ತಪಡಿಸುತ್ತಾ ಮುಂಗಾರಿನ ಸಿಂಚನದೊಂದಿಗೆ ತಂಬಾಕು ನಾಟಿ ಚುರುಕು ಮಾಡಿದ್ದಾನೆ.ಆದರೆ ತಾಲೂಕಿನ ವಿವಿಧಡೆ ಅತಿ ಹೆಚ್ಚು ಮಳೆಯಾಗಿದ್ದು, ನಾಟಿ ಮಾಡಿದ ಹೊಗೆ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿ, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಾಣಿಜ್ಯ ಬೆಳೆ ತಂಬಾಕು ಪೂರ್ವ ಮುಂಗಾರು ವರ್ಷುಧಾರೆ ಸಕಾಲಕ್ಕೆ ಸುರಿಯದಿದ್ದರಿಂದ ಈ ಬಾರಿ ಬಹುತೇಕ ಬೆಳೆಗಾರರಿಗೆ ಮಳೆಯಾಶ್ರಿತ ಬೆಳೆಯಾದ ತಂಬಾಕಿನ ನಾಟಿಗೆ ಅವಕಾಶ ಸಿಕ್ಕಿರಲಿಲ್ಲ, ಆದರೆ ಕೃತಿಕ ಮಳೆಯ ಸಿಂಚನದಿಂದ ಸಂತಸಗೊಂಡಿರುವ ತಂಬಾಕು ರೈತ ಶೇ. 80ರಷ್ಟು ನಾಟಿ ಕಾರ್ಯ ಪೂರ್ಣಗೊಳಿಸಿದ್ದಾನೆ.
ತಂಬಾಕು ನಾಟಿ ಮಾಡಲು ಕೆಲಸಗಾರರು ಕೂಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೂರು ಪಟ್ಟು ಹೆಚ್ಚಳವಾಗಿದ್ದು, ಹೀಗೆ ಮುಂದುವರೆದರೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಂಬಾಕು ಬೆಳೆ ಕೈಬಿಡಬೇಕಾಗುತ್ತದೆ ಎಂದು ತಂಬಾಕು ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ತಂಬಾಕು ಬೆಲೆ ಹೆಚ್ಚಳದಿಂದ ತಂಬಾಕು ಕೃಷಿಗೆ ಸಂಕಷ್ಟ: