ಕೊಪ್ಪದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

KannadaprabhaNewsNetwork |  
Published : May 06, 2025, 12:23 AM IST
ಬಂದ್‌ ಹಿನ್ನಲೆಯಲ್ಲಿ ಬಿಕೋ ಎನ್ನುತ್ತಿರುವ ಕೊಪ್ಪ ಬಸ್‌ ನಿಲ್ದಾಣ. | Kannada Prabha

ಸಾರಾಂಶ

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂದ್‌ಗೆ ಕೊಪ್ಪ, ಜಯಪುರ, ಹರಿಹರಪುರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಲ್ಲ ವ್ಯಾಪಾರ ಸ್ಥಗಿತ । ತುರ್ತು ಸೇವೆ ಮಾತ್ರ ಕಾರ್ಯ

ಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂದ್‌ಗೆ ಕೊಪ್ಪ, ಜಯಪುರ, ಹರಿಹರಪುರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೊಪ್ಪ, ಜಯಪುರ, ಹರಿಹರಪುರ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್‌ ಸಂಚಾರ ವಿರಳವಾಗಿದ್ದು, ಖಾಸಗಿ ವಾಹನಗಳು ಮಾತ್ರ ಸಂಚಾರಕ್ಕೆ ಮುಕ್ತವಾಗಿತ್ತು. ಶಾಲಾ ಕಾಲೇಜುಗಳು ಬೇಸಿಗೆ ರಜೆ ಇದ್ದುದರಿಂದ ಬಂದ್‌ ಬಿಸಿಯಿಂದ ಹೊರಗುಳಿದವು. ಇನ್ನುಳಿದಂತೆ ಹಣ್ಣು, ತರಕಾರಿ, ಬೇಕರಿ ಹೋಟೆಲ್ ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟು ಬಂದ್‌ ಮಾಡಲಾಗಿತ್ತು. ವೈದ್ಯಕೀಯ ಸೇವೆ ಮತ್ತು ಮೆಡಿಕಲ್ ಶಾಪ್ ಮತ್ತು ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಣೆಯಲ್ಲಿತ್ತು.

ಕೊಪ್ಪ ಬಸ್ ನಿಲ್ದಾಣದ ಅವರಣದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್‌, ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಅವರ ಮೇಲೆ ಕನಿಷ್ಠ ಪ್ರಕರಣಗಳನ್ನು ಹಾಕಿ ಬಿಡುವ ಕೆಲಸ ನಡೆಯುತ್ತಿದೆ ಎಂದರು.

ಗಣೇಶ ಮೂರ್ತಿಗಳ ಮೆರವಣಿಗೆಯ ಮೇಲೆ, ಚಪ್ಪಲಿ ಎಸೆಯುತ್ತಾರೆ. ಇವರು ಮದರಸಾದಲ್ಲಿ ಮುಲ್ಲಾ ಹೇಳಿದ ಪಾಠ ಕೇಳಿಕೊಂಡು ರೋಡ್‌ನಲ್ಲಿ ತಲ್ವಾರ್ ಜಳಪಿಸುವ ಜಿಹಾದಿಗಳ ಮನೆಯಲ್ಲಿ ನಮ್ಮ ಆಳುವ ಸರ್ಕಾರ ಮಂಡಿಯೂರಿ ಕುಳಿತಿದೆ ಎಂದು ಟೀಕಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಕೊಪ್ಪ, ಹೋಬಳಿ ಕೇಂದ್ರಗಳಲ್ಲೂ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!