ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಶಾಲಾ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಉತ್ತಮ ಪಾಠ, ಪ್ರವಚನಗಳನ್ನು ಮಾಡಿ ಶಿಸ್ತುಬದ್ಧ ಕಲಿಕೆಯಿಂದ ಮಾತ್ರ ವಿದ್ಯಾರ್ಥಿಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.ನಗರದ ಹೊರವಲಯದಲ್ಲಿರುವ ಸಮಾನತಾ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ 2042 - 25 ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ಪಡಿಸಲು ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಾರದೆ ಇರುವುದು ತಮಗೆ ತುಂಬಾ ಬೇಸರ ತಂದಿದೆ. ಈ ಕುರಿತು ಕಳೆದ ಕೆಡಿಪಿ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆದ ಸಂದರ್ಭದಲ್ಲಿ ಕೆಲ ಮಿತ್ರರು, ಕೆಲ ಶಿಕ್ಷಕರು ಶಾಲೆಗೆ ಸರಿಯಾಗಿ ಹಾಜರಾಗದೆ ಕರ್ತವ್ಯ ಲೋಪವೆಸಗುತ್ತಿದ್ದಾರೆ ಎಂದು ದೂರಿದರು, ಇದಕ್ಕೆ ತಾವು ಪ್ರತಿಕ್ರಿಯಿಸಿ ಅಂತಹ ಶಿಕ್ಷಕರು ಸಮಾಜಕ್ಕೆ ಮಾರಕವಾಗುತ್ತಾರೆ, ಈ ರೀತಿಯಲ್ಲಿ ಕರ್ತವ್ಯ ಲೋಪವೆಸುಗುವ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದೆ ಎಂದರು.ಶಿಕ್ಷಕ, ವಿದ್ಯಾರ್ಥಿಗೆ ಸನ್ಮಾನ
ಆದರೆ ಇದನ್ನೇ ಬೇರೆ ರೀತಿ ಅರ್ಥ ಬರುವ ರೀತಿಯಲ್ಲಿ ಪತ್ರಕರ್ತನೊಬ್ಬರು ತಿರುಚಿ ವರದಿ ಮಾಡಿದ್ದು ತಮಗೆ ಬೇಸರ ತಂದಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳಿಸುವ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.ತಾಲ್ಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳೆಲ್ಲರೂ ಬಡತನದಿಂದ ಜೀವನ ಸಾಗಿಸುತ್ತಿರುವ ಸಾಮಾನ್ಯ ಕುಟುಂಬದವರು ಆದ್ದರಿಂದ ಇದನ್ನು ಮನಗೊಂಡ ನಾನು ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಅನೇಕ ಕಾರ್ಯಕ್ರಮಳನ್ನು ನಡೆಸಿ ಪ್ರೋತ್ಸಾಹ ನೀಡಿತ್ತಿದ್ದು ಸಹಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವುದಾಗಿ ಎಂದರು.ಆತ್ಮಸಾಕ್ಷಿಯಾಗಿ ಬೋಧಿಸಿ
ಶ್ರೀ ರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸ್ವಾಮೀಜಿ ಮಾತನಾಡಿ, ಶಿಕ್ಷಕರು ತಮ್ಮ ಮಕ್ಕಳಿಗೆ ಹಾಗೂ ತಾವು ಪಾಠ ಮಾಡುವ ಶಾಲೆಯ ಮಕ್ಕಳಿಗೆ ಭೇದಭಾವ ಮಾಡದೇ ಆತ್ಮಸಾಕ್ಷಿಯಾಗಿ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು. ನಗರದ ಹೊರವಲಯದಲ್ಲಿರುವ ಸಮಾನತಾ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ 2042 - 25 ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ಪಡಿಸಲು ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಶಿಕ್ಷಕ ಒಂದು ಸಂಸ್ಥೆ ಇದ್ದಂತೆ
ಒಳ್ಳೆಯ ಪಾಠ ಮಾಡುವ ಶಿಕ್ಷಕರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ, ಒಬ್ಬ ಶಿಕ್ಷಕ ಒಂದು ಸಂಸ್ಥೆ ಇದ್ದಂತೆ, ಸಂಸ್ಕಾರ ನಮ್ಮ ಬಂಡವಾಳ, ಎಲ್ಲಾ ಜಾತಿಯಲ್ಲೂ ಜ್ಞಾನಿಗಳಿದ್ದಾರೆ, ಶಿಕ್ಷಕನ ಗುಣಗಳು ಮಕ್ಕಳಿಗೆ ಮಾನಸಿಕ ಪರಿಣಾಮ ಬೀರುತ್ತವೆ. ಶಿಕ್ಷಕರ ಕ್ಷೇತ್ರ ಅದ್ಬುತವಾದದ್ದು, ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಿ, ನಿಮ್ಮ ಪ್ರಪಂಚ ನಿಮ್ಮ ತರಗತಿ ಮತ್ತು ನಿಮ್ಮ ಮಕ್ಕಳು, ಮಕ್ಕಳ ಶ್ರೇಯಸ್ಸನ್ನು ಬರೆಯಿರಿ, ಮಕ್ಕಳನ್ನು ಕಾಪಾಡಿ ಸಮಾಜವನ್ನು ಉಳಿಸಿ ಎಂದು ಹೇಳಿದರು.ಮುಖ್ಯ ಶಿಕ್ಷಕರಿಗೆ ಅಭಿನಂದನೆ2023-24ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿ ಮತ್ತು ಪಿ.ಯು.ಸ ಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಿರುವ ಶಾಲಾ ಕಾಲೇಜು ಮುಖ್ಯ ಶಿಕ್ಷಕ್ಷಕರಿಗೆ ಗೌರವಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸಿ ಸನ್ಮಾನಿಸಲಾಯಿತು.
ಇದೇ ವೇಳೆ ತಹಸೀಲ್ದಾರ್ ಮಹೇಶ್.ಎಸ್.ಪತ್ರಿ, ತಾ.ಪಂ ಇಒ ಹೊನ್ನಯ್ಯ, ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್.ಮಂಜುನಾಥ, ಪ್ರಾಂಶುಪಾಲ ಆದಿಶೇಷರಾವ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.