ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.79.91 ಫಲಿತಾಂಶ ಬಂದಿದ್ದು, ಈ ಸಾಲಿನಲ್ಲಿ ಶೇ.87.62 ಫಲಿತಾಂಶ ಪಡೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 17532 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15361 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 10,123 ಬಾಲಕಿಯರಲ್ಲಿ 9432 ಅಂದರೆ ಶೇ.93 ಬಾಲಕಿಯರು ಪಾಸಾಗಿದ್ದಾರೆ. ಪರೀಕ್ಷೆ ಬರೆದ 7409 ಬಾಲಕರಲ್ಲಿ 5929 ಬಾಲಕರು ಅಂದರೆ ಶೇ.81 ಬಾಲಕರು ಪಾಸಾಗಿದ್ದಾರೆ ಎಂದರು.ಕಲಾ ವಿಭಾಗದಲ್ಲಿ 3637ರಲ್ಲಿ 2701, ವಾಣಿಜ್ಯ ವಿಭಾಗದಲ್ಲಿ 5865ರ ಪೈಕಿ 5139, ವಿಜ್ಞಾನ ವಿಭಾಗದಲ್ಲಿ 8030ರಲ್ಲಿ 7521 ಪಾಸಾಗಿದ್ದಾರೆ. ನಗರ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 10084 ವಿದ್ಯಾರ್ಥಿಗಳಲ್ಲಿ 8721 ಹಾಗೂ ಗ್ರಾಮೀಣ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 7448 ವಿದ್ಯಾರ್ಥಿಗಳಲ್ಲಿ 6640 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲೂಕುವಾರು ತೀರ್ಥಹಳ್ಳಿ ತಾಲೂಕು ಉನ್ನತಶ್ರೇಣಿ 381, ಪ್ರಥಮ ದರ್ಜೆ 519, ದ್ವಿತೀಯ ದರ್ಜೆ 121, ಪಾಸು 26, ಶೇ. 93.73 ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹೊಸನಗರ ಉನ್ನತ ಶ್ರೇಣಿ 177, ಪ್ರಥಮ ದರ್ಜೆ 469, ದ್ವಿತೀಯ ದರ್ಜೆ 103, ಪಾಸು 22 ಶೇ.93 ದ್ವಿತೀಯ ಸ್ಥಾನ. ಶಿವಮೊಗ್ಗ ಉನ್ನತ ಶ್ರೇಣಿ 2541, ಪ್ರಥಮ ದರ್ಜೆ 3379, ದ್ವಿತೀಯ ದರ್ಜೆ 522, ಪಾಸು 198, ಶೇ.91.28 ಮೂರನೇ ಸ್ಥಾನ. ಭದ್ರಾವತಿ ಉನ್ನತ ಶ್ರೇಣಿ 433, ಪ್ರಥಮ ದರ್ಜೆ 1046, ದ್ವಿತೀಯ ದರ್ಜೆ 292, ಪಾಸು 128 ಶೇ.84.55 ಫಲಿತಾಂಶ ಲಭಿಸಿದೆ. ಸಾಗರ ಉನ್ನತ ಶ್ರೇಣಿ 362, ಪ್ರಥಮ ದರ್ಜೆ 1070, ದ್ವಿತೀಯ ದರ್ಜೆ 307, 97 ಪಾಸು, ಶೇ.83.99 ಫಲಿತಾಂಶ. ಸೊರಬ ಉನ್ನತ ಶ್ರೇಣಿ 147, ಪ್ರಥಮ ದರ್ಜೆ 759, ದ್ವಿತೀಯ ದರ್ಜೆ 256, ಪಾಸು 66, ಶೇ 83.14 ಫಲಿತಾಂಶ. ಶಿಕಾರಿಪುರ ಉನ್ನತ ಶ್ರೇಣಿ 581, ಪ್ರಥಮ ದರ್ಜೆ 1066, ದ್ವಿತೀಯ ದರ್ಜೆ 240, ಪಾಸು 102 ಸೇರಿ ಶೇ.81.75 ಫಲಿತಾಂಶ ಲಭಿಸಿದೆ.
ಗೋಷ್ಠಿಯಲ್ಲಿ ಡಿಡಿಪಿಯು ಚಂದ್ರಪ್ಪ ಎಸ್.ಗುಂಡುಪಲ್ಲಿ ಉಪಸ್ಥಿತರಿದ್ದರು.
ಡೊನೇಷನ್ ಹಾವಳಿ ಎಲ್ಲೆಡೆ ಹೆಚ್ಚಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಅವರು, ಶೀಘ್ರವೇ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿ ಸರ್ಕಾರದ ನಿಯಮ ಪಾಲಿಸುವಂತೆ ಸೂಚಿಸಲಾಗುವುದು ಎಂದರು.
ಇದಲ್ಲದೆ ಪರವಾನಿಗೆ ಪಡೆಯದೆ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳ ಬಗ್ಗೆ ಕ್ರಮ ಕೈಗೊಳ್ಳಲು ಹಾಗೂ ಮೂಲಭೂತ ಸೌಲಭ್ಯ ಇಲ್ಲದೆ ಕೋಚಿಂಗ್ ಸೆಂಟರ್ ನಡೆಸುವವರಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.
ಪಲಿತಾಂಶ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯ ದ್ವಿತೀಯ ಪಿಯುಸಿ ಪಲಿತಾಂಶ ಶೇ.87 ಬಂದಿದ್ದು, ಮುಂದಿನ ವರ್ಷ ಇದನ್ನು ಶೇ.90ರ ಗಡಿ ದಾಟಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕೋಚಿಂಗ್ ಹಾಗೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾದ ವಿಷಯಕ್ಕೆ ಒತ್ತು ನೀಡಿ ಅಭ್ಯಾಸ ಮಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.