ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಆರ್ಥೋಪಿಡಿಕ್ ಸಂಘಟನೆಯ ಪ್ರಥಮ ಅಧ್ಯಕ್ಷ ಕೊಳ್ಳೇಗಾಲದ ಡಾ. ಪದ್ಮಾಕ್ಷ ಮಾತನಾಡಿ, ಸಂಘನೆಯ ಮುಖಾಂತರ ಕೀಲು ಮತ್ತು ಮೂಳೆ ತಜ್ಞರುಗಳಿಗೆ ಹೆಚ್ಚಿನ ವಿಷಯಗಳನ್ನು ತಿಳಿಸಿಕೊಡುವ ಕಾರ್ಯಗಾರಗಳನ್ನು ರೂಪಿಸಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉತ್ತಮ ಚಿಕಿತ್ಸೆಗಳನ್ನು ನೀಡಲು ಸಂಘವು ಸಹಕಾರಿಯಾಗಲಿದೆ ಎಂದರು.
ಆರ್ಥೋ ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಡಾ.ಶಿವಣ್ಣ ಮಾತನಾಡಿ, ಚಾಮರಾಜನಗರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಮಹತ್ವದ ಬೆಳವಣಿಗೆಗಳು ಹಾಗಿದೆ. ಹತ್ತು ವರ್ಷಗಳ ಹಿಂದೇ ಜಿಲ್ಲೆಯಲ್ಲಿ ಕೇವಲ ಇಬ್ಬರು, ಮೂವರು ಕೀಲು ಮತ್ತು ಮೂಳೆ ತಜ್ಞರು ಇದ್ದರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು, ಬೆಂಗಳೂರು ಆಸ್ಪತ್ರೆಗಳಿಗೆ ಕರೆದೊಯ್ಯಬೇಕಿತ್ತು. ಈಗ ಜಿಲ್ಲೆಯಲ್ಲಿ ೨೮ ಕೀಲು ಮತ್ತು ಮೂಳೆ ತಜ್ಞರು ಇದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ತಜ್ಞ ವೈದ್ಯರ ಸಂಘಟನೆಗಳು ದೊಡ್ಡ ನಗರಗಳಲ್ಲಿ ಇರುವ ಹಾಗೆ ನಮ್ಮ ಜಿಲ್ಲೆಯಲ್ಲೂ ಬರಲಿದೆ ಎಂದರು.ಕಾರ್ಯಕ್ರಮದಲ್ಲಿ ಸಂಘಟನೆಯು ಉಪಾಧ್ಯಕ್ಷ ಡಾ.ರಾಜಶೇಖರ್, ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಪ್ರಸಾದ್, ನಿವಾಸಿ ವೈದ್ಯ ಡಾ. ಎಂ. ಮಹೇಶ್, ಹಿರಿಯ ಪ್ರಾಧ್ಯಾಪಕ ಡಾ. ಮೃತ್ಯುಂಜಯ ಸಂಘನೆಯ ಖಜಾಂಚಿ ಡಾ. ರಾಘವೇಂದ್ರ ಹಾಗೂ ಚಾಮರಾಜನಗರ ಜಿಲ್ಲೆಯ ಕೀಲು ಮತ್ತು ಮೂಳೆ ತಜ್ಞರುಗಳು ಉಪಸ್ಥಿತರಿದ್ದರು.