ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಏಕಾಏಕಿ ಗೂಡ್ಸ್ ಆಟೋ ಚಕ್ರ ಬ್ರಸ್ಟ್ ಆದ ಹಿನ್ನೆಲೆ ರಸ್ತೆಯಲ್ಲಿ ಪಲ್ಟಿಯಾಗಿದೆ. ಆಟೋದಲ್ಲಿದ್ದ ಕ್ರೇಟ್‌ಗಳಲ್ಲಿ ತುಂಬಿದ ಟನ್‌ಗೂ ಹೆಚ್ಚು ಟೊಮೇಟೊ ಉದುರಿ ಹೋಗಿವೆ ಆಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾನವೀಯಯುಳ್ಳ ಮನಸ್ಸಿನ ಕೆಲವರು ಹೆದ್ದಾರಿ ಎರಡು ಬದಿಯ ವಾಹನಗಳ ನಿಲ್ಲಿಸಿ, ಹೊಡೆದು ಹೋಗದ ಟಮೇಟೋ ವನ್ನು ಒಂದೆಡೆ ಸಂಗ್ರಹಿಸಿ ಮತ್ತೆ ಟೊಮೇಟೊ ಕ್ರೇಟ್ ಗಳಿಗೆ ತುಂಬಿದರು. ಆದರೂ ನಾಲ್ಕೈದು ಕ್ರೇಟ್‌ಗಳಷ್ಟು ಟೊಮೇಟೊ ವಾಹನಗಳ ಚಕ್ರದಡಿಗೆ ಸಿಲುಕು ಹಾಳಾಗಿದೆ ಇದು ರೈತನಿಗೆ ನಷ್ಟವಾಗಿದೆ.
ಅಧಿಕ ಭಾರ ತುಂಬಿಕೊಂಡು ಪೊಲೀಸ್ ಠಾಣೆಗಳ ಮುಂದೆಯೇ ಗೂಡ್ಸ್ ಆಟೋಗಳು ತೆರಳುತ್ತಿದ್ದರೂ ಸ್ಥಳೀಯ ಪೊಲೀಸರು ಮಾತ್ರ ತುಟಿ ಬಿಚ್ಚಿಲ್ಲ. ಪೊಲೀಸರು ಇನ್ನಾದರೂ ಗಮನಹರಿಸಲಿ ಎಂಬುದು ಪ್ರವಾಸಿಗರ ಸಲಹೆಯಾಗಿತ್ತು.೨೬ಜಿಪಿಟಿ೬ಗುಂಡ್ಲುಪೇಟೆ ತಾಲೂಕಿನ ತಗ್ಗಲೂರು ಗೇಟ್ ಬಳಿ ಗೂಡ್ಸ್ ಆಟೋ ಪಲ್ಟಿ ಹೊಡೆದು ಟೊಮೇಟೊ ಹೆದ್ದಾರಿ ತುಂಬೆಲ್ಲ ಬಿದ್ದಿರುವುದು.