ಜಾರ್ಜ್‌ ಫರ್ನಾಂಡಿಸ್‌ ಜೀವನಾದರ್ಶ ಸಮಾಜಕ್ಕೆ ಮಾದರಿ: ನಳಿನ್‌ ಕುಮಾರ್‌ ಕಟೀಲ್‌

KannadaprabhaNewsNetwork |  
Published : Feb 02, 2026, 02:45 AM IST
ಜಾರ್ಜ್‌ ಫರ್ನಾಂಡಿಸ್‌ ಪುಣ್ಯ ಸ್ಮರಣೆ ಕಾರ್ಯಕ್ರಮ  | Kannada Prabha

ಸಾರಾಂಶ

ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ಮಾಜಿ ರಕ್ಷಣಾ ಮತ್ತು ರೈಲ್ವೆ ಸಚಿವ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಜಾರ್ಜ್‌ ಫರ್ನಾಂಡಿಸ್‌ ಅವರ 75ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಅಂಗವಾಗಿ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ವಾಲಿಬಾಲ್‌ ಪಂದ್ಯಾಟ ಹಾಗೂ ಜ್ಞಾನ ದೀವಿಗೆ

ಮಂಗಳೂರು: ಕೇಂದ್ರ ಮಾಜಿ ಸಚಿವ, ಸಮಾಜವಾದಿ ಚಿಂತಕ ಜಾರ್ಜ್‌ ಫರ್ನಾಂಡಿಸ್‌ ಅವರ ಜೀವನ, ಸಾಮಾಜಿಕ ಚಿಂತನೆ, ರಾಜಕೀಯ ನಡೆಗಳು ಪ್ರಸ್ತುತ ಸಮಾಜಕ್ಕೆ ಮಾದರಿಯಾದುದು. ಅಜಾತ ಶತ್ರುವಾಗಿರುವ ಜಾರ್ಜ್‌ ಅವರ ಬದ್ಧತೆ, ಕಾರ್ಯಶೈಲಿ ಬದುಕಿಗೊಂದು ದಿಕ್ಸೂಚಿಯಾಗಿದೆ ಎಂದು ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.ನಗರದ ಮಂಗಳಾ ಸ್ಟೇಡಿಯಂನ ವಾಲಿಬಾಲ್‌ ಮೈದಾನದಲ್ಲಿ ಗುರುವಾರ ಮಂಗಳೂರಿನ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ಮಾಜಿ ರಕ್ಷಣಾ ಮತ್ತು ರೈಲ್ವೆ ಸಚಿವ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಜಾರ್ಜ್‌ ಫರ್ನಾಂಡಿಸ್‌ ಅವರ 75ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಅಂಗವಾಗಿ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ವಾಲಿಬಾಲ್‌ ಪಂದ್ಯಾಟ ಹಾಗೂ ಜ್ಞಾನ ದೀವಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಾರ್ಜ್‌ ಅವರು ಸರಳ ಜೀವನವನ್ನು ನಡೆಸಿದ ಮತ್ತು ರಾಷ್ಟ್ರ ಮತ್ತು ಸಾಮಾನ್ಯ ಜನರಿಗಾಗಿ ಅವಿರತವಾಗಿ ಶ್ರಮಿಸಿದ ನಿರ್ಭೀತ ನಾಯಕ ಎಂದರು.

ಭಾರತೀಯ ಸೇನೆಯ ಕರ್ನಲ್‌ (ನಿವೃತ್ತ) ಎ. ಜಯಚಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್‌ ಡಿಸೋಜಾ, ಉದ್ಯಮಿ ಮ್ಯಾಕ್ಸಿಂ ಕ್ರಾಸ್ತಾ ಅಶೋಕನಗರ, ಪಿಡಬ್ಲ್ಯುಡಿ ಕಂ ಟ್ರಾಕ್ಟರ್‌ ಬಿ.ಎಸ್‌. ಸತೀಶ್‌ ಕುಮಾರ್‌, ಮಂಗಳೂರು ಪತ್ರಿಕಾಭವನದ ಮಾಜಿ ಅಧ್ಯಕ್ಷ ಆರ್‌. ರಾಮಕೃಷ್ಣ, ಸಿಟಿ ಅರೆನಾ ಗೇಮಿಂಗ್‌ ಸೆಂಟರ್‌ ನ ಸಿಂಥಿಯಾ ಮೊರಾಸ್‌, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಮುಖ್ಯಸ್ಥ ಫ್ರಾಂಕ್ಲಿನ್‌ ಮೋಂತೆರೋ ಇದ್ದರು.ಕಾರ್ಯಕ್ರಮದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ