ಬಯಲುಸೀಮೆ ಅಭಿವೃದ್ದಿ ಮಂಡಳಿಗೆ ಗೌರಿಬಿದನೂರು?

KannadaprabhaNewsNetwork |  
Published : Dec 15, 2024, 02:00 AM IST
ಬೆಳಗಾವಿ ಅಧಿವೇಷನದಲ್ಲಿ ಗಮನಸೆಳೆದ  ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ | Kannada Prabha

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳ ಪೈಕಿ 5 ತಾಲೂಕುಗಳು ಮಂಡಳಿ ವ್ಯಾಪ್ತಿಗೆ ಸೇರಿವೆ. ಆದರೆ ಗೌರಿಬಿದನೂರು ತಾಲೂಕನ್ನು ಮಾತ್ರ ಇದರಿಂದ ಕೈಬಿಡಲಾಗಿದೆ. ಮಂಡಳಿಗೆ ತಾಲೂಕನ್ನು ಸೇರಿಸಿದರೆ ಅಭಿವೃದ್ಧಿಗೆ ಮತ್ತಷ್ಟು ಅನುದಾನ ದೊರೆಯುತ್ತದೆ. ಆದ್ದರಿಂದ ಬಯಲುಸೀಮೆ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರಿಸಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿ ವ್ಯಾಪ್ತಿಗೆ ಗೌರಿಬಿದನೂರು ತಾಲೂಕನ್ನು ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಯೋಜನಾ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್‌ ಭರವಸೆ ನೀಡಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶದಲ್ಲಿ ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಅ‍ವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದಕ್ಕೆ ಸಂಬಂಧಿಸಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ವರದಿಯನ್ನು ತರಿಸಿಕೊಂಡು ಬಯಲುಸೀಮೆ ಮಂಡಳಿವ್ಯಾಪ್ತಿಗೆ ಸೇರಿಸಲು ಕ್ರಮ ವಹಿಸುವುದಾಗಿ ಹೇಳಿದರು.

ಮಂಡಳಿಗೆ ಗೌರಿಬಿದನೂರು ಸೇರಿಸಿಲ್ಲ

ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳ ಪೈಕಿ 5 ತಾಲೂಕುಗಳು ಮಂಡಳಿ ವ್ಯಾಪ್ತಿಗೆ ಸೇರಿವೆ. ಆದರೆ ಗೌರಿಬಿದನೂರು ತಾಲೂಕನ್ನು ಮಾತ್ರ ಇದರಿಂದ ಕೈಬಿಡಲಾಗಿದೆ. ಮಂಡಳಿಗೆ ತಾಲೂಕನ್ನು ಸೇರಿಸಿದರೆ ಅಭಿವೃದ್ಧಿಗೆ ಮತ್ತಷ್ಟು ಅನುದಾನ ದೊರೆಯುತ್ತದೆ. ಆದ್ದರಿಂದ ಬಯಲುಸೀಮೆ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಬೇಡಿಕೆ ಈಡೇರಿಲ್ಲ.ಸಾಮಾನ್ಯವಾಗಿ ಪ್ರತಿವರ್ಷ ಪ್ರದೇಶಾಭಿವೃದ್ದಿ ಮಂಡಳಿಯ ಮೂಲಕ ಸರ್ಕಾರವು ತಾಲ್ಲೂಕುಗಳಿಗೆ ಕನಿಷ್ಠ ೨-೩ಕೋಟಿಗಳನ್ನು ಅಭಿವೃದ್ದಿಗಾಗಿ ನೀಡುತ್ತದೆ. ಆದರೆ ಇಲ್ಲಿಯವರೆಗೆ ಈ ಅನುದಾನದಿಂದ ಗೌರಿಬಿದನೂರು ವಂಚಿತವಾಗಿದೆ. ಜಲಸಂಪನ್ಮೂಲಗಳ ಅಭಿವೃದ್ದಿ ಮತ್ತು ಸಂರ್ಕಷಣೆ, ಮಳೆ ಆಧಾರಿತ ಕೃಷಿ ಪದ್ದತಿಗಳಲ್ಲಿ ಮತ್ತು ಅರಣ್ಯಾಭಿವೃದ್ದಿಯಲ್ಲಿ ಭೂಸಾರ ಮತ್ತು ಜಲ ಸಂರಕ್ಷಣಾ ಕ್ರಮಗಳನ್ನು ಅಳವಡಿಸುವುದು, ತೋಟಗಾರಿಕಾ ಅಭಿವೃದ್ದಿ ಪ್ರೋತ್ಸಾಹ, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿನ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯಲಿದೆ.ರೈತರಿಗೆ ಅನುಕೂಲ:

ಮಂಡಳಿಗೆ ಸರ್ಕಾರವು ಒದಗಿಸುವ ಒಟ್ಟು ಅನುದಾನದಲ್ಲಿ ಕನಿಷ್ಠ ಶೇ 60ರಷ್ಟು ಅನುದಾನವನ್ನು ಮಣ್ಣು ಮತ್ತು ನೀರು ಸಂರ್ಕಷಣೆಗೆ ಮತ್ತು ಉಳಿದ ಅನುದಾನವನ್ನು ಇತರೆ ಅಭಿವೃದ್ದಿ ಕಾಮಗಾರಿಗಳಿಗೆ ಬಳಸಿಕೊಲ್ಳಬೇಕಾಗಿದೆ. ಗೌರಿಬಿದನೂರು ತಾಲ್ಲೂಕು ಕೃಷಿ ಪ್ರಧಾನ ತಾಲ್ಲೂಕಿನಲ್ಲಿ ಮಣ್ಣು ಮತ್ತು ನೀರಿನ ಸಂರ್ಕಷಣೆಯು ಪ್ರಮುಖವಾಗಿ ಆದರೆ ಹಳ್ಳಿಗಳು ಮತ್ತು ರೈತರಿಗೆ ಅನುಕೂಲವಾಗಲಿದೆ.

ರ ಸಮೃದ್ದವಾಗಲಿದ್ದಾರೆ. ಈ ಎಲ್ಲಾ ದೃಷ್ಠಿಯಿಂದ ಮಂಡಳಿ ವ್ಯಾಪ್ತಿಗೆ ಸೇರಿದರೆ ತಾಲ್ಲೂಕಿನ ಅಭಿವೃದ್ದಿಗೆ ಅನುಕೂಲವಾಗಲಿದೆ. ಗೌರಿಬಿದನೂರು ತಾಲ್ಲೂಕು 250ಹಳ್ಳಿಗಳೊಳಗೊಂಡ ಮಳೆ ಆಶ್ರಿತವಾದುದು ಏಕೆ ಬಯಲುಸೇಮೆ ಅಭಿವೃದ್ದಿ ಮಂಡಳಿಗೆ ಏಕೆ ಸೇರಿಸಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ